ಜಿಲ್ಲಾ ಸುದ್ದಿ

ಶ್ರೀರಾಂ ಫೌಂಡೇಷನ್‍ನಿಂದ ಲಾರಿ ಚಾಲಕರಿಗಾಗಿ ಮೊಬೈಲ್ ಕ್ಲಿನಿಕ್

Lingaraj Badiger

ಬೆಂಗಳೂರು: ಸರಕು ಸಾಗಣೆ ಚಾಲಕ ಸಮುದಾಯಕ್ಕೆ ಅಗತ್ಯ ಬೆಂಬಲ ನೀಡುವ ತನ್ನ ಬದ್ಧತೆಗೆ ಅನುಗುಣವಾಗಿ ಶ್ರೀರಾಂ ಗ್ರೂಪ್‍ನ ಸಾಮಾಜಿಕ ಸೇವಾ ವಿಭಾಗವಾದ ಶ್ರೀರಾಮ್ ಫೌಂಡೇಷನ್ ಈಗ ಮೊಬೈಲ್ ಕ್ಲಿನಿಕ್ ಆರಂಭಿಸಿದ್ದು, ಸಂಚಾರ ಸೇವೆಯಲ್ಲಿ ಇರುವಾಗಲೇ ಲಾರಿ ಚಾಲಕರಿಗೆ ವೈದ್ಯಕೀಯ ಚಿಕಿತ್ಸಾ ನೆರವು ಒದಗಿಸಲಿದೆ. ಅಲ್ಲದೆ, ಫೌಂಡೇಷನ್ ಪರವಾಗಿ ಈಗಾಗಲೇ ಚಾಲಕರ ಮಕ್ಕಳಿಗೆಶೈಕ್ಷಣಿಕ ವಿದ್ಯಾರ್ಥಿ ವೇತನವನ್ನು ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಿತು.

ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಮೊಬೈಲ್ ಕ್ಲಿನಿಕ್ ಗೆ ಚಾಲನೆ ನೀಡಿ, ಮಕ್ಕಳಿಗೆ ವಿದ್ಯಾರ್ಥಿವೇತನದ ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶ್ರೀರಾಂ ಟ್ರಾನ್ಸ್‍ಪೋರ್ಟ್ ಫೈನಾನ್ಸ್ ಕಂಪನಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಯು.ಜಿ. ರೇವಣಕರ್ ಅವರು, `ಚಾಲಕರಿಗೆ ಆರೋಗ್ಯ ಸೇವೆ ಒದಗಿಸುವದು ನಮ್ಮ ಗುರಿ. ಮುಖ್ಯವಾಗಿ ದೀರ್ಘಾವಧಿಯಲ್ಲಿ ಚಾಲನೆ ಮಾಡುವಾಗ ಈ ಸೇವೆ ಒದಗಿಸುವುದು ಅಗತ್ಯ. ಮೊಬೈಲ್ ಕ್ಲಿನಿಕ್ ಖಂಡಿತವಾಗಿ ನಮ್ಮ ಚಾಲಕರಿಗೆ ಅಗತ್ಯವಿರುವ ಆರೋಗ್ಯ ಸೇವೆ ಒದಗಿಸಲಿದೆ’ಎಂದರು.

ಶ್ರೀರಾಂ ಫೌಂಡೇಷನ್ ಈಗ ಪೂರ್ಣ ಸುಸಜ್ಜಿತವಾದ ಮೊಬೈಲ್ ಕ್ಲಿನಿಕ್ ಆರೋಗ್ಯ ಸೇವೆಯನ್ನು ಆರಂಭಿಸಿದ್ದು, ಇದು, ನಿರ್ಣಾಯಕ ನಿಲುಗಡೆ ತಾಣಗಳು, ಪ್ರಮುಖ ಟ್ರಾನ್ಸ್‍ಫೋರ್ಟ್ ಹಬ್‍ಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಮೊಬೈಲ್ ಕ್ಲಿನಿಕ್‍ನಲ್ಲಿ ವೈದ್ಯರು, ಹೆಚ್ಚುವರಿ ಜೀವರಕ್ಷಕ ಪರಿಕರಗಳು ಇರುತ್ತವೆ ಎಂದರು.

ಶ್ರೀರಾಮ್ ಇದಕ್ಕಾಗಿ ವಕ್‍ಹಾರ್ಟ್ ಹಾಸ್ಪಿಟಲ್ ಜತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಮೊಬೈಲ್ ಕ್ಲಿನಿಕ್‍ಗಳನ್ನು ನಿರ್ವಹಣೆ ಮಾಡಲಿದೆ. ವರ್ಕ್‍ಹಾರ್ಟ್ ವೈದ್ಯರಿಗೆ ಅಗತ್ಯ ವ್ಯಾನ್ ಮತ್ತು ಔಷಧ ಪರಿಕರಗಳನ್ನು ಒದಗಿಸಲದೆ. ವರ್ಕ್‍ಹಾರ್ಟ್ ಹಾಸ್ಪಿಟಲ್‍ನ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಹುಜೈಫಾ ಖೊರಕಿವಾಲಾ, ವರ್ಕ್‍ಹಾರ್ಟ್ ಫೌಂಡೇಷನ್‍ನ ನಿರ್ದೇಶಕ ಅಜಯ್ ಆರ್. ಸೋಮವಂಶಿ ಅವರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

SCROLL FOR NEXT