ಜಿಲ್ಲಾ ಸುದ್ದಿ

ಏರೋಸ್ಪೇಸ್ ಉದ್ಯಮ: ರು. 6 ಲಕ್ಷ ಕೋಟಿ ಬಂಡವಾಳ ನಿರೀಕ್ಷೆ

Vishwanath S

ಯಲಹಂಕ ವಾಯುನೆಲೆ: ಏರೋಸ್ಪೇಸ್ ಉದ್ಯಮವೊಂದರಲ್ಲೇ ಮುಂದಿನ 10 ವರ್ಷಗಳಲ್ಲಿ ರು. 6 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಲಿದೆ.

ಈ ಉದ್ಯಮಕ್ಕೆ 10 ಲಕ್ಷಕ್ಕೂ ಅಧಿಕ ಕೌಶಲ್ಯ ಭರಿತ ಉದ್ಯೋಗಿಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಶೀಘ್ರದಲ್ಲೇ ನೂತನ ಕೌಶಲ್ಯ ಅಭಿವೃದ್ಧಿನೀತಿ ಜಾರಿಗೆ ತರಲಿದೆ ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ ಖಾತೆ ರಾಜ್ಯ ಸಚಿವ ರಾಜೀವ್ ಪ್ರತಾಪ್ ರೂಡಿ ತಿಳಿಸಿದ್ದಾರೆ.

ಇನ್ನೆರಡು ತಿಂಗಳಲ್ಲಿ ಮುಂದಿನ ಅರ್ಧ ದಶಕದ ಕೌಶಲ್ಯ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ನೀಲನಕ್ಷೆ ಹೊತ್ತಿರುವ ನೀತಿ ಪ್ರಕಟಿಸುತ್ತೇವೆ. ಜತೆಗೆ ರಕ್ಷಣಾ ಇಲಾಖೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲು ಮಾತುಕತೆ ನಡೆಯುತ್ತಿದ್ದು, ನಿವೃತ್ತ ಸೈನ್ಯಾಧಿಕಾರಿ ಗಳನ್ನು ಕೌಶಲ್ಯ ತರಬೇತುದಾರರನ್ನಾಗಿ ನೇಮಿಸಿಕೊಳ್ಳುವ ಚಿಂತನೆ ನಡೆದಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

SCROLL FOR NEXT