ಕುಮಟಾ: ಕುಮಟಾದ ಬೆಟ್ಕೊಳಿ ಘಟ್ಟದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗಿನ ಜಾವ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಗ್ಯಾಸ್ ಸೋರಿಕೆಯಿಂದ ಬೆಂಕಿ ಅನಾಹುತ ಸಂಭವಿಸಿದ್ದು, ಪರಿಣಾಮ ದುರಂತದಲ್ಲಿ 10 ಮಂದಿ ಸ್ಥಳೀಯ ನಿವಾಸಿಗಳಿಗೆ ಗಂಭೀರವಾಗಿದೆ.
ಮಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಟ್ಯಾಂಕರ್ ಬೆಳಗ್ಗೆ 4.30 ರ ಸುಮಾರಿಗೆ ಪಲ್ಟಿಯಾಗಿದ್ದು , ಈ ವೇಳೆ ಗ್ಯಾಸ್ ಸೋರಿಕೆಯಾಗಿ ಸುತ್ತಮುತ್ತಲು ವ್ಯಾಪಿಸಿದೆ.
ಅಕ್ಕಪಕ್ಕದ ಸುಮಾರು 5 ಮನೆಗಳು ಬೆಂಕಿಗೆ ಆಹುತಿಯಾಗಿದ್ದು, ಮನೆಯೊಂದರಲ್ಲಿದ್ದ ಸಿಲಿಂಡರ್ ಸ್ಪೋಟ ಗೊಂಡಿದೆ. 2 ವರ್ಷದ ಮಗು ಸಹಿತ 10 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಕುಮಟಾದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಣಿಪಾಲ ಆಸ್ಪತ್ರಗೆ ದಾಖಲಿಸಲಾಗಿದೆ. 5ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.