ಬಸ್ ನಿರ್ವಾಹಕ 
ಜಿಲ್ಲಾ ಸುದ್ದಿ

ಬಸ್ ನಿರ್ವಾಹಕನ ಮೇಲೆ ಭಜರಂಗಿಗಳ ಹಲ್ಲೆ

ಯುವತಿಯೊಬ್ಬಳು ಟಿಕೆಟ್ ದರ ಕಡಿಮೆ ನೀಡಿದ್ದನ್ನು ವಿಚಾರಿಸಿದ್ದಕ್ಕೆ ಭಜರಂಗ ದಳ ಕಾರ್ಯಕರ್ತರು ಬಸ್ ತಡೆದು ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ...

ಮಂಗಳೂರು: ಯುವತಿಯೊಬ್ಬಳು ಟಿಕೆಟ್ ದರ ಕಡಿಮೆ ನೀಡಿದ್ದನ್ನು ವಿಚಾರಿಸಿದ್ದಕ್ಕೆ ಭಜರಂಗ ದಳ ಕಾರ್ಯಕರ್ತರು ಬಸ್ ತಡೆದು ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ ಶನಿವಾರ ಉಳ್ಳಾಲದ ಕುಂಪಲ ಎಂಬಲ್ಲಿ ನಡೆದಿದೆ.
ಯುವತಿಯೊಬ್ಬಳು ಶುಕ್ರವಾರ ಖಾಸಗಿ ಬಸ್ ನಿರ್ವಾಹಕ ಟಿಕೆಟ್ ದರದಲ್ಲಿ ರು.2 ಕಡಿಮೆ ನೀಡಿದ ವಿಷಯದಲ್ಲಿ ಯುವತಿ ಮತ್ತು ನಿರ್ವಾಹಕನ ನಡುವೆ ಮಾತಿನ ಚಕಮಕಿ ನಡೆದಿದೆ. ಶನಿವಾರ ಬೆಳಿಗ್ಗೆ ಯುವತಿ ಕಡೆಯ ಭಜರಂಗದಳದ ಕಾರ್ಯಕರ್ತರಾದ ನವೀನ್ ಮತ್ತು ಶಕ್ತಿ ಎಂಬವರು ಕುಂಪಲ ಬಗಂಬಿಲದಲ್ಲಿ ಬಸ್ಸನ್ನು ಅಡ್ಡಗಟ್ಟಿ ನಿರ್ವಾಹಕ ಮಹೇಶ್‍ಗೆ ಮನಬಂದಂತೆ ಥಳಿಸಿ ಗಾಯಗೊಳಿಸಿದ್ದಾರೆ.
ಶುಕ್ರವಾರಮಂಗಳೂರಿನ ಸ್ಟೇಟ್ ಬ್ಯಾಂಕ್‍ನಿಂದ ಯುವತಿ ಕುಂಪಲ ರೂಟಿನ ಖಾಸಗಿ ಬಸ್‍ನಲ್ಲಿ ಕುಂಪಲ ಕಡೆಗೆ ಪ್ರಯಾಣಿಸಿದ್ದರು. ಈ ವೇಳೆ ಟಿಕೇಟ್ ನೀಡುತ್ತಿದ್ದ ನಿರ್ವಾಹಕ
ಮಹೇಶ್ ಗೆ ರು.10 ನೀಡಿದ್ದಳು. ನಿರ್ವಾಹಕ ಮಹೇಶ್ ಇನ್ನೂ ರು.2 ಆಗಬೇಕು ಎಂದು ಕೇಳಿದಾಗ ಹಣ ಕೊಡಲು ಯುವತಿ ನಿರಾಕರಿಸಿದ್ದಾಳೆ. ಆಗ ಮಹೇಶ್, ಇಷ್ಟೊಂದು ತಗಾದೆ ಏಕೆಂದು ರು.10 ನಿಮ್ಮಲ್ಲೇ ಇರಲಿ ಎಂದು ಯುವತಿಗೆ ಹಿಂದಿರುಗಿಸಿದ್ದರು. ಇದರಿಂದ ಕುಪಿತಗೊಂಡ ಯುವತಿ ದಾರಿ ಮಧ್ಯದಲ್ಲೇ ಬಸ್ ಇಳಿದಿದ್ದಳು. ಆರೋಪಿ ನವೀನ್
ಕುಂಪಲ ರೂಟಿನ ಇನ್ನೊಂದು ಖಾಸಗಿ ಬಸ್‍ನ ಚಾಲಕನಾಗಿದ್ದು, ಶಕ್ತಿ ನಿರ್ವಾಹಕನಾಗಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ