ಪಿ.ನಾಗರಾಜ್ 
ಜಿಲ್ಲಾ ಸುದ್ದಿ

ಕೆಎಂಎಫ್ ಅಧ್ಯಕ್ಷ ಪಿ. ನಾಗರಾಜ್ ಅಮಾನತು

ಬೆಂಗಳೂರು: ಅನುಮತಿ ಇಲ್ಲದೆ ಪ್ರವಾಸ, ವಾಹನ ಖರೀದಿ, ವ್ಯವಸ್ಥಾಪಕ ನಿರ್ದೇಶಕರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮತ್ತಿತರ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಕೆಎಂಎಫ್‌ನ ಅಧ್ಯಕ್ಷ ಪಿ.ನಾಗರಾಜ್ ಅವರನ್ನು 2 ವರ್ಷಗಳ ಅವಧಿಗೆ ಅಮಾನತುಗೊಳಿಸಿದೆ.

ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಹಾಲು ಒಕ್ಕೂಟದ ನಿರ್ದೇಶಕರಾಗಿದ್ದ ನಾಗರಾಜ್ ಕಳೆದ ಏಪ್ರಿಲ್‌ನಲ್ಲಿ ಕೆಎಂಎಫ್‌ಗೆ ಅವಿರೋಧವಾಗಿ ಆಯ್ಕೆಯಾಗಿದ್ದರು.

ಸಹಕಾರ ಸಂಘಗಳ ನಿಬಂಧಕರು ವಿಚಾರಣೆ ನಡೆಸಿ ಈ ನಿರ್ಧಾರ  ಪ್ರಕಟಿಸಿದ್ದಾರೆ. ನಾಗರಾಜ್ ಅವರ ಅನರ್ಹ ವಿವಾದ ರಾಜ್ಯ ರಾಜಕಾರಣದಲ್ಲಿ ವಿವಾದ ಕಿಡಿ ಹೊತ್ತಿಸಿದೆ. ಕೆಎಂಎಫ್‌ನ ಅಧ್ಯಕ್ಷ ನೇಮಕಾತಿ ಆರಂಭದಲ್ಲೇ ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್ ಎಂ.ಪಿ.ರವೀಂದ್ರ ಅವರ ನೇಮಕಕ್ಕೆ ಪ್ರಯತ್ನ ನಡೆಸಿದ್ದರು.

ಎಂ.ಪಿ.ಪ್ರಕಾಶ್ ಅವರ ಪುತ್ರರಾದ ಎಂ.ಪಿ.ರವೀಂದ್ರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಿ ತಮ್ಮ ರಾಜಕೀಯ ಗುರುವಿನ ಋಣ ತೀರಿಸಲು ಎಚ್.ಎಸ್.ಮಹದೇವಪ್ರಸಾದ್ ನಿರ್ಧರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಪ್ರಭಾವ ಬೀರಿದ ಸ್ವಜಾತೀಯ ನಾಯಕರು ನಾಗರಾಜ್ ಅವರನ್ನು ಹುದ್ದೆಗೆ ಪ್ರತಿಷ್ಠಾಪಿಸುವಲ್ಲಿ ಯಶಸ್ವಿಯಾಗಿದ್ದರು.

ಇದಕ್ಕೆ ಸಚಿವ ಡಿ.ಕೆ.ಶಿವಕುಮಾರ್ ಕೂಡ ಬೆಂಬಲವಾಗಿ ನಿಂತಿದ್ದರು. ಈಗ ನಾಗರಾಜ್ ಅವರ ಅನರ್ಹ ವಿವಾದ ರಾಜಕೀಯ ಅಂಗಳದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ನಡುವಿನ ಶೀತಲ ಸಮರ ಎಂದೇ ಬಿಂಬಿಸಲಾಗುತ್ತಿದೆ.  ಆದರೆ ದೆಹಲಿ ಪ್ರವಾಸ ಕೈಗೊಂಡಿದ್ದ ಅಧ್ಯಕ್ಷ ನಾಗರಾಜ್ ಅವರು ಪೂರ್ವಾನುಮತಿ ಪಡೆದಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಜೊತೆ ವ್ಯವಹಾರ ನಡೆಸುವ ದೇಶಗಳ ಮೇಲೆ ಶೇ.25ರಷ್ಟು ಸುಂಕ: Donald Trump

ಮಾತುಕತೆಗೂ ಸಿದ್ಧ-ಯುದ್ಧಕ್ಕೂ ಬದ್ಧ ಎಂದ ಇರಾನ್ ಸರ್ಕಾರ: ಮೃತರ ಸಂಖ್ಯೆ 648ಕ್ಕೆ ಏರಿಕೆ

SSLC ಪೂರ್ವಸಿದ್ಧತಾ ಪರೀಕ್ಷೆ: ಉತ್ತಮ Resultಗಾಗಿ ಶಿಕ್ಷಕರಿಂದಲೇ ಪ್ರಶ್ನೆಪತ್ರಿಕೆ ಲೀಕ್, 6 ಮಂದಿ ಬಂಧನ..!

ರಕ್ಷಣಾ, ಭದ್ರತಾ ಒಪ್ಪಂದ ಬಲವರ್ಧನೆ: ಭಾರತ- ಜರ್ಮನಿ ಮಹತ್ವದ ಕ್ರಮಗಳ ಘೋಷಣೆ!

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

SCROLL FOR NEXT