ಜಿಲ್ಲಾ ಸುದ್ದಿ

ಎಪಿಎಲ್ ಕಾರ್ಡ್‍ದಾರರಿಗೆ ಅನ್ನ ಭಾಗ್ಯ

Srinivasamurthy VN

ಬೆಂಗಳೂರು:1ರು.ಗೆ 1ಕೆಜಿ ಅಕ್ಕಿ ನೀಡುವ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯನ್ನು ಎಪಿಎಲ್ ಕಾರ್ಡ್‍ದಾರರಿಗೂ ವಿಸ್ತರಿಸಲು ಮುಂದಾಗಿದೆ.

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಪ್ರತಿ ಕೆಜಿಗೆ ರು.10ರಂತೆ ಎಪಿಎಲ್ ಕಾರ್ಡ್‍ದಾರರಿಗೆ 15 ಕೆ.ಜಿ ಅಕ್ಕಿ ನೀಡಲು ಸರ್ಕಾರ ಬಹುತೇಕ ಒಪ್ಪಿದೆ. ಸಂಪುಟದ ಒಪ್ಪಿಗೆ ಪಡೆದು ಬಜೆಟ್‍ನಲ್ಲಿ ಈ ಯೋಜನೆ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.

ಕುತೂಹಲಕಾರಿ ಸಂಗತಿ ಎಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನೀತಿ-ವಿಧೇಯಕದ ಬಗ್ಗೆ
ಚರ್ಚೆ ನಡೆದಿದೆ. ಸರ್ಕಾರ ಇನ್ನು ಮುಂದೆ ಪ್ರಮುಖ ಯೋಜನೆಗಳನ್ನು ಜಾರಿಗೆ ತರುವಾಗ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಿಯೇ ತೀರ್ಮಾನ ತೆಗೆದುಕೊಳ್ಳ ಬೇಕೆಂದು ರಾಜ್ಯ ಕಾಂಗ್ರೆಸ್ ಉಸ್ತು ವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕೆರೆ ಅಭಿವೃದ್ಧಿ ಪ್ರಾ„ಕಾರ, ಲಾಟರಿ ಜಾರಿ, ಅಕ್ಕಿ ವಿತರಣೆ ಹಾಗೂ ಮಠ ನಿಯಂತ್ರಣ ವಿಧೇಯಕ ವಾಪಸ್ ಪಡೆಯುವ ಬಗ್ಗೆ ಚರ್ಚಿಸಲಾಗಿದೆ.

ಅಕ್ಕಿ ಯೋಜನೆ ಹೇಗೆ?
ಅಗ್ಗದ ದರದಲ್ಲಿ ಮಧ್ಯಮ ವರ್ಗದವರಿಗೆ ಅಕ್ಕಿ ವಿತರಿಸುವ ವಿಚಾರವನ್ನು ಸಿದ್ದರಾಮಯ್ಯ ಅವರೇ ಸಭೆಯ ಮುಂದೆ ಪ್ರಸ್ತಾಪಿಸಿದರು. ಪ್ರತಿ ಕೆಜಿಗೆ ರು.15ನಂತೆ 15 ಕೆ.ಜಿ ಅಕ್ಕಿಯನ್ನು ಎಪಿಎಲ್ ಕಾರ್ಡ್‍ದಾರರಿಗೆ ನೀಡಲು ಸಾಧ್ಯವಿದೆ ಎಂದು ಅಧಿಕಾರಿಗಳು ಹೇಳಿದರು. ಇದನ್ನು ಮುಕ್ತಕಂಠದಿಂದ ಪ್ರಶಂಸಿದ ಶಾಸಕರು ರು.15 ಬದಲು ರು.10ಗೊಂದು ಕೆ.ಜಿ.ಯಂತೆ 15 ಕೆ.ಜಿ. ಅಕ್ಕಿ ನೀಡುವುದೇ ಸೂಕ್ತ ಎಂದು ಹೇಳಿದರು. ಇದಕ್ಕೆ ಒಪ್ಪಿಗೆ ನೀಡದ ಸಿಎಂ, ಹಣಕಾಸು ಅ„ಕಾರಿಗಳ ಜತೆ ಈ ಬಗ್ಗೆ ಚರ್ಚಿಸಿ, ಸಂಪುಟದ ಒಪ್ಪಿಗೆ ಪಡೆದು ಘೋಷಿಸಲಾಗುವುದು ಎಂದರು.

ಬೋಗಸ್ ಕಾರ್ಡ್ ತಡೆಯುವ ಬಗ್ಗೆ ಇದೇ ಸಂದ ರ್ಭದಲ್ಲಿ ಹಿರಿಯ ಸದಸ್ಯ ರಮೇಶ್‍ಕುಮಾರ್ ಪ್ರಸ್ತಾಪಿಸಿ ದರು. ಯಾರು ಬೋಗಸ್ ಕಾರ್ಡ್‍ದಾರರು ಎಂಬುದು ನ್ಯಾಯಬೆಲೆ ಅಂಗಡಿಯವರಿಗೆ ಗೊತ್ತಿರುತ್ತದೆ. ಹೀಗಾಗಿ ಅಂಥವರನ್ನು ಗುರುತಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿದರೆ ಎಲ್ಲವೂ ನಿಯಂತ್ರಣಕ್ಕೆ ಬರುತ್ತದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಇದು ವಿತರಣೆಾಗಿದೆ ಎಂದರು.

ಲಾಟರಿಗೆ ಅಡ್ಡಿ
ಯೇಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಪ್ರಸ್ತಾಪಿಸಿರುವ `ಕಾರುಣ್ಯ' ಲಾಟರಿ ಯೋಜನೆಗೆ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಗ್ರಾಮೀಣ ಪ್ರದೇಶದಲ್ಲಿ ಲಾಟರಿಯಿಂದ ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ. ಈಗ ಮತ್ತೆ ಅವಕಾಶ ನೀಡಿದರೆ ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆಂದು ಶಾಸಕರು ಆಕ್ರೋಶ ವ್ಯಕ್ತ ಪಡಿಸಿದರು. ಕೆರೆ ಒತ್ತುವರಿ ಸಮಸ್ಯೆಗೆ ಇತಿಶ್ರೀ ಹಾಡಲು ಅರಣ್ಯ ಸಚಿವ ಬಿ.ರಮಾನಾಥ್ ರೈ ಮಂಡಿಸುತ್ತಿರುವ ಕೆರೆ ಅಭಿವೃದ್ಧಿ ಪ್ರಾ„ಕಾರ ವಿಧೇಯಕದ ಬಗ್ಗೆ ವಿಸ್ಮೃತ ಚರ್ಚೆ ನಡೆಯಿತು.

ಜತೆಗೆ ಬಗರ್ ಹುಕುಂ ಸಮಸ್ಯೆ ಪರಿಹಾರಕ್ಕೆ ಭೂ ನ್ಯಾಯ ಮಂಡಳಿಗೆ ಶಾಸಕರನ್ನೇ ಅಧ್ಯಕ್ಷರನ್ನಾಗಿ ನೇಮಿ ಸಬೇಕು. ಕಾಂಗ್ರೆಸ್ ಕಾರ್ಯಕರ್ತರನ್ನು ಸದಸ್ಯರನ್ನಾಗಿ ನೇಮಿಸ ಬೇಕೆಂದು ಶಾಸಕರು ಮನವಿ ಸಲ್ಲಿಸಿದರು. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಮಂಡಿಸಿದ ಮಠ ನಿಯಂತ್ರಣ ವಿಧೇಯಕ ವಾಪಾಸ್ ಪಡೆಯುವ ಬಗ್ಗೆಯೂ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಂದಿನ ಸಿಎಲ್‍ಪಿ ಸಿಎಂ ಮನೆಯಲ್ಲಿ

ಸಿಎಂ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಬರುವ ಮಂಗಳವಾರ ಕಾಂಗ್ರೆಸ್ ಸಕಾಂಗ ಪಕ್ಷದ ಸಭೆ ನಡೆಯಲಿದೆ. ಕಾವೇರಿಯಲ್ಲಿ ಮಂಗಳವಾರ ಸಂಜೆ 6ರಿಂದ 8ರವರೆಗೆ ಸಭೆ ಆಯೋಜಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರೇ ಬುಧವಾರ ಪ್ರಕಟಿಸಿದ್ದಾರೆ.

SCROLL FOR NEXT