ಮಾದರಿ ಪಾಲಿಕೆ ಸದಸ್ಯತ್ವ ಪ್ರತಿಜ್ಞೆ (ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಮಾದರಿ ಪಾಲಿಕೆ ಸದಸ್ಯತ್ವ ಪ್ರತಿಜ್ಞೆ

ನಮ್ಮ ಬೆಂಗಳೂರು ಫೌಂಡೇಶನ್ ವತಿಯಿಂದ ನಡೆದ ಬಿಬಿಎಂಪಿ ಚುನಾವಣಾ ಅಭಿಯಾನದಲ್ಲಿ 95 ಅಭ್ಯರ್ಥಿಗಳು ಮಾದರಿ ನಗರಪಾಲಿಕೆ ಸದಸ್ಯತ್ವ ಪ್ರತಿಜ್ಞೆಗೆ ಸಹಿ ಹಾಕಿದ್ದಾರೆ...

ಬೆಂಗಳೂರು: ನಮ್ಮ ಬೆಂಗಳೂರು ಫೌಂಡೇಶನ್ ವತಿಯಿಂದ ನಡೆದ ಬಿಬಿಎಂಪಿ ಚುನಾವಣಾ ಅಭಿಯಾನದಲ್ಲಿ 95 ಅಭ್ಯರ್ಥಿಗಳು ಮಾದರಿ ನಗರಪಾಲಿಕೆ ಸದಸ್ಯತ್ವ ಪ್ರತಿಜ್ಞೆಗೆ ಸಹಿ ಹಾಕಿದ್ದಾರೆ.

ಪ್ರತಿಷ್ಠಾನದ ವಾರ್ಡ್ ಮಟ್ಟದ ಸಂವಾದ 2015ರ ಅಂಗವಾಗಿ ನಡೆದ ಎಂಟು ಚರ್ಚೆಗಳಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳು ಮಾದರಿ ನಗರಪಾಲಿ ಕೆಯ ಸದಸ್ಯರಾಗುವುದಕ್ಕೆ ಸಹಿ ಹಾಕಿ
ದ್ದಾರೆ. ಒಟ್ಟು 6 ರಾಜಕೀಯ ಪಕ್ಷಗಳ 86 ಹಾಗೂ 9 ಸ್ವತಂತ್ರ ಅಭ್ಯರ್ಥಿಗಳು ಪ್ರತಿಜ್ಞೆಯಲ್ಲಿ ಪಾಲ್ಗೊಂಡಿದ್ದಾರೆ. ಕಾಂಗ್ರೆಸ್‍ನ 10, ಬಿಜೆಪಿಯ 6, ಲೋಕಸತ್ತಾ ಪಕ್ಷದ 4, ಆರ್‍ಪಿಐ(ಎ)
1, ಬಿಎಸ್‍ಪಿ 1 ಹಾಗೂ 9 ಸ್ವತಂತ್ರ ಅಭ್ಯರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಮಾದರಿ ಪಾಲಿಕೆ ಸದಸ್ಯ ಸನ್ನದು: ಮಾದರಿ ನಗರಪಾಲಿಕೆ ಸದಸ್ಯರಾಗಿ ಉಳಿಯಲು ಈ ಪ್ರತಿಜ್ಞೆ
ಕೈಗೊಳ್ಳಲಾಗುತ್ತದೆ. ನಮ್ಮ ಬೆಂಗಳೂರು ಫೌಂಡೇಶನ್ ಹಾಗೂ ಬ್ರೇಸ್ ಬೆಂಗಳೂರು ರೆಸಿಡೆಂಟ್ಸ್ ವೆಲ್ ಫೋರ್ ಅಸೋಸಿಯೇಶನ್ಸ್ ಕಾನ್ ಫೆಡರೇಬಲ್ ಎನ್‍ಸೆಂಬಲ್ ಸಹಯೋಗದಲ್ಲಿ `ಐಡಿಯಲ್ ಕಾರ್ಪೋರೇಟರ್ ಚಾರ್ಟರ್' ಬಿಡುಗಡೆ ಮಾಡಲಾಗಿತ್ತು.

ನಿವಾಸಿಗಳ ಕಲ್ಯಾಣ ಸಂಘ, ನಾಗರಿಕ ಸಮೂಹ ಹಾಗೂ ಸಾರ್ವಜನಿಕರಿಂದ ಸಲಹೆ ಪಡೆದು, ಕಾರ್ಪೊರೇಟರ್‍ಗಳು ಹೇಗಿರಬೇಕು ಎಂಬ ಮಾಹಿತಿ ಕಲೆಹಾಕಲಾಗಿತ್ತು. ಪ್ರತಿಜ್ಞಾ ವಿಧಿಯಂತೆ ಅಭ್ಯರ್ಥಿಗಳು ನಡೆದುಕೊಳ್ಳಲು ಸಂಸ್ಥೆ ಸಹಕಾರ ನೀಡಲಿದೆ. ಈ ಕುರಿತು ಮಾಹಿತಿ ನೀಡಿದ ಫೌಂಡೇಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಪಬ್ಬಿಸೆಟ್ಟಿ, ಈ ಸಿಟಿಜನ್ ಚಾರ್ಟರ್‍ನಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ, ನಾಗರಿಕರ ಭಾಗವಹಿಸುವಿಕೆ, ನಿರ್ಣಯ ಕೈಗೊಳ್ಳುವಾಗಿನ ಪ್ರಜಾಸತ್ತಾತ್ಮಕ ಕ್ರಮಗಳು, ವೈಯಕ್ತಿಕ ಹಾಗೂ ಸಾಂಸ್ಥಿಕ ಸಮಗ್ರತೆಯನ್ನು ಎತ್ತಿಹಿಡಿಯುವುದು ಮೊದಲಾದ ನೀತಿಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲೂ ಹೆಚ್ಚಿನ ಅಭ್ಯರ್ಥಿಗಳು ಇದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ ಎಂದರು.ಪ್ರತಿಜ್ಞಾ ವಿಧಿಗೆ ಸಹಿ ಹಾಕಿದ ಅಭ್ಯರ್ಥಿಗಳ ಪಟ್ಟಿಯನ್ನು www.namma-bengaluru.org ನಲ್ಲಿ ಹಾಕಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ