ಬೆಂಗಳೂರು: ರಾಷ್ಟ್ರಕವಿ ಕುವೆಂಪು ರಚಿಸಿದ ನಾಡ ಗೀತೆಯ ಬಗ್ಗೆ ಸಾಹಿತಿ ಸುಮತೀಂದ್ರ ನಾಡಿಗ ಉದ್ದೇಶಪೂರ್ವಕ ಹಾಗೂ ವಿನಾಕಾರಣ ಆಕ್ಷೇಪವೆತ್ತುತ್ತಿದ್ದು ರಾಷ್ಟ್ರಕವಿ ಮತ್ತು ರಾಜ್ಯಕ್ಕೆ ಅವಮಾನ ಮಾಡುತ್ತಿದ್ದಾರೆ.
ಅವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಹಿರಿಯ ಸಾಹಿತಿ ಡಾ. ಸಿ.ಪಿ. ಕೃಷ್ಣಕುಮಾರ್ ಒತ್ತಾಯಿಸಿದ್ದಾರೆ. 1930ರಲ್ಲಿ ಕುವೆಂಪು ಅವರು ನಾಡಗೀತೆಯನ್ನು ಪ್ರಕಟಿಸಿದರು. ಆದರೆ, ಅವರು ಇದು ನಾಡಗೀತೆ ಆಗುತ್ತದೆ ಎಂಬ ಕನಸನ್ನು ಕಂಡಿರಲಿಲ್ಲ, ನಾಡಗೀತೆ ಉಜ್ವಲ, ಜೀವಂತ ಹಾಗೂ ಭಾವೈಕ್ಯದ ಗಾಥೆ. ಕರ್ನಾಟಕ ಹಾಗೂ ಭಾರತದ ಭಾವವನ್ನು ಅದರಲ್ಲಿ ಸೇರಿಸಿದ್ದಾರೆ. ಭಾರತವನ್ನು ಮರೆಮಾಚದೆ ಕರ್ನಾಟಕ ಸಂಕೀರ್ಣತೆ ಕುರಿತು ಹೇಳಿದ್ದಾರೆ. ಇಂತಹ ಗೀತೆಯನ್ನು ಅವಮಾನಿಸುವುದು ಅಕ್ಷಮ್ಯ ಎಂದು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಾಡಿಗರಿಗೆ ಕನ್ನಡ ಬರಲ್ಲ: ಸುಮತೀಂದ್ರ ನಾಡಿಗ ಅವರು ಮೂಲತಃ ಇಂಗ್ಲಿಷ್ ಪ್ರಾಧ್ಯಾಪಕ ಅವರಿಗೆ ಕನ್ನಡ ಸರಿಯಾಗಿ ಬರುವುದಿಲ್ಲ. ಅವರು ಜಿನನುತ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಜಿನನುತ ಎಂಬುದು ಒಂದೇ ಪದ ಅಲ್ಲ ಆದರೆ, ನಾಡಿಗ ಅವರು ಅದನ್ನು ಒಂದೇ ಪದ ಎಂದು ಅದನ್ನು ಅಪಾರ್ಥ ಮಾಡಿಕೊಂಡಿದ್ದಾರೆ ಎಂದು ಸಿ.ಪಿ.ಕೆ. ದೂರಿದರು. ಅಂಬೇಡ್ಕರ್ ವಿರುದ್ಧ ವೆಂಕಟ್ ಅವಹೇಳ ನಕಾರಿಯಾಗಿ ಮಾತನಾಡಿದ್ದಾರೆಂದು ಅವರನ್ನು ಜೈಲಿಗೆ ಕಳುಹಿಸಲಾಗಿದೆ.
ಅದೇ ರೀತಿ ನಾಡಿಗ ರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಸಾಹಿತಿ ದೇ. ಜವರೇ ಗೌಡ ಮಾತನಾಡಿ, ಸುಮತೀಂದ್ರ ಅವರ ಮನಸು ಕಲುಷಿತ ತಿಪ್ಪೆಯಾಗಿದೆ. ಗೊಂದಲದ ಬೀಡಾಗಿದೆ ಅವರು ಸಾಹಿತ್ಯವನ್ನು ಹಾಳು ಮಾಡುತ್ತಿದ್ದಾರೆ. ನಾಡಗೀತೆಯಲ್ಲಿ ಕೆಲವೊಂದು ಕೊರತೆಗಳಿದ್ದವು. ಕೆಲವು ವರ್ಷಗಳ ನಂತರ ಮಾಧ್ವ, ರಾಮಾನುಜರನ್ನು ಸೇರ್ಪಡೆ ಮಾಡಿ ನಾಡಗೀತೆಯನ್ನು ಕುವೆಂಪು ಸಂಪೂರ್ಣವಾಗಿಸಿದ್ದರು ಎಂದರು. ನೂತನ ಸಮಿತಿ ರಚನೆ ಮಾಡಲು ಮನವಿ ಬಾಬಾಬುಡನ್‍ಗಿರಿ ವಿವಾದ ಕೂಡಲೇ ಇತ್ಯರ್ಥಪಡಿಸಲು ಕೋಮು ಸೌಹಾರ್ದ ವೇದಿಕೆ ಒತ್ತಾಯ ಬೆಂಗಳೂರು ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‍ಗಿರಿ ದರ್ಗಾದ ಧಾರ್ಮಿಕ ಪದ್ಧತಿ ಆಚರಣೆ ಸಂಬಂಧ 2010ರಲ್ಲಿ ಸಲ್ಲಿಸಿರುವ ವರದಿಯು ಏಕಮುಖವಾಗಿದ್ದು, ಕೂಡಲೇ ನೂತನ ಸಮಿತಿ ರಚನೆ ಮಾಡಿ ಸಮಸ್ಯೆ ಇತ್ಯರ್ಥಪಡಿಸುವಂತೆ ಕೋಮು ಸೌಹಾರ್ದ ವೇದಿಕೆಯು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಈ ಕುರಿತು ವೇದಿಕೆ ಸದಸ್ಯರು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು. ಬಾಬಾಬುಡನ್‍ಗಿರಿ ದರ್ಗಾ ವಿವಾದ ಕುರಿತು ಕಳೆದ ಸೆ.3ರಂದು ಸುಪ್ರೀಂ ಕೋರ್ಟ್, ಶಾಸನಾತ್ಮಕ ವ್ಯವಸ್ಥೆ ಮತ್ತು ಕಾನೂ ನು ಪಾಲನೆ ಜವಾಬ್ದಾರಿ ರಾಜ್ಯ ಸರ್ಕಾರದ ಹೊಣೆಯಾಗಿದೆ ಎಂದು ತೀರ್ಪು ನೀಡಿದೆ. ಈ ತೀರ್ಪಿನ ಅನ್ವಯ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. 1989ಕ್ಕೂ ಮೊದಲಿದ್ದ ಧಾರ್ಮಿಕ ಪದ್ಧತಿಗಳಂತೆ ಪೂಜಾವಿಧಾನಗಳನ್ನು ನಡೆಸಬೇಕು. ಆದರೆ 2010ರಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿ ಸರ್ಕಾರ ತನ್ನ ನಿಲುವುಗಳಿಗೆ ತಕ್ಕಂತೆ ತರ್ಕ, ಆಧಾರ ರಹಿತ, ಪಕ್ಷಪಾತಿ ವರದಿ ವರದಿ ಸಿದ್ಧಪಡಿಸಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸಲಹೆ ನೀಡಬಲ್ಲ ನೂತನ ಸಮಿತಿ ರಚಿಸಬೇಕು. ಆ ಸಮಿತಿಯು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ, ಕಾನೂನು ಮತ್ತು ಚಾರಿತ್ರಿಕ ಸಂಗತಿಗಳ ಪರಿಣಿತರನ್ನು ಸಮಿತಿ ಸದಸ್ಯರನ್ನಾಗಿ ನೇಮಕ ಮಾಡು ವಂತೆ ತಿಳಿಸಿದೆ. ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೇದಿಕೆಯ ಗೌರಿ ಲಂಕೇಶ್, ವೇದಿಕೆಯ ನಿಲುವಿಗೆ ಪೂರಕವಾದ ಸಾಕ್ಷ್ಯ, ಆಧಾರ ಸಹಿತ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಹವಾಲು ಸ್ವೀಕರಿಸಿದ ಸಿಎಂ ಸಿದ್ದ ರಾಮಯ್ಯ ಮನವಿಗೆ ಸ್ಪಂದಿಸಿದ್ದು, ಕಾನೂನು ಸಚಿವರ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆಂದು ಹೇಳಿದರು.