ಜಿಲ್ಲಾ ಸುದ್ದಿ

ಬ್ರಾಹ್ಮಣರು ದೇಶ ಬಿಡಲೆಂದು ಹೇಳಿಲ್ಲ: ಚಂಪಾ

Sumana Upadhyaya

ಬೆಂಗಳೂರು: ದೇಶ ಬಿಡಬೇಕೆಂದು ನಾನು ಹೇಳಿಲ್ಲ. ಯಾರು ದೇಶ ಬಿಡಬೇಕಾದ  ಅಗತ್ಯವೂ ಇಲ್ಲ. ಎಲ್ಲರೂ ಇಲ್ಲೇ ಇದ್ದು ಒಗ್ಗಟ್ಟಿನಿಂದ ಎಲ್ಲರೂ ಸಹಬಾಳ್ವೆಯಿಂದ ಜೀವನ  ಮಾಡೋಣ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ  ಹೇಳಿದರು.

ಕರ್ನಾಟಕ ಸುಗಮ ಸಂಗೀತ ಪರಿಷತ್ ಪ್ರತಿಭಾ ಶಿಕ್ಷಣ ಸಮಿತಿ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ `ಕವಿಯ ನೋಡಿ-ಕವಿತೆ ಕೇಳಿ' ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೂಮಿಯಲ್ಲಿ ಯಾವುದೂ ಶಾಶ್ವತ ಅಲ್ಲ. ಇರುವಷ್ಟು ದಿನ ಅರ್ಥಪೂರ್ಣ ಬದುಕು ನಡೆಸುವ  ಅಗತ್ಯವಿದೆ ಎಂದರು.

ಕಾವ್ಯದ ಒಳ ಹೊಕ್ಕು ಗೀತೆ ಅರಳಿಸುವವರು ಸೃಜನಶೀಲ ಗಾಯಕರು. ಕಾವ್ಯ ಎಂಬುದು ಜೀವ ಬೀಜಗಳ ಸರಮಾಲೆ. ಕವಿಗಳು ಶಬ್ಧಗಳಿಗೆ ಜೀವ ತುಂಬವ ಕೆಲಸ ಮಾಡುತ್ತಾರೆ. ಆದರೆ, ಸೃಜನಶೀಲ ಗಾಯಕರು ಅದರ ಒಳ ಹೊಕ್ಕಿ ಅನಾವರಣ ಮಾಡುತ್ತಾರೆ. ಸಿ.ಅಶ್ವತ್,  ಕಿಕ್ಕೇರಿ, ಡಾ. ಕಿಕ್ಕೇರಿ ಕೃಷ್ಣಮೂರ್ತಿ ಮೊದಲಾದ ಸೃಜನಶೀಲ ಗಾಯಕರು ಇದಕ್ಕೊಂದು ಸೂಕ್ತ  ನಿದರ್ಶನ. ಹೀಗಾಗಿ ಈ ಸೃಜನಶೀಲ ಗಾಯಕರ ಪರಂಪರೆ ಮುಂದಿನ ಪೀಳಿಗೆಗೂ ಹರಿಯಬೇಕೆಂದು ಆಶಿಸಿದರು.

ರಾಷ್ಟ್ರಕವಿ ಕುವೆಂಪು ಅವರ ನಾಡ ಗೀತೆ ಕುರಿತು ಸುಮತೀಂದ್ರ ನಾಡಿಗರು ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಅಷ್ಟೆ. ಈ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳಬಾರದು. ನಾಡಿಗರ ವಿರುದ್ಧ ಯಾವುದೇ ರೀತಿಯ ಹಿಂಸಾತ್ಮಕ ಕೆಲಸಗಳಿಗೆ ಮುಂದಾಗಬಾರದೆಂದು  ಅವರು ಮನವಿ ಮಾಡಿದರು.

ಇದೇ ವೇಳೆ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಶ್ವೇತಾ ಪ್ರಭು, ಪ್ರಿಯಾಂಕಾ ಸೂರ್ಯ ನಾರಾಯಣ್  ಮೃತ್ಯುಂಜಯ ದೊಡ್ಡವಾಡ, ಪಂಚಮ್ ಹಳಿಬಂಡಿ ಮೊದಲಾದ ಗಾಯಕರು ಚಂಪಾ ರಚನೆಯ  ಹಲವು ಕವನಗಳನ್ನು ಸುಶ್ರಾವ್ಯವಾಗಿ ಹಾಡಿದರು.

SCROLL FOR NEXT