ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

16,300 ನಕಲಿ ಬಿಪಿಎಲ್ ಕಾರ್ಡುಗಳ ಪತ್ತೆ

ನಕಲಿ ಬಿಪಿಎಲ್ ಕಾರ್ಡುದಾರರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿರುವ ಆಹಾರ ಇಲಾಖೆಗೆ ಮೊದಲ ಹದಿನೈದು ದಿನದಲ್ಲೇ 16,300 ನಕಲಿ ಕಾರ್ಡುಗಳು...

ಬೆಂಗಳೂರು: ನಕಲಿ ಬಿಪಿಎಲ್ ಕಾರ್ಡುದಾರರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿರುವ ಆಹಾರ ಇಲಾಖೆಗೆ ಮೊದಲ ಹದಿನೈದು ದಿನದಲ್ಲೇ 16,300 ನಕಲಿ ಕಾರ್ಡುಗಳು ಪತ್ತೆಯಾಗಿವೆ. ಅಚ್ಚರಿ ಎಂದರೆ, ಇದರಲ್ಲಿ 150ಕ್ಕೂ ಹೆಚ್ಚು ಸರ್ಕಾರಿ ನೌಕರರೂ ಇದ್ದಾರೆ! ಇನ್ನೂ ಆಶ್ಚರ್ಯ ಸಂಗತಿ ಎಂದರೆ ಗ್ರೂಪ್ `ಎ' ವರ್ಗಕ್ಕೆ ಸೇರಿದ ಅಧಿಕಾರಿಗಳೂ ಇದ್ದಾರೆ! ಇಂತಹ ಒಂದು ಆಘಾತಕಾರಿ ಸಂಗತಿಯನ್ನು ಆಹಾರ ಸಚಿವ ದಿನೇಶ್ ಗುಂಡೂರಾವ್ ಅವರೇ ಹೊರಗೆಡಹಿದ್ದಾರೆ.

ಶನಿವಾರ ಮಾಹಿತಿ ನೀಡಿದ ಅವರು, ಆಗಸ್ಟ್ 15ರಿಂದ ನಕಲಿ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವ ಕಾರ್ಯ ಆರಂಭಿಸಲಾಗಿದೆ. ಪ್ರತಿ ದಿನ ಸರಾಸರಿ 2 ಸಾವಿರದಷ್ಟು ನಕಲಿ ಪಡಿತರ ಚೀಟಿಗಳು ಪತ್ತೆಯಾಗುತ್ತಿವೆ.

ಇವುಗಳ ಪೈಕಿ ಕೆಲವನ್ನು ಎಪಿಎಲ್‍ಗೆ ಬದಲಿಸುವ ಅಥವಾ ಅಮಾನತಿನಲ್ಲಿಡುವ ಕಾರ್ಯವನ್ನೂ ಮಾಡಲಾಗುತ್ತಿದೆ. ಈವರೆಗೆ ಪತ್ತೆಹಚ್ಚಲಾದ ಕಾರ್ಡುಗಳಿಂದಲೇ ಮಾಸಿಕ
ಸರ್ಕಾರಕ್ಕೆ 1.18 ಕೋಟಿ ಉಳಿತಾಯವಾಗುತ್ತದೆ ಎಂದು ಹೇಳಿದರು. ನಕಲಿ ಕಾರ್ಡುಗಳ ಪತ್ತೆಗಾಗಿ ಜಿಲ್ಲಾವಾರು ಚತುಶ್ಚಕ್ರ ವಾಹನಗಳನ್ನು ಹೊಂದಿರುವವರ ಮಾಹಿತಿಯನ್ನು ಆರ್ ಟಿಒನಿಂದ ಸಂಗ್ರಹಿಸಲಾಗಿದೆ. 16,300 ನಕಲಿ ಬಿಪಿಎಲ್ ಕಾರ್ಡುಗಳ ಪತ್ತೆ ನಮ್ಮ ಇಲಾಖೆಯಲ್ಲಿರುವ ಮಾಹಿತಿ ಮತ್ತು ಆರ್‍ಟಿಒ ಮಾಹಿತಿ ತಾಳೆ ನೋಡಿ ಚತುಶ್ಚಕ್ರ ವಾಹನ ಮಾಲಿಕತ್ವ ಇದ್ದರೂ ಬಿಪಿಎಲ್ ಕಾರ್ಡು ಹೊಂದಿದ್ದವರ ನ್ನು ಪತ್ತೆ ಮಾಡಲಾಗುತ್ತಿದೆ.

ಅದೇ ರೀತಿ ರಾಜ್ಯದ ಇ-ಆಡಳಿತ ಇಲಾಖೆಯಿಂದ ವಸತಿದಾರರ ಮಾಹಿತಿ ಸಂಗ್ರಹಿಸಿದ್ದು ಅದರಿಂದಲೂ ಒಂದೇ ಆರ್‍ಆರ್ ನಂಬರ್‍ಗೆ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಗ್ರಹಿಸಿರುವವರನ್ನು ಗುರುತಿಸಲಾಗುತ್ತಿದೆ. ಇದಲ್ಲದೆ ಸರ್ಕಾರಿ ನೌಕರರ  ಸೇವಾ
ಮಾಹಿತಿ ಕ್ರೋಢೀಕರಣವಾಗುವ ಎಚ್‍ಆರ್‍ಎಂಎಸ್ ವ್ಯವಸ್ಥೆ ಯನ್ನು ಬಳಸಿಕೊಂಡು, ಸರ್ಕಾರಿನೌಕರರ ಬಿಪಿಎಲ್ ಕಾರ್ಡು  ಹೊಂದಿದ್ದಾರೆಯೇ ಎಂದು ಹುಡುಕಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ವಿವರಿಸಿದರು.

ಸರ್ಕಾರಿ ನೌಕರರು: ಕಾರ್ಡುಗಳ ಪರಿಶೀಲನೆಯ ಸಂದರ್ಭದಲ್ಲಿ 150 ಮಂದಿ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡು ಹೊಂದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಆಯಾ ಇಲಾಖೆಗೆ ಪತ್ರ ಬರೆಯಲಾಗಿದ್ದು, ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಲು ಆದೇಶಿಸಲಾಗಿದೆ.

ಚನ್ನಗಿರಿಯಲ್ಲಿನ ಸರ್ಕಾರಿ ಪಶು ವೈದ್ಯರೊಬ್ಬರು ಬಿಪಿಎಲ್ ಕಾರ್ಡು ಪಡೆದಿದ್ದು, ಕಾರ್ಡನ್ನು ಅನರ್ಹಗೊಳಿಸಲಾಗಿದೆ. ಮಾತ್ರವಲ್ಲದೆ ಅಧಿಕಾರಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.ಇಂತಹ ಅಕ್ರಮಗಳಲ್ಲಿ ವಿವಿಧ ವರ್ಗದ ಅಧಿಕಾರಿಗಳು, ನೌಕರರು ಭಾಗಿಯಾಗಿದ್ದಾರೆ. ಸರ್ಕಾರಿ ಅಧಿಕಾರಿಗಳು ಇಂತಹ ಅಕ್ರಮಗಳಲ್ಲಿ ಭಾಗಿಯಾದಲ್ಲಿ ಪಡಿತರ ಬಳಸಿಕೊಂಡ ಬಾಬ್ತು ದಂಡವನ್ನೂ ವಸೂಲಿ ಮಾಡಲಾಗುತ್ತದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಸಿಕ್ಕಿದರೆ ವಂಚನೆ ಕೇಸ್: ನೌಕರರಲ್ಲದೇ ಖಾಸಗಿ ವ್ಯಕ್ತಿಗಳು ನಕಲಿ ಪಡಿತರ ಚೀಟಿ ಹೊಂದಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ. ಜೊತೆಗೆ ಅವರು
ಪಡಿತರ ಚೀಟಿ ಬಳಸಿಕೊಂಡ ಬಾಬ್ತು ಹಣ ವಸೂಲಿ ಮಾಡಲು ನಿಯಮದಲ್ಲಿ ಒಂದಷ್ಟು ಬದಲಾವಣೆ ಮಾಡಲು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿರುವುದಾಗಿ ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

ಬಿಜೆಪಿ ನಿಯೋಗದಿಂದ ರಾಜ್ಯಪಾಲರ ಭೇಟಿ: 'ದ್ವೇಷ ಭಾಷಣ ತಡೆ' ಮಸೂದೆಗೆ ಅಂಕಿತ ಹಾಕದಂತೆ ಮನವಿ!

SCROLL FOR NEXT