ಯದುವೀರ್ ಒಡೆಯರ್, ಪ್ರಮೋದಾದೇವಿ
ಮಡಿಕೇರಿ: ಈ ಬಾರಿ ಮೈಸೂರು ರಾಜಮನೆತನದಿಂದ ದಸರಾ ಆಚರಣೆಗಳು ಪ್ರತಿವರ್ಷದಂತೆ ಸಂಪ್ರದಾಯಬದ್ಧವಾಗಿಯೇ ನಡೆಯಲಿವೆ. ಸರಳ ದಸರಾ ಆಚರಿಸುವುದು ಸರ್ಕಾರದ ನಿರ್ಧಾರಕ್ಕೆ ಬಿಟ್ಟದ್ದು, ಆದರೆ ರಾಜಮನೆತನ ಸಾಂಪ್ರದಾಯಿಕ ವಿಧಿಗಳಂತೆಯೇ ನಾಡಹಬ್ಬ ಆಚರಿಸಲು ಸಿದ್ಧತೆ ಕೈಗೊಂಡಿದೆ ಎಂದು ಹಿರಿಯ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ.
ಯುವರಾಜ ಯದುವೀರ ಒಡೆಯರ್ ಜತೆ ಮಡಿಕೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಪ್ರಮೋದಾದೇವಿ, ಈ ಬಾರಿಯೂ ರಾಜಮನೆತನದ ಸಂಪ್ರದಾಯಗಳಂತೆಯೇ ಅರಮನೆಯಲ್ಲಿ ನಾಡಹಬ್ಬ ದಸರಾದ ಆಚರಣೆಗಳು ನಡೆಯಲಿವೆ. ಸರ್ಕಾರದ ದಸರಾ ಮತ್ತು ರಾಜಮನೆತನದ ದಸರಾ ಆಚರಣೆಗಳು ಯಾವತ್ತೂ ಬಿsನ್ನವಾಗಿರುತ್ತದೆ ಎಂದು ಹೇಳಿದರು.
ರೈತರೇ ಧೃತಿಗೆಡದಿರಿ: ರೈತರು ಧೃತಿಗೆಡದೆ ಜೀವನ ಸಾಗಿಸಿ ಎಂದು ಕರೆ ನೀಡಿದ ಪ್ರಮೋದಾ ದೇವಿ, ಯಾವುದೇ ಸಮಸ್ಯೆಗಳು ಎದುರಾದರೂ ಅವುಗಳನ್ನು ಸಂಯಮದಿಂದ ಪರಿಹರಿಸಿಕೊಳ್ಳಬಹುದಾಗಿದೆ. ರೈತರು ಖಂಡಿತ ಸಾವಿನಂಥ ನಿರ್ಧಾರ ಕೈಗೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಯದುವೀರ ಒಡೆಯರ್ ಮಾತನಾಡಿ, ಕೊಡಗಿಗೆ ತಾನು ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದು, ಇಲ್ಲಿನ ನಿಸರ್ಗ ಸೌಂದರ್ಯ ಮನಸೂರೆಗೊಂಡಿದೆ. ಮತ್ತೊಮ್ಮೆ ಇಂಥ ಪ್ರಕೃತಿಯ ವೈಭವದ ತಾಣಕ್ಕೆ ಭೇಟಿ ನೀಡಲು ಇಚ್ಛಿಸಿರುವುದಾಗಿ ಹೇಳಿದರು. ರಾಜವಂಶಸ್ಥರಿಗೆ ಮಡಿಕೇರಿಯಲ್ಲಿ ಮುಳಿಯ ಪ್ರತಿಷ್ಠಾನದ ಮುಖ್ಯಸ್ಥ ಕೇಶವಪ್ರಸಾದ್ ಮುಳಿಯ ಆತಿಥ್ಯ ನೀಡಿದರು. ಮಡಿಕೇರಿಯ ವ್ಯಾಲಿವ್ಯೂ ಹೊಟೇಲïನಲ್ಲಿ ಯದುವೀರ ಮತ್ತು ಪ್ರಮೋದಾದೇವಿ ಕಾಣಿಸಿಕೊಂಡಾಗ ಪ್ರವಾಸಿಗರು ಹಾಗೂ ಸ್ಥಳೀಯರು ಅಚ್ಚರಿಗೊಂಡರು.
ಅರಮನೆ ಆವರಣದಲ್ಲಿ ಹಾವು ಕಡಿತ
ಅಂಬಾವಿಲಾಸ ಅರಮನೆ ವೀಕ್ಷಣೆಗೆ ಬಂದಿದ್ದ ಊಟಿಯ ವೆಲ್ಲಿಂಗ್‍ಟನ್ ಸೇನಾಧಿಕಾರಿಯ ಪುತ್ರನಿಗೆ ಹಾವು ಕಚ್ಚಿದೆ. ಪರಿಣಾಮ ಮಗು ಸಾವಿಗೀಡಾಗಿದೆ. ಅರಮನೆ ವೀಕ್ಷಿಸಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಎರಡು ದಿನದ ಪ್ರವಾಸಕ್ಕೆಂದು ಕುಟುಂಬ ಮೈಸೂರಿಗೆ ಬಂದಿತ್ತು. ಹಾವು ಕಚ್ಚಿದ ಶಂಕೆಯಿಂದ ಮಗುವನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ತಪಾಸಣೆ ನಡೆಸಿದ ವೈದ್ಯರು ಬಾಲಕನಿಗೆ ಹಾವು ಕಚ್ಚಿರುವುದನ್ನು ಖಚಿತಪಡಿಸಿದರು.