ದೇವನೂರು ಮಹಾದೇವ 
ಜಿಲ್ಲಾ ಸುದ್ದಿ

ಪುರಾಣ ಕಾವ್ಯಗಳ ರೋಗಗ್ರಸ್ತ ಗೆಡ್ಡೆ ಕಿತ್ತೆಸೆಯೋಣ: ದೇವನೂರು

ಪುರಾಣ ಕಾವ್ಯಗಳ ಗಣಿಯಿಂದ ಅದಿರನ್ನು ತೆಗೆದು, ಅದರಿಂದ ಚಿನ್ನವನ್ನು ಬೇರ್ಪಡಿಸಿ ಒಡವೆಗಳನ್ನು ಮಾಡಿಕೊಳ್ಳದಿದ್ದರೆ ನಾವು ಇಲ್ಲದವರು(ಹ್ಯಾವ್ ನಾಟ್ಸ್) ಆಗಿಬಿಡುವ ಅಪಾಯವಿದೆ.

ಮಂಗಳೂರು: ಪುರಾಣ ಕಾವ್ಯಗಳ ಗಣಿಯಿಂದ ಅದಿರನ್ನು ತೆಗೆದು, ಅದರಿಂದ ಚಿನ್ನವನ್ನು ಬೇರ್ಪಡಿಸಿ ಒಡವೆಗಳನ್ನು ಮಾಡಿಕೊಳ್ಳದಿದ್ದರೆ ನಾವು ಇಲ್ಲದವರು(ಹ್ಯಾವ್ ನಾಟ್ಸ್) ಆಗಿಬಿಡುವ ಅಪಾಯವಿದೆ.
ಭಗವದ್ಗೀತೆಯಲ್ಲಿರುವ  ತಾರತಮ್ಯದ ರೋಗದ ಗಡ್ಡೆಗಳನ್ನು ಆಪರೇಶನ್ ಮಾಡಿ ಎಸೆದು ಗೀತೆಯನ್ನು ಉಳಿಸಿಕೊಳ್ಳಬೇಕಿದೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಸಲಹೆ ನೀಡಿದ್ದಾರೆ.  ಮಂಗಳೂರಿನ ಅಭಿಮತ ಸಂಸ್ಥೆಯಿಂದ ನಗರದ ಶಾಂತಿಕಿರಣ ಸಭಾಂಗಣದಲ್ಲಿ ಆರಂಭಗೊಂಡ ಎರಡು ದಿನಗಳ `ಜನ ನುಡಿ' ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು. ಭಾರತಕ್ಕೆ ಹುಟ್ಟಿನಿಂದ ನಿರ್ಧರಿತವಾಗುವ ಜಾತಿ ಚಾತುರ್ವರ್ಣವೇ ಮುಖ್ಯ ಎನ್ನುವ ಗೀತೆಯ ಸಂದೇಶವನ್ನು ಒಪ್ಪದ ಬೌದ್ಧಿಸಂ ಪರದೇಶಿ ಆಗಬೇಕಾಯಿತು.
ಜೈನ, ಲಿಂಗಾಯತ ಜಾತಿಯಾಗಿ ಹಿಡ ಮಾಡಿಕೊಂಡು ಇಲ್ಲೇ ಉಳಿದವು. ಇಷ್ಟೆಲ್ಲ ಆಗಬೇಕಾದರೆ ಗೀತೆಯಲ್ಲಿ ನಡೆದಿರಬಹುದಾದ ವಂಚನೆಯಾದರೂ ಏನು? ಈ ಹಿನ್ನೆಲೆಯಲ್ಲಿ ಭಗವದ್ಗೀತೆ ಸೇರಿ ಪುರಾಣ ಕಾವ್ಯಗಳ ಮರುಹುಟ್ಟು ಮಾಡಿ ಕಥನ ಮಾಡಲೇಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೆ ನಾವು ಎಷ್ಟೇ ಚೆನ್ನಾಗಿ ಮಾತನಾಡಿದರೂ ಅದಕ್ಕೆ ವಿರುದ್ಧ ವಿದ್ಯಮಾನಗಳು ಸಮಾಜದಲ್ಲಿ ನಡೆಯುತ್ತಿರುತ್ತವೆ.
ಸಮುದಾಯದ ಮನಸ್ಸಿನೊಂದಿಗೆ ನಾವು ಕೊಂಡಿಯಾಗಿ ಮಥಿಸಿ ಮರುಹುಟ್ಟು ಪಡೆಯದಿದ್ದರೆ ನಾವು ಸಮುದಾಯದಿಂದಲೇ ಡ್ರಾಪ್‍ ಔಟ್ ಆಗಿಬಿಡುವ ಸಾಧ್ಯತೆ ಇದೆ ಎಂದು ದೇವನೂರು ಎಚ್ಚರಿಸಿದರು.
ಈ ಸಮಸ್ಯೆಗೆ ಪುರಾಣ ಕಾವ್ಯ ಹಿಡಿದುಕೊಂಡು ಗಾಂಧೀಜಿ ಬಳಿ ಹೋದರೆ ಅವರು ಪ್ರಾರ್ಥನೆ ಮಾಡಿಬಿಡುತ್ತಾರೆ. ಅಂಬೇಡ್ಕರ್ ಅವರು ವಾಸ್ತವ ಎಂಬಂತೆ ವಿವರಣೆ ಕೊಡುತ್ತಾರೆ. ಇನ್ನು ಪೆರಿಯಾರ್ ಅದನ್ನು ಮುರಿದು ಎಸೆಯುತ್ತಾರೆ. ಕಾರ್ಲಸ್ ಮಾರ್ಕ್ಸ್ ಬಳಿ ಹೋದರೆ ಆತ `ಧರ್ಮದ ಜೊತೆ ಬೆರೆತ ಕಾವ್ಯ ಅಫೀಮು' ಎಂದು ಆ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಆದರೆ ಲೋಹಿಯಾರಿಗೆ ಮಾತ್ರ ಪುರಾಣ ಕಾವ್ಯವನ್ನು ಕಾಣುವ ಕಣ್ಣಿದೆ. ಕುವೆಂಪು
ನಮ್ಮ ಸಾಂಸ್ಕೃತಿಕ ವಿವೇಕ ಎನಿಸುತ್ತದೆ. `ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ' ಎಂದು ಕುವೆಂಪು ಕರೆ ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT