ಜಿಲ್ಲಾ ಸುದ್ದಿ

ತಡರಾತ್ರಿ ಮದ್ಯ ಪೂರೈಕೆ ಅವಧಿ ವಿಸ್ತರಣೆಗೆ ಅನುಮತಿ

Shilpa D

ಬೆಂಗಳೂರು: ನಗರದ ಪಬ್ ಮತ್ತು ಮದ್ಯ ಪೂರೈಸುವ ರೆಸ್ಟೋರೆಂಟ್‍ಗಳು ವಾರಾಂತ್ಯಗಳಲ್ಲಿ ಎಂದಿನಂತೆ ತಡರಾತ್ರಿ 1 ಗಂಟೆವರೆಗೂ ತೆರೆದಿರಲು ಅವಕಾಶ ಕಲ್ಪಿಸಲಾಗಿದೆ. ಪಬ್ ಮತ್ತು ರೆಸ್ಟೊರೆಂಟ್‍ಗಳು ವಾರಾಂತ್ಯದಲ್ಲಿ 1 ಗಂಟೆವರೆಗೂ ಕಾರ್ಯ ನಿರ್ವಹಿಸಲು ಕಳೆದ ವರ್ಷ ಸರ್ಕಾರದ ಒಪ್ಪಿಗೆ ಮೇರೆಗೆ ನಗರ ಪೊಲೀಸ್ ಆಯುಕ್ತರು ಹಾಗೂ ಅಬಕಾರಿ ಆಯುಕ್ತರು ಅನುಮತಿ ನೀಡಿದ್ದಾರೆ.

ಜೂನ್.30ಕ್ಕೆ ಈ ಅವಧಿ ಮುಕ್ತಾಯಗೊಂಡಿತ್ತು. ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಉಂಟಾಗಿರಲಿಲ್ಲ. ಅಲ್ಲದೇ, ನಗರದ ಕೆಲವೇ ರೆಸ್ಟೊರೆಂಟ್‍ಗಳು ಮಾತ್ರ ಮಧ್ಯರಾತ್ರಿವರೆಗೂ ತೆರೆದಿರುತ್ತಿತ್ತು.  ಪೊಲೀಸ್ ಇಲಾಖೆಯಿಂದಲೂ ಅವಧಿ ವಿಸ್ತರಣೆಗೆ ಯಾವುದೇ ಆಕ್ಷೇಪ ಇರಲಿಲ್ಲ. ಹೀಗಾಗಿ, ಸರ್ಕಾರ ಹಾಗೂ ಅಬಕಾರಿ ಇಲಾಖೆ ಪಬ್ ಮತ್ತು ರೆಸ್ಟೊರೆಂಟ್‍ಗಳ
ಅವಧಿ ವಿಸ್ತರಣೆಗೆ ಅವಕಾಶ ನಿರಾಕರಿಸಲಾಗಿತ್ತು. ಕಳೆದ ಒಂದು ವರ್ಷದಿಂದ ವಾರಾಂತ್ಯದಲ್ಲಿ ಪಬ್ ಮತ್ತು ರೆಸ್ಟೊರೆಂಟ್‍ಗಳಿಂದ ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಕಂಡು ಬಂದಿಲ್ಲ. ಹೀಗಾಗಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದ್ದೇವೆ. ಆದರೆ, ಅಬಕಾರಿ ಆಯುಕ್ತರು ಅವಧಿ ವಿಸ್ತರಿಸಿ ತಮ್ಮ ಆದೇಶ ಹೊರಡಿಸಬೇಕಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್  ತಿಳಿಸಿದರು. ಅವಧಿ ವಿಸ್ತರಣೆ ವಿಚಾರದಲ್ಲಿ ಸರ್ಕಾರ ಧನಾತ್ಮಕವಾಗಿದೆ. ಹೀಗಾಗಿ, ಜೂನ್.30ಕ್ಕೆ ಒಂದು ವರ್ಷದ ಅವಧಿ ಮುಗಿದಿದ್ದರೂ ಅಬಕಾರಿ ಇಲಾಖೆಯಿಂದ ಪಬ್ ಮತ್ತು ರೆಸ್ಟೊರೆಂಟ್ ಗಳು ತೆರೆದಿರಲು ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದರು.

SCROLL FOR NEXT