ಜಿಲ್ಲಾ ಸುದ್ದಿ

ಮತಗಟ್ಟೆಯಲ್ಲಿ ಮೊಬೈಲ್ ನಿಷೇಧ

Manjula VN

ಬೆಂಗಳೂರು: ವಿಧಾನ ಪರಿಷತ್‍ಗೆ ಸ್ಥಳೀಯ ಸಂಸ್ಥೆಯಿಂದ ಡಿ.27 ರಂದು ನಡೆಯುತ್ತಿರುವ ಚುನಾವಣೆ ಯಲ್ಲಿ ಮತಗಟ್ಟೆಗೆ ಮತದಾರರು ಮೊಬೈಲ್ ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಒಯ್ಯುವಂತಿಲ್ಲ ಎಂದು ಜಿಲ್ಲಾಧಿಕಾರಿ ವಿ. ಶಂಕರ್ ಅವರು ತಿಳಿಸಿದ್ದಾರೆ.

ಡಿ.27ರಂದು ಬೆಂಗಳೂರು ಸ್ಥಳೀಯ ಸಂಸ್ಥೆ ಕ್ಷೇತ್ರದ ವಿಧಾನಪರಿಷತ್‍ಗೆ ನಡೆಯಲಿರುವ ಚುನಾವಣೆಗೆ ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮೊದಲು, ಡಿ.25ರಂದು ಸಂಜೆ 4ಕ್ಕೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಅನಂತರ ಯಾವುದೇ ವ್ಯಕ್ತಿ ಅಥವಾ ಪಕ್ಷದಿಂದ ನಡೆಯಲಿರುವ ವಿಧಾನಪರಿಷತ್ ನ ಚುನಾವಣೆಗೆ ಬಹಿರಂಗ ಪ್ರಚಾರ, ಮೆರವಣಿಗೆ, ಸಭೆಗಳನ್ನು ಮತ್ತು ಚುನಾವಣೆಗೆ ಸಂಬಂಧಿಸಿದ ಪ್ರಚಾರ ಸಾಮಾಗ್ರಿಗಳ ವಿತರಣೆ ಮಾಡಬಾರದು.ಈ ಅಧಿನಿಯಮ ಉಲ್ಲಂಘಿಸಿದರೆ 2 ವರ್ಷ ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು.

ಮತದಾರರು ಮತಗಟ್ಟೆಯಲ್ಲಿ ನೀಡಲಾದ ಮತಪತ್ರವನ್ನು ಮಾತ್ರ ಮತಪೆಟ್ಟಿಗೆಯಲ್ಲಿ ಹಾಕತಕ್ಕದ್ದು, ಮತಪತ್ರವನ್ನು ಮತಗಟ್ಟೆಯಿಂದ ಹೊರಗೆ ತೆಗೆದುಕೊಂಡು ಹೋದರೆ ಅಥವಾ ಹಾನಿಗೊಳಿಸಿದರೆ, 1 ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT