ಜಿಲ್ಲಾ ಸುದ್ದಿ

24ರಿಂದ ಆಳ್ವಾಸ್ ವಿರಾಸತ್ ಉತ್ಸವ

Sumana Upadhyaya

ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ  `ಆಳ್ವಾಸ್ ವಿರಾಸತ್' ಮೂಡುಬಿದಿರೆ ಯಲ್ಲಿರುವ ಆಳ್ವಾಸ್ ಕಾಲೇಜು ಆವರಣದಲ್ಲಿ ಡಿ.24ರಿಂದ 27ರವರೆಗೆ ನಡೆಯಲಿದ್ದು, ಈಗಾಗಲೇ  ಪೂರ್ವ ತಯಾರಿ ನಡೆಸಲಾಗಿದೆ ಎಂದು  ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಪುತ್ತಿಗೆಯ ವಿವೇಕಾನಂದ  ನಗರದಲ್ಲಿರುವ  ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯು ವಿರಾಸತ್  ಕಾರ್ಯಕ್ರಮಗಳಿಗಾಗಿ ಸಿದ್ಧಗೊಂಡಿದೆ.  35,000 ಪ್ರೇಕ್ಷಕರು ಕುಳಿತು ಕಾರ್ಯಕ್ರಮ ವೀಕ್ಷಿಸಲು ಇಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು. 

ಡಿ.24ರಂದು ಸಂಜೆ 5.30ಕ್ಕೆ ಆಳ್ವಾಸ್ ವಿರಾಸತ್ ಕಾರ್ಯಕ್ರಮವನ್ನು ಧರ್ಮಸ್ಥಳದ  ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಖ್ಯಾತ ಗಾಯಕ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಆಳ್ವಾಸ್ ವಿರಾಸತ್ 2015 ಪ್ರಶಸ್ತಿಯನ್ನು  ಡಿ.27ರಂದು ಪ್ರದಾನ ಮಾಡಲಾಗುವುದು ಎಂದು ಮೋಹನ್ ಆಳ್ವ ತಿಳಿಸಿದರು.

SCROLL FOR NEXT