(ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಸೌಲಭ್ಯಕ್ಕೆ ಆಗ್ರಹಿಸಿ ಓಲಾ ಕ್ಯಾಬ್ ಚಾಲಕರ ಪ್ರತಿಭಟನೆ

ಕಾಲಕಾಲಕ್ಕೆ ವೇತನ ನೀಡದಿರುವುದು, ಸಿಬ್ಬಂದಿ ನಡೆಸುವ ದೌರ್ಜನ್ಯ ಖಂಡಿಸಿ ನೂರಾರು ಕ್ಯಾಬ್ ಚಾಲಕರು ಓಲಾ ಕಂಪನಿ ಮುಂದೆ ಪ್ರತಿಭಟನೆ ನಡೆಸಿದರು...

ಬೆಂಗಳೂರು: ಕಾಲಕಾಲಕ್ಕೆ ವೇತನ ನೀಡದಿರುವುದು, ಸಿಬ್ಬಂದಿ ನಡೆಸುವ ದೌರ್ಜನ್ಯ ಖಂಡಿಸಿ ನೂರಾರು ಕ್ಯಾಬ್ ಚಾಲಕರು ಓಲಾ ಕಂಪನಿ ಮುಂದೆ ಪ್ರತಿಭಟನೆ ನಡೆಸಿದರು.

ಓಲಾ ಕಂಪನಿ ತನ್ನ ಚಾಲಕರಿಗೆ ಸೂಕ್ತ ವೇತನ, ಪ್ರೋತ್ಸಾಹ ಧನ ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿ ಎಚ್ ಎಎಲ್‍ನ ಮುರಗೇಶ್‍ಪಾಳ್ಯದಲ್ಲಿರುವ ಓಲಾ ಕಚೇರಿ ಮುಂದೆ 200ಕ್ಕೂ ಹೆಚ್ಚು ಚಾಲಕರು ಕಂಪನಿ ವಿರುದ್ದ ಘೋಷಣೆ ಕೂಗಿ ಪ್ರತಿಭಟಿಸಿದರು. ಈ ವೇಳೆ ಚಾಲಕರು ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ಸಹ ನಡೆಯಿತು.

ಸರಿಯಾಗಿ ವೇತನ ನೀಡದಿರುವುದು ಸೇರಿದಂತೆ ಚಾಲಕರಿಗೆ ಅಗತ್ಯ ಸೌಕರ್ಯ ನೀಡಿಲ್ಲ. ಕಂಪನಿ ಸಿಬ್ಬಂದಿ ಚಾಲಕರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಇದು ನಿಲ್ಲಬೇಕು ಎಂದು ಪ್ರತಿಭಟನಾಕಾರರು ಆರೋಪಿಸಿದರು. ನೂರಾರು ಮಂದಿ ಕ್ಯಾಬ್ ಚಾಲಕರು ಬೆಳಗ್ಗಿನಿಂದಲೇ ಕಂಪನಿಯ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಸಮಸ್ಯೆ ಆಲಿಸಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು ರೊಚ್ಚಿಗೆದ್ದರು. ಕಂಪನಿ ವಿರುದಟಛಿ ಆಕ್ರೋಶ ವ್ಯಕ್ತಪಡಿಸಿ ಕಚೇರಿಯೊಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಭದ್ರತಾ ಸಿಬ್ಬಂದಿ ಅವರನ್ನು ತಡೆದು ನಿಲ್ಲಿಸಿದರು. ಪರಿಸ್ಥಿತಿ ಕೆಲ ಕಾಲ ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸುವ ಹಂತ ತಲುಪಿತ್ತು. ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಆಡಳಿತ ಮಂಡಳಿ ಹಾಗೂ ಚಾಲಕರ ನಡುವೆ ಮಾತಿನ ಚಕಮಕಿ ನಡೆಯಿತು.

ಪೊಲೀಸರು ಮಧ್ಯಪ್ರವೇಶಿಸಿ ಆಡಳಿತ ಮಂಡಳಿ ಹಾಗೂ ಚಾಲಕರೊಂದಿಗೆ ಚರ್ಚಿ ಸಿದರು. ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು. ಓಲಾ ಕಂಪನಿ ಅಧಿಕಾರಿಗಳು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಈ ಹಿಂದೆಯೂ ಸಹ ಎಂ.ಜಿ.ರಸ್ತೆಯಲ್ಲಿರುವ ಕಚೇರಿ ಬಳಿ ನೂರಾರು ಕ್ಯಾಬ್ ಚಾಲಕರು ಪ್ರತಿಭಟನೆ ನಡೆಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026, qualifier 1: ಟಾಸ್ ಗೆದ್ದ GT ಬೌಲಿಂಗ್ ಆಯ್ಕೆ, ಕುತೂಹಲಕ್ಕೆ ಬ್ರೇಕ್, ವೆಂಕಟೇಶ್ ಅಯ್ಯರ್ ಗೆ ಸ್ಟಿಕ್ ಆದ RCB!

Bengaluru Rains: ಗುಡುಗು, ಸಿಡಿಲು ಸಹಿತ ಭಾರೀ ಮಳೆ; ಹಳಿ ಮೇಲೆ ಮರ ಬಿದ್ದು, ಮೆಟ್ರೋ ಸಂಚಾರ ವ್ಯತ್ಯಯ!

ಮೂಲಭೂತವಾದಿಗಳ ಒತ್ತಡಕ್ಕೆ ಮಣಿದ ಪಾಕ್ ಸರ್ಕಾರ; ಹಿಂದೂ ಹೆಸರುಗಳ ಮರು ನಾಮಕರಣ ಮುಂದೂಡಿಕೆ!

ಫೈನಲ್ ಫೈಟ್: ಸಿದ್ದರಾಮಯ್ಯ ಮನವೊಲಿಕೆಗೆ ರಾಹುಲ್ ಗಾಂಧಿ ಯತ್ನ; ಯತೀಂದ್ರಗೆ DCM ಸ್ಥಾನ, ರಾಜ್ಯಸಭೆ ಆಫರ್?

SCROLL FOR NEXT