ಮಾನವ ಧರ್ಮಪೀಠ ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿ 
ಜಿಲ್ಲಾ ಸುದ್ದಿ

ಮಠಗಳ ಹಣ ಸಮಾಜದ ಅಭಿವೃದ್ಧಿಗೆ ಬಳಕೆಯಾಗಲಿ: ನ್ಯಾ. ಶಿವರಾಜ್ ಪಾಟೀಲ್

ಮಠಗಳಿಗೆ ಪೀಠಾಧಿಪತಿಗಳಾಗಿ ಆಯ್ಕೆಯಾಗುವವರು ಕೇವಲ ಮಠದ ಆಸ್ತಿಗೆ ಒಡೆಯರಾಗದೇ ಸಮಾಜದ ಅಭಿವೃದ್ಧಿ ಹಾಗೂ ಒಳಿತಿಗಾಗಿ ಕೆಲಸ ಮಾಡಬೇಕು.

ಬೆಂಗಳೂರು: ಮಠಗಳಿಗೆ ಪೀಠಾಧಿಪತಿಗಳಾಗಿ ಆಯ್ಕೆಯಾಗುವವರು ಕೇವಲ ಮಠದ ಆಸ್ತಿಗೆ ಒಡೆಯರಾಗದೇ ಸಮಾಜದ ಅಭಿವೃದ್ಧಿ ಹಾಗೂ ಒಳಿತಿಗಾಗಿ ಕೆಲಸ ಮಾಡಬೇಕು. ಆಗ ಮಾತ್ರ ಅವರು ನಿಜವಾದ ಸ್ವಾಮೀಜಿ ಎನಿಸಿಕೊಳ್ಳುತ್ತಾರೆ ಎಂದು ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅಭಿಪ್ರಾಯಪಟ್ಟರು.
ಡಾ.ಶ್ರೀ ಜಚನಿ ರಾಷ್ಟ್ರೀಯ ಸೇವಾಪೀಠ ನಿಡುಮಾಮಿಡಿ ಮಠ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ 'ಮಾನವ ಧರ್ಮಪೀಠ' ಬೆಳ್ಳಿ ಹಬ್ಬದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. `ಮಠಗಳಿಗೆ ಪೀಠಾಧ್ಯಕ್ಷರಾಗುವವರು ಇಡೀ ಮಠದ ಆಸ್ತಿಗೆ ಒಡೆಯರಾದವರಂತೆ ವರ್ತಿಸುತ್ತಿದ್ದಾರೆ. ಆಸ್ತಿ, ಹಣದಿಂದ ಸಮಾಜಕ್ಕೆ ಒಳಿತಾಗಬೇಕು. ಮಠಗಳ ಹಣ ಸಾವಿರದಿಂದ ಲಕ್ಷ, ಲಕ್ಷದಿಂದ ಕೋಟಿಯಾಗುತ್ತದೆ. ಆದರೆ, ಅದು ಕೇವಲ ಪಾಸ್‍ಬುಕ್‍ಗೆ ಎಂಟ್ರಿಯಾಗದೆ ಶೋಷಿತರು, ಸಮಾಜದ ಅಭಿವೃದ್ಧಿಗೆ ಬಳಕೆಯಾಗಬೇಕು,' ಎಂದು ಹೇಳಿದರು.
ಜಾತ್ಯತೀತ ಪರಂಪರೆಯನ್ನು ಗಟ್ಟಿ ಮಾಡಲು ನಿಡುಮಾಮಿಡಿ ಮಠ ಹೋರಾಡುತ್ತಿದೆ. ಅದರಲ್ಲಿ ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರಿಗೆ ಜಯ ಸಿಗುತ್ತದೆ ಎನ್ನುವ ವಿಶ್ವಾಸವಿದೆ ಎಂದು ನ್ಯಾ. ಶಿವರಾಜ್ ಪಾಟೀಲ್ ಹೇಳಿದರು. `ಮೌಢ್ಯ ವಿರೋಧಿ ಕಾಯ್ದೆ ಹಾಗೂ ಹೋರಾಟ ಯಾವುದೇ ಧರ್ಮ, ನಂಬಿಕೆ, ಆಚರಣೆ ವಿರುದ್ಧವಲ್ಲ. ಬದಲಿಗೆ ಅದು ಧರ್ಮದ ಹೆಸರಿನಲ್ಲಿ ನಡೆಯುವ ಅಮಾನವೀಯತೆ, ಅನಾಗರಿಕತೆ, ಶೋಷಣೆ ಮಾಡುವ ವ್ಯವಸ್ಥೆಯ ವಿರುದ್ಧದ ಹೋರಾಟ. ಈ ಬಗ್ಗೆ ಅನ್ಯ ಧರ್ಮೀಯರು ತಪ್ಪು ತಿಳಿಯಬಾರದು. ದೇಶದಲ್ಲಿ ಜಾತಿ ವ್ಯವಸ್ಥೆ, ಭ್ರಷ್ಟಾಚಾರ, ಅಪರಾಧ, ಸ್ವಜನಪಕ್ಷಪಾತದ ವಿರುದ್ಧದ ಅಸಹಿಷ್ಣುತೆ ಇರಬೇಕು. ಧರ್ಮ, ದೇಶ, ಪ್ರದೇಶ, ಸಂಸ್ಕೃತಿ, ಗಡಿಯ ಬಗ್ಗೆ ಅಸಹಿಷ್ಣುತೆ ಬೇಡ' ಎಂದು ಅವರು ಹೇಳಿದರು.
ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿ, `ಹಿಂದಿನ ಕಾಲದಲ್ಲಿ ಶಿಕ್ಷಣ, ಸಾಮಾಜಿಕ ಅಭಿವೃದಿಟಛಿಗಾಗಿ ಧರ್ಮಪೀಠಗಳು ಸ್ಥಾಪನೆಯಾದವು. ಕ್ರಮೇಣ ಆ ಪೀಠಗಳು ಬೇರೆ ದಾರಿ ಹಿಡಿದಿವೆ. ಹೀಗಾಗಿ, ಈ ಬಗ್ಗೆ ವಿಮರ್ಶೆ ಮಾಡುವ ಪರಿಸ್ಥಿತಿ ಬಂದಿದೆ. ಧಾರ್ಮಿಕ, ಆಧ್ಯಾತ್ಮ, ಜಾತ್ಯತೀತತೆ ಬಗ್ಗೆ ಮಾರ್ಗದರ್ಶನ ಮಾಡಬೇಕಾದ ಮಠಗಳು ಜಾತಿ ವಿಷಬೀಜ ಬಿತ್ತಿ ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಿವೆ. ನೊಂದವರು, ಶೋಷಿತರು, ದುರ್ಬಲ ವರ್ಗದವರಿಗೆ ಶಿಕ್ಷಣ, ಜ್ಞಾನ ದಾನ ಮಾಡುವ ಬದಲು ವ್ಯಾಪಾರದ ದೃಷ್ಟಿಯಿಂದ ಶಿಕ್ಷಣ ವ್ಯವಸ್ಥೆ ನಡೆಸುತ್ತಿವೆ. ಇದರಿಂದಾಗಿ ಜನರು ಇವುಗಳನ್ನು ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ,'' ಎಂದರು. ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್ ಅವರು ಮಾತನಾಡಿ, ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಜಾತಿ ಜಾತಿಗಳ ನಡುವೆ ಮತ್ಸರ ಸೃಷ್ಟಿಸುತ್ತಿದ್ದಾರೆ. ದರ್ಪ, ಸ್ವಪ್ರತಿಷ್ಠೆಯಿಂದ ವಿಷ ಬೀಜ ಬಿತ್ತುತ್ತಿದ್ದಾರೆ. ರಾಜಕೀಯಕ್ಕಾಗಿ ಜಾತಿಗಳನ್ನು ಹುಟ್ಟುಹಾಕಿ ದ್ವೇಷ ಪ್ರಚಾರ ಮಾಡುತ್ತಿದ್ದಾರೆ. ಸಾಮಾಜಿಕ ಸಮಾನತೆ, ಜಾತ್ಯತೀತತೆಗಾಗಿ ಸಾಹಿತ್ಯ ಲೋಕದಲ್ಲಿ ಸೇವೆ ಸಲ್ಲಿಸಿದ್ದ ಡಾ.ಶ್ರೀ.ಜಚನಿ ಅವರಿಗೆ ಜ್ಞಾನಪೀಠ ಹಾಗೂ ಪದ್ಮಶ್ರೀ ಪ್ರಶಸ್ತಿಗಳು ಸಿಗಬೇಕಿತ್ತು. ಆದರೆ, ಮುಂದಿನ ದಿನಗಳಲ್ಲಿ ಸಿಗುತ್ತದೆ ಎನ್ನುವ ಭರವಸೆ ಇದೆ' ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಟರಾಜ್ ಹುಳಿಯಾರ್, ನಾನಾ ಮಠಗಳ ಮಠಾಧೀಶರು ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT