ಕರ್ನಾಟಕ ಹೈ ಕೋರ್ಟ್ 
ಜಿಲ್ಲಾ ಸುದ್ದಿ

ಜಾತಿ ಬಿಡುವ ತನಕ ದೇಶ ಉದ್ಧಾರ ಆಗಲ್ಲ: ಹೈಕೋರ್ಟ್ ಕಿಡಿ

ತಂದೆ ಹೆಸರು ಹೇಳುವುದು ತಪ್ಪಲ್ಲ. ಆದರೆ ಜಾತಿ ಹೆಸರನ್ನು ಹೇಳುವುದನ್ನು ತ್ಯಜಿಸುತ್ತೀರೋ ಗೊತ್ತಿಲ್ಲ. ಎಲ್ಲಿವರೆಗೂ ಜಾತಿ ಹೆಸರು ಹೇಳುವುದು ಬಿಡುವುದಿಲ್ಲವೊ.....

ಬೆಂಗಳೂರು: ತಂದೆ ಹೆಸರು ಹೇಳುವುದು ತಪ್ಪಲ್ಲ. ಆದರೆ ಜಾತಿ ಹೆಸರನ್ನು ಹೇಳುವುದನ್ನು ತ್ಯಜಿಸುತ್ತೀರೋ ಗೊತ್ತಿಲ್ಲ. ಎಲ್ಲಿವರೆಗೂ ಜಾತಿ ಹೆಸರು ಹೇಳುವುದು ಬಿಡುವುದಿಲ್ಲವೊ ಅಲ್ಲಿವರೆಗೂ ದೇಶ ಉದ್ಧಾರ ಆಗಲ್ಲ ಇದು ವ್ಯವಸ್ಥೆಯ ವಿರುದ್ಧ ಹೈಕೋರ್ಟ್ ಕಿಡಿಕಾರಿದ ಪರಿ.
ಲಂಚ ಪ್ರಕರಣವೊಂದರ ವಿಚಾರಣೆ ವೇಳೆ ದೋಷಾರೋಪ ಪಟ್ಟಿಯಲ್ಲಿ ದೂರುದಾರನ ಜಾತಿ ನಮೂದಿಸಿದ್ದನ್ನು ಗಮನಿಸಿದ ನ್ಯಾ. ವೇಣುಗೋಪಾಲ ಗೌಡ ಅವರು ಲೋಕಾಯುಕ್ತ ತನಿಖಾಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. ವಿಚಾರಣೆ ವೇಳೆ ನ್ಯಾಯಮೂರ್ತಿಗಳು `ಜಾತಿಯನ್ನು ಮನುಷ್ಯನ ಮನಸ್ಸಿನಿಂದ ದೂರ ಮಾಡಲು ಇನ್ನೆಷ್ಟು ದಿನಗಳು ಬೇಕು? ಈ ವ್ಯವಸ್ಥೆ ಮಟ್ಟಹಾಕಲು ಇನ್ನೂ 50 ವರ್ಷಗಳೇ ಬೇಕಾದಿತೇನೋ ಎಂದು ತಮ್ಮ ಆಕ್ರೋಶ ಹೊರಹಾಕಿದರು.

ವಿವಾದವೇನು?: ಲಂಚ ಸ್ವೀಕರಿಸಿದ ಅಬಕಾರಿ ಆಯುಕ್ತ ವೆಂಕಟೇಶ್ ಪದಕಿ ಎಂಬುವರ ಮೇಲೆ 2014ರಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಪದಕಿ ಬಳಿ ರೂ. 6.47 ಲಕ್ಷ ಪತ್ತೆಯಾಗಿತ್ತು. ಹೀಗಾಗಿ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದೂರು ದಾಖಲಿಸಲಾಗಿತ್ತು. ಈ ದೂರು ರದ್ದು ಕೋರಿ ಪದಕಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ದೂರುದಾರನ ಹೆಸರು ಹಾಗೂ ಜಾತಿಯ ಹೆಸರು ನಮೂದಿಸಲಾಗಿತ್ತು. ಇದನ್ನು ಗಮನಿಸಿದ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲ ಗೌಡ ಅವರು ಏಕೆ ದೂರುದಾರನ ಜಾತಿಯ ಹೆಸರನ್ನೂ ದಾಖಲೆಗಳಲ್ಲಿ ನಮೂದಿಸಲಾಗಿ ದೆ? ದೂರುದಾರನ ಹೆಸರು, ತಂದೆ ಹಾಗೂ ವಯಸ್ಸಿನ ಮಾಹಿತಿ ಉಲ್ಲೇಖಕ್ಕೆ ನಮಗೆ ಆಕ್ಷೇಪವಿಲ್ಲ. ಆದರೆ ಎಫ್ಐಆರ್ ಹಾಗೂ ದೋಷಾರೋಪ ಪಟ್ಟಿಯಲ್ಲಿ ಈ ರೀತಿ ಜಾತಿಯ ಮಾಹಿತಿಯ ಬಹಿರಂಗಪಡಿಸಲು ನಿಯಮಗಳಲ್ಲಿ ಅವಕಾಶವಿದೆಯೇ? ನಿಯಮಗಳಿದ್ದರೆ ಅದನ್ನುನನಗೆ ತೋರಿಸಿ ಎಂದು ಲೋಕಾಯುಕ್ತ ಪರ ವಕೀಲರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಪರ ವಕೀಲ ವೆಂಕಟೇಶ್ ಪಿ ದಳವಾಯಿ, ಮಾಹಿತಿ ಸಂಗ್ರಹ ಪ್ರಕ್ರಿಯೆಲ್ಲಿ ಜಾತಿಯ ಬಗ್ಗೆ ಉಲ್ಲೇಖಿಸಲಾಗುತ್ತದೆ ಹೊರತು ಉದ್ದೇಶಪೂರ್ವಕವಾಗಿ ಅಲ್ಲ. ಅಗತ್ಯವಿದ್ದರೆ ಎಫ್ಆರ್‍ಗಳಲ್ಲಿ ಜಾತಿಯ ಮಾಹಿತಿ ಉಲ್ಲೇಖಿಸುವುದನ್ನು ಸ್ಥಗಿತಗೊಳಿಸಲು ಯಪೀಠ ಆದೇಶ ಹೊರಡಿಸಬಹುದು' ಎಂದು ತಿಳಿಸಿದರು.

ನಂತರ ಚಿಕ್ಕಮಗಳೂರಿನ ಲೋಕಾಯುಕ್ತ ನ್ಯಾಯಾಲಯದಲ್ಲಿ ವೆಂಕಟೇಶ್ ಪದಕಿ ವಿರುದ್ಧ ದೂರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಹಾಜರುಪಡಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್‍ಗೆ ನಿರ್ದೇಶಿಸಿ ಪ್ರಕರಣದ ವಿಚಾರಣೆ ಮುಂದೂಡಲಾಯಿತು. ನನಗೆ ಹೆಸರಿಟ್ಟವರು ನನ್ನ ತಂದೆ ತಾಯಿ. ಅಂದೇ ನನಗೆ ನನ್ನ ಹೆಸರು ತಿಳಿದಿದ್ದರೆ ಈ ಹೆಸರಿಗೆ ಬದಲಿಗೆ `ಎಬಿಸಿಡಿ 'ಎಂದು ಇಟ್ಟಿಕೊಳ್ಳುತ್ತಿದ್ದೆ.
 -ನ್ಯಾ.ಎ.ಎನ್.ವೇಣುಗೋಪಾಲ ಗೌಡ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT