ಜಿಲ್ಲಾ ಸುದ್ದಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಡೆಸ್ನಾನ

Srinivasamurthy VN

ಸುಬ್ರಹಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ 120ಕ್ಕೂ ಅಧಿಕ ಭಕ್ತರು ಎಡೆಸ್ನಾನ ಸೇವೆಗೈದರು. ಗೋವು ಉಂಡ ಎಂಜಲು ಎಲೆಯ ಮೇಲೆ ಭಕ್ತರು ದೇವಾ ಲಯದ ಹೊರಾಂಗಣದಲ್ಲಿ ಉರುಳು ಸೇವೆ  ನಡೆಸುವ ಮೂಲಕ ಎಡೆಸ್ನಾನ ಹರಕೆ ಸಲ್ಲಿಸಿದರು.

ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತ ವೇದಮೂರ್ತಿ ಎಸ್. ರಾಜಗೋಪಾಲ ಹಾಗೂ ಪಂಡಿತ ವೇದಮೂರ್ತಿ ವಿಜಯ ಕುಮಾರ್ ಸ್ಥಳದಲ್ಲಿದ್ದು, ಎಡೆಸ್ನಾನದ ಕುರಿತು ಮಾರ್ಗದರ್ಶನ  ನೀಡಿದರು. ದೇವಳದ ಹೊರಾಂಗಣದ ಸುತ್ತಲು ಬಾಳೆಯ ಎಲೆಗಳನ್ನು ಹಾಕಿ ಅದರ ಮೇಲೆ ಊಟಕ್ಕೆ ಬಡಿಸಿದರು. ಬಳಿಕ ಗೋವುಗಳ ಮೂಲಕ ಎಲೆಯ ಮೇಲಿನ ಪ್ರಸಾದವನ್ನು ತಿನ್ನಿಸಲಾಯಿತು. ಗೋವುಗಳು ತಿಂದ ಪ್ರಸಾದದ ಮೇಲೆ ಉರುಳು ಸೇವೆ ನಡೆಯಿತು.

ಮೊದಲ ಬಾರಿ

ಚಂಪಾಷಷ್ಠಿಯಂದು ಮೊದಲ ಬಾರಿಗೆ ಈ ಬಾರಿ ಎಡೆಸ್ನಾನ ಕ್ಷೇತ್ರದಲ್ಲಿ ನಡೆದಿದೆ. ಕಳೆದ ವರ್ಷ ಚಂಪಾಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಮಡೆಮಡಸ್ನಾನ ಸೇವೆ ನಡೆದು ಬಳಿಕ ಕಿರುಷಷ್ಠಿ  ವೇಳೆಗೆ ಎಡೆಸ್ನಾನ ಸೇವೆ ನಡೆದಿತ್ತು. ಇನ್ನೂ ಎರಡು ದಿನ ಎಡೆ ಸ್ನಾನ ನಡೆಯಲಿದೆ.

SCROLL FOR NEXT