ಮಂಗಳೂರಿನಲ್ಲಿ ನಡೆದ ನೈತಿಕ ಪೋಲಿಸ್ ಗಿರಿಯ ಅಮಾನವೀಯ ಕೃತ್ಯ (ಚಿತ್ರ ಕೃಪೆ: ಫೇಸ್ಬುಕ್) 
ಜಿಲ್ಲಾ ಸುದ್ದಿ

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿಯ ಅಟ್ಟಹಾಸ; ಯುವಕನಿಗೆ ಥಳಿತ

ಹಿಂದು ಸಂಘಟನೆಗೆ ಸೇರಿದ ಗುಂಪು ಯುವಕನೊಬ್ಬನನ್ನು ನಗ್ನಗೊಳಿಸಿ, ಜನನಿಬಿಡ ಪ್ರದೇಶದಲ್ಲಿ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ ಘಟನೆ ಮಂಗಳೂರಿನಲ್ಲಿ

ಮಂಗಳೂರು: ಹಿಂದು ಸಂಘಟನೆಗೆ ಸೇರಿದ ಗುಂಪು ಯುವಕನೊಬ್ಬನನ್ನು ನಗ್ನಗೊಳಿಸಿ, ಜನನಿಬಿಡ ಪ್ರದೇಶದಲ್ಲಿ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. 
ಎಸ್ ಯು ವಿ ಒಂದರಲ್ಲಿ ತೆರಳುತ್ತಿದ್ದ ಯುವ ಜೋಡಿಯ ಬೆನ್ನಟ್ಟಿದ ಹಿಂದು ಸಂಘಟನೆಯ ಗುಂಪೊಂದು ಕಾರನ್ನು ಅಡ್ಡಗಟ್ಟಿ ಈ ಅಮಾನವೀಯ ಕೃತ್ಯವೆಸಗಿದೆ. ಆ ಸಂಗಾತಿಗಳು ಎರಡು ಕೋಮಿಗೆ ಸೇರಿದ್ದರು ಎಂದು ತಿಳಿಯಲಾಗಿದೆ. 
ಥಳಿತಕ್ಕೆ ಒಳಗಾಗಿರುವ ಸಂತ್ರಸ್ತನನ್ನು ಅಲಿ (ಹೆಸರು ಬದಲಾಯಿಸಲಾಗಿದೆ) ಎಂದು ಗುರುತಿಸಲಾಗಿದೆ. 
ಮೂಲಗಳ ಪ್ರಕಾರ ಅತ್ತಾವರದ ಸೂಪರ್ ಮಾರ್ಕೆಟ್ ನ ನೌಕರ ಅಲಿ(೩೦). ಚಿಕ್ಕಮಗಳೂರಿನ ಮೂಡಿಗೆರೆಯ ತನ್ನ ಸಹದ್ಯೋಗಿಯೊಂದಿಗೆ ಕಾರಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಎಂದು ತಿಳಿದುಬಂದಿದೆ.
ಇದನ್ನು ಗಮನಿಸಿದ ಹಿಂದು ಸಂಘಟನೆಯ ಗುಂಪೊಂದು ಅತ್ತಾವರದ ಬಾಬುಗುಡ್ಡದ ಬಳಿ ಕಾರನ್ನು ಅಡ್ಡಗಟ್ಟಿ, ಇಬ್ಬರನ್ನೂ ಹೊರಗೆಳೆದು, ಅಲಿ ಮೇಲೆ ಹಲ್ಲೆ ನಡೆಸಿದ್ದಾರೆ. 
ಹುಡುಗಿ ಅಲ್ಲಿಂದ ತಪ್ಪಿಸ್ಕೊಳ್ಳಲು ಯಶಸ್ವಿಯಾಗಿದ್ದು, ಆದರೆ ಆ ಗುಂಪು ಅಲಿಯನ್ನು ನಗ್ನಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಈ ವಿಷಯ ಪಾಂಡೇಶ್ವರ್ ಪೊಲೀಸರಿಗೆ ತಿಳಿದು ಅವರು ಸ್ಥಳಕ್ಕೆ ಧಾವಿಸಿ ಅಲಿಯನ್ನು ರಕ್ಷಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಬಂಧಿಸಿ ಪ್ರಶ್ನಿಸಲಾಗುತ್ತಿದೆ. ಆ ಯುವತಿಯ ಜೊತೆ ಯಾವುದೇ ಅಕ್ರಮ ಸಂಬಂಧ ಹೊಂದಿಲ್ಲ ಎಂದು ಅಲಿ ತಿಳಿಸಿರುವುದಾಗಿ ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ