ಎಚ್ಚರಿಕೆ ನೀಡಿದ್ದ ಯುವಕನ ಟ್ವೀಟ್ 
ಜಿಲ್ಲಾ ಸುದ್ದಿ

ಸಾಹಿತಿ ಕಲ್ಬುರ್ಗಿ ಹತ್ಯೆ ಬಗ್ಗೆ ಟ್ವೀಟ್ ಮಾಡಿದ್ದ ಯುವಕನ ಬಂಧನ

ಸಂಶೋಧಕ, ಸಾಹಿತಿ ಕಲ್ಬುರ್ಗಿ ಹತ್ಯೆ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದ ಯುವಕನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು: ಸಂಶೋಧಕ, ಸಾಹಿತಿ ಕಲ್ಬುರ್ಗಿ ಹತ್ಯೆ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದ ಯುವಕನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ಭುವಿತ್ ಶೆಟ್ಟಿ ಎಂಬ ಯುವಕ ಕಲ್ಬುರ್ಗಿ ಹತ್ಯೆ ಬಗ್ಗೆ ಟ್ವೀಟ್ ಮಾಡಿ, ಹಿಂದೂ ಧರ್ಮವನ್ನು ಅವಹೇಳನ ಮಾಡಿದ ಸಾಹಿತಿಗಳು ಒಬ್ಬೊಬ್ಬರೇ ಸಾವನ್ನಪ್ಪುತ್ತಿದ್ದಾರೆ. ಅಂದು ಯುಆರ್ ಅನಂತಮೂರ್ತಿ, ಇಂದು ಎಂಎಂ ಕಲ್ಬುರ್ಗಿ, ಮುಂದಿನ ಸರದಿ ಕೆ.ಎಸ್ ಭಗವಾನ್ ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದ. ಈ ಹಿನ್ನೆಲೆಯಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.

ಕಲ್ಬುರ್ಗಿ ಅವರ ಹತ್ಯೆ ಮಾಡಿದ ಕೊಲೆಗಾರರನ್ನು ಬಂಧಿಸಲು ಕಾರ್ಯಾಚರಣೆ ನಡೆಯುತ್ತಿರುವಾಗಲೇ ಭುವಿತ್ ಶೆಟ್ಟಿ, ವಿವಾದಾತ್ಮಕ ಟ್ವೀಟ್ ಮಾಡಿದ್ದಾನೆ. ಅಲ್ಲದೆ ಮುಂದಿನ ಸರದಿ ಕೆ.ಎಸ್ ಭಗವಾನ್ ಅವರದ್ದು ಎಂದು ಎಚ್ಚರಿಕೆ ನೀದಿರುವುದರಿಂದ ಪೊಲೀಸರು ಈತನ ಟ್ವೀಟ್ ನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನರಕ ಸೃಷ್ಟಿಸುತ್ತೇವೆ: ಅಮೆರಿಕಾ ಬೆದರಿಕೆಗೆ ಕ್ಯಾರೆ ಎನ್ನದ ಇರಾನ್; ಇಸ್ರೇಲ್-ಕುವೈತ್ ಮೇಲೆ ಕ್ಷಿಪಣಿ-ಡ್ರೋನ್ ದಾಳಿ..!

“ನಮ್ಮನ್ನು ಕೆಣಕದಿರಿ”...: ಕೋಲ್ಕತಾ ಹೆಸರೆತ್ತಿ ಭಾರತಕ್ಕೆ ಪಾಕ್ ಬೆದರಿಕೆ, ಪದೇ ಪದೇ ಯುದ್ಧೋತ್ಸಾಹದ ಮಾತು..!

IPL 2026: ಅಹಮದಾಬಾದ್ ಮೈದಾನದಲ್ಲಿ RR ವಿರುದ್ಧ ಅತ್ಯಧಿಕ ರನ್ ಚೇಸ್‌ನಲ್ಲಿ ಕೊನೆಯ ಓವರ್‌ನಲ್ಲಿ ಸೋತ Gujarat Titans

ವಿದೇಶಗಳ Mk-84 ಗೆ ಪರ್ಯಾಯ, ಆತ್ಮನಿರ್ಭರತೆಗೆ ಉತ್ತೇಜನ: ದೇಶೀಯವಾಗಿ 1000-kg ವಾಯುಬಾಂಬ್‌ ತಯಾರಿಸಲಿರುವ ಭಾರತ!

ಮಾಗಡಿ Congress ಶಾಸಕ ಹೆಚ್​​.ಸಿ ಬಾಲಕೃಷ್ಣಗೆ ಕೋರ್ಟ್ ಶಾಕ್​​: ಜಾಮೀನು ರಹಿತ ವಾರೆಂಟ್ ಜಾರಿ

SCROLL FOR NEXT