ಜಿಲ್ಲಾ ಸುದ್ದಿ

ಜೂಜು ಅಡ್ಡೆ ಮೇಲೆ ದಾಳಿ: 1.64 ಲಕ್ಷ ನಗದು, ರೂ.7.24 ಲಕ್ಷ ಮೌಲ್ಯದ ಪರಿಕರಗಳ ವಶಪಡಿಸಿಕೊಂಡ ಸಿಸಿಬಿ

Srinivas Rao BV

ಬೆಂಗಳೂರು: ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 18 ಆರೋಪಿಗಳನ್ನು ಬಂಧಿಸಿ ರೂ.1.64 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಅನುಪಮ (23), ಕಿಶೋರ್ (23), ವೈಕುಂಟಯ್ಯ (27), ವೀರಭದ್ರೇಶ್ವರ ಶೆಟ್ಟಿ (42), ರೂಪೇಶ (23), ನಾಯಕ ( 29), ಭಾಸ್ಕರ (24), ಯೋಗೇಶ್ (25), ಅಬ್ಜಲ್ (24), ಅಬ್ಜಲ್ ಪಾಷಾ (33), ಮಧುಸೂದನ್(25), ಮಂಜುನಾಥ (24) ಮುನ್ನಾ( 34), ರಂಜಿತ್ (23), ಅರ್ಜುನ್(28), ಪ್ರಭಾಕರ್ (38), ವಿಜಯ್ (22) ಹಾಗೂ ಚೇತನ್ (28) ಬಂಧಿತರು.

ಡಿ.5ರಂದು ಮಾಗಡಿ ಮುಖ್ಯರಸ್ತೆ ಅಗ್ರಹಾರ ದಾಸರಹಳ್ಳಿಯ ಕಟ್ಟಡವೊಂದರ ನೆಲಮಹಡಿಯಲ್ಲಿರುವ ಹರಿರಾಜ್ ಶೆಟ್ಟಿ ಮಾಲೀಕತ್ವದ ರಾಜೇಶ್ವರಿ ರಿಕ್ರಿಯೇಷನ್ಸ್ ಅಸೋಸಿಯೇಷನ್ಸ್ ಎಂಬ ಕ್ಲಬ್‍ನಲ್ಲಿ ಆರೋಪಿಗಳು ಹಣವನ್ನು ಪಣಕ್ಕಿಟ್ಟು ಜೂಜಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗದ ಪೊಲೀಸರು, ಕೂಡಲೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದರು.

ಈ ವೇಳೆ ರೂ.1.64 ಲಕ್ಷ ನಗದು ರೂ.7.24 ಲಕ್ಷ ಮೌಲ್ಯದ ವಿವಿಧ ಮುಖಬೆಲೆಯ 1583 ಟೋಕನ್ ಗಳು, ರೂ ೧ ಸಾವಿರ ಮುಖಬೆಲೆಯ 278, ರೂ. 500 ಮುಖಬೆಲೆಯ 618, ಹಾಗೂ ರೂ.200  ಮುಖ ಬೆಲೆಯ 687, 3 ಡೈಸ್ ಡಾರ್ಟ್ ಪಿನ್‍ಗಳು ಸೇರಿದಂತೆ ಇತರೆ ಪರಿಕರಗಳನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಕ್ಲಬ್‍ನ ಮಾಲೀಕ ಹರಿರಾಜ್ ಶೆಟ್ಟಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಅಂದರ್-ಬಾಹರ್:
ಇದೇವೇಳೆ ಅಂದರ್-ಬಾಹರ್ ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿ ರೂ.62.5 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.ಲೋಕೇಶ್(21), ಪ್ಯಾರೇಜಾನ್ (48), ನವೀನ್(23), ರಾಜು(37), ದಯಾನಂದ (29), ಶಶಿಕಾಂತ(30) ಹಾಗೂ ಸೂರ್ಯಕಾಂತ(30) ಬಂಧಿತರು. ಡಿ.6ರಂದು ಎಲೆಕ್ಟ್ರಾನಿಕ್ ಸಿಟಿ ಪಟೇಲಮ್ಮ ದೇವಸ್ಥಾನ ಮುಂಭಾಗದ ಸಂಗಸಂದ್ರದ ಮನೆಯೊಂದರಲ್ಲಿ ಹಣವನ್ನು ಪಟವಾಗಿ ಕಟ್ಟಿ ಅಂದರ್-ಬಾಹರ್ ಜೂಜಾಟದ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು, ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ರೂ62.5 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಜೂಜು ದಂಧೆ ನಡೆಸುತ್ತಿದ್ದ ಪ್ರಮುಖ ಆರೋಪಿ  ನಿತ್ಯಾ ತಲೆಮರೆಸಿಕೊಂಡಿದ್ದಾನೆ.

SCROLL FOR NEXT