ಬೆಂಗಳೂರು: ನಗರದ ಲ್ಯಾವೆಲ್ಲೆ ರಸ್ತೆಯ ರೋಟರಿ ಕ್ಲಬ್ ವೃತ್ತದಲ್ಲಿ ಬಿಬಿಎಂಪಿ ಕಸ ವಿಂಗಡಣೆ ಮಾಡುತ್ತಿರುವುದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿದರು. ರೋಟರಿ ಕ್ಲಬ್ ವೃತ್ತದ ಸುತ್ತಮುತ್ತ ಕಸ ಸುರಿದು ವಿಂಗಡಿಸುತ್ತಿದ್ದಾರೆ.
ಇದರಿಂದ ಸಮೀಪದ ನಿವಾಸಿಗಳ ಆರೋ- ಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೆ, ಸಾರ್ವಜನಿಕರು ಹಾಗೂ ವಾಹನಸಂಚಾರಕ್ಕೆ ಅಡ್ಡಿಯಾಗುತ್ತಿದೆ. ನಗರದ ಹೊರವಲಯ ಅಥವಾ ಸಾರ್ವಜನಿಕರಿಗೆ ತೊಂದರೆಯಾಗದ ಸ್ಥಳದಲ್ಲಿ ಕಸ ವಿಂಗಡಣೆ ಮಾಡುವ ಬದಲು, ಈ ರೀತಿ ಜನರಿಗೆ ತೊಂದರೆ ಕೊಡುತ್ತಿರುವುದು ಖಂಡನೀಯ. ಕೂಡಲೇ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡು, ರೋಟರಿ ಕ್ಲಬ್ ವೃತ್ತದಲ್ಲಿ ಕಸ ವಿಂಗಡಣೆ ಮಾಡುವುದನ್ನು ನಿಲ್ಲಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದರು.