ಜಿಲ್ಲಾ ಸುದ್ದಿ

ಲೆಕ್ಕ ಪರಿಶೋಧನೆಯಲ್ಲಿ ಲೋಪವಿಲ್ಲ: ಸ್ಪಷ್ಟನೆ

Manjula VN

ಬೆಂಗಳೂರು: 2013-14ನೇ ಸಾಲಿನ ಕುರಿಗಳ ಖರೀದಿ ಸೇರಿದಂತೆ ಉಪಕರಣಗಳ ಖರೀದಿ ಮತ್ತು ಹಲವಾರು ಕಾಮಗಾರಿ ಕೆಲಸಗಳ ನಿರ್ವಹಣೆಗೆ ಸಂಬಂಧೀಸಿದಂತೆ ಲೆಕ್ಕ ಪರಿಶೋಧನೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಕೃಷಿ ವಿವಿ ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿವಿಯ ಆಸ್ತಿ ಅಧಿಕಾರಿ, ಹಲವಾರು ಕಾಮಗಾರಿಗಳನ್ನು ನಿರ್ವಹಿಸಲು ವ್ಯಯಿಸಿದ ಖರ್ಚು ವೆಚ್ಚಗಳಿಗೆ ಲೆಕ್ಕ ಪರಿಶೋಧನಾ ಸಮಯದಲ್ಲಿ ಕೆಲವು ಆಕ್ಷೇಪಣೆಗಳು ವ್ಯಕ್ತವಾಗಿರುವುದು ನಿಜ. ಅದಕ್ಕೆ ಸಮಂಜಸವಾದ ಉತ್ತರಗಳನ್ನು ಈಗಾಗಲೇ ಸಂಬಂಧಪಟ್ಟವರಿಗೆ ನೀಡಲಾಗಿದೆ ಮತ್ತು ಆಕ್ಷೇಪಣೆ ಕೈಬಿಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕುರಿಗಳನ್ನು ಖರೀದಿಸುವಾಗ ಕೃಷಿ ವಿವಿಯು ಕೆಟಿಪಿಪಿ ಕಾಯಿದೆ 4(ಜಿ) ನಿಯಮ ಪಾಲಿಸಿದ್ದು, ಸರ್ಕಾರವೇ ವಿನಾಯಿತಿ ನೀಡಿದೆ. ಉಪಕರಣ ಗಳನ್ನು ಖರೀದಿಸುವಾಗ ತಜ್ಞರ ಅಭಿಪ್ರಾಯ ಮತ್ತು ತಾಂತ್ರಿಕ ವಿವರಣೆಗೆ ಅನುಗುಣವಾಗಿ ಸಿಂಗಲ್ ಟೆಂಡರ್ ಒಪ್ಪಿಕೊಳ್ಳಲಾಗಿದೆ. ಬೇರೆ ಬೇರೆ ಉಪಕರಣಗಳನ್ನು ಕನಿಷ್ಠ ದರ ಪಟ್ಟಿ ಆಧಾರದ ಮೇಲೆ ಖರೀದಿಸಲಾಗಿದೆ. ಇಲ್ಲಿ ಯಾವುದೂ ಉದ್ದೇಶಪೂರ್ವಕವಾಗಿ ವಿಭಜನೆಯಾಗಿಲ್ಲ. ಹೀಗಾಗಿ ವರದಿಯ ಅಂಶಗಳು ಸತ್ಯಕ್ಕೆ ದೂರವಾಗಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.

SCROLL FOR NEXT