ಜಿಲ್ಲಾ ಸುದ್ದಿ

ರೇವಾ ವಿವಿಯಲ್ಲಿ ಕಾರ್ಯಾಗಾರ ನಾಳೆ

Manjula VN

ಬೆಂಗಳೂರು: ಮೇಕ್ ಇನ್ ಇಂಡಿಯಾ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ರೇವಾ ವಿಶ್ವವಿದ್ಯಾಲಯ ಮತ್ತು ಕಾಸಿಯಾ ಸಂಸ್ಥೆ ಜಂಟಿಯಾಗಿ ಡಿ. 4ರಂದು ಯಲಹಂಕದ ರೇವಾ
ವಿಶ್ವವಿದ್ಯಾಲಯದಲ್ಲಿ ಕಾರ್ಯಾಗಾರ ಹಮ್ಮಿಕೊಂಡಿವೆ ಎಂದು ಕಾಸಿಯಾ ಅಧ್ಯಕ್ಷ ವಿ.ಕೆ.ದೀಕ್ಷಿತ್ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಾಗಾರದಲ್ಲಿ ಬಂಡವಾಳ ಹೂಡಿಕೆ, ಅಧಿಕ ಉದ್ಯೋಗ ಸೃಷ್ಟಿ, ಮಾರುಕಟ್ಟೆ, ರಫ್ತು, ವಿದೇಶಿ ವಿನಿಮ ಯ ವಿಷಯಗಳ ಬಗ್ಗೆ ಸಮಗ್ರ ವಿವರಣೆ ನೀಡಲಿದ್ದು, 12 ಮಂದಿ ಕೈಗಾರಿಕೋದ್ಯಮಿಗಳು ಅಂದಿನ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಲಿದ್ದಾರೆ ಎಂದರು. ಸಣ್ಣ ಕೈಗಾರಿಕೆಗಳಿಗೆ 99 ವರ್ಷ ಭೂಮಿಯನ್ನು ಲೀಸ್ ಕೊಡುವ ನೀತಿ ಬದಲಾವಣೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಈಗಾಗಲೇ ಮೂರು ಬಾರಿ ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ ಯಾವುದೇ ಬೇಡಿಕೆ ಈಡೇರಿಲ್ಲ ಎಂದು ಹೇಳಿದರು.

ಪ್ರಸ್ತುತ 2000 ಕೈಗಾರಿಕಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ 450 ನಿವೇಶನಗಳು ಹಂಚಿಕೆಯಾಗಿವೆ. ಆದರೆ, ಆ ನಿವೇಶನಗಳಲ್ಲಿ ಕೈಗಾರಿಕೆಗಳು ಇನ್ನೂ ಆರಂಭವಾಗಿಲ್ಲ, ಈ ಬಗ್ಗೆ ಕಾನೂನು ತೊಡಕುಗಳು ಎದುರಾಗಿದ್ದು, ಇವುಗಳನ್ನು ಸರಿಪಡಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು. ಗೋಷ್ಠಿಯಲ್ಲಿ ರೇವಾ ವಿವಿ ಕುಲಪತಿ ಡಾ. ಬಿ. ಶಾಮರಾಜ್ ಹಾಜರಿದ್ದರು.

SCROLL FOR NEXT