ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ 
ಜಿಲ್ಲಾ ಸುದ್ದಿ

ಆಗಸದಲ್ಲೇ ಸುತ್ತಾಡಿದ ವಿಮಾನ

ಸರ್ವಿಸ್ ಮ್ಯಾನ್ ನ ನಿರ್ಲಕ್ಷ್ಯದಿಂದ ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೆ ಒಂದು ಗಂಟೆ ಕಾಲ ಅಕಾಶದಲ್ಲಿಯೇ ಸುತ್ತಾಡಿದ ಘಟನೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಸಂಭಿವಿಸಿದೆ...

ಬೆಳಗಾವಿ: ಸರ್ವಿಸ್ ಮ್ಯಾನ್ ನ ನಿರ್ಲಕ್ಷ್ಯದಿಂದ ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೆ ಒಂದು ಗಂಟೆ ಕಾಲ ಅಕಾಶದಲ್ಲಿಯೇ ಸುತ್ತಾಡಿದ ಘಟನೆ ಬೆಳಗಾವಿಯ 2/21/2015ದಲ್ಲಿ ಶುಕ್ರವಾರ ರಾತ್ರಿ ಸಂಭಿವಿಸಿದೆ.

ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಿದ್ದ ಸ್ಪೈಸ್ ವಿಮಾನ ನಿಗದಿಯಂತೆ 7.30ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ರನ್ ವೇ ಕುರಿತಂತೆ ಸಿಗ್ನಲ್ ತೋರಿಸುವ ಸಾಧನ ಹಾಗೂ ಲೈಟ್ ಅನ್ನು ಸಕಾಲಕ್ಕೆ ಹಾಕಬೇಕಾದ ಸರ್ವೀಸ್ ಮ್ಯಾನ್ ಈ ಸಮಯದಲ್ಲಿ ನಿಲ್ದಾಣದಲ್ಲಿ ಇರಲಿಲ್ಲ ಎನ್ನಲಾಗಿದೆ.

ಇದರಿಂದ ವಿಮಾನದ ಪೈಲೆಟ್ ಗೆ ಸರಿಯಾಗಿ ಸಿಗ್ನಲ್ ಸಿಗದೇ ರನ್ ವೇಯಲ್ಲಿ ವಿಮಾನ ಇಳಿಸಲು ಸಾಧ್ಯವಾಗಲಿಲ್ಲ. ಸುಮಾರು 1 ಗಂಟೆ ಕಾಲ ಆಕಾಶದಲ್ಲಿಯೇ ಸುತ್ತಾಡಿದ ವಿಮಾನ ಬಳಿಕ 8.30ರ ಹೊತ್ತಿಗೆ ಇಳಿಯಿತು. ಸರ್ವಿಸ್ ಮ್ಯಾನ್ ಸರಿಯಾದ ಸಮಯಕ್ಕೆ ಸಿಗ್ನಲ್ ಸಾಧನ ಅಳವಡಿಸದೇ ಇದ್ದುದೇ ಈ ಅಚಾತುರ್ಯಕ್ಕೆ ಕಾರಣವೆಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ವಿಮಾನದಲ್ಲಿ ಬೆಂಗಳೂರಿನಿಂದ 75 ಜನರು ಬೆಳಗಾವಿಗೆ ಬಂದಿದ್ದರು. ಇದೇ ವಿಮಾನ ಮರಳಿ 9.00 ಗಂಟೆಗೆ ವಾಪಸ್ ಬೆಂಗಳೂರಿನತ್ತ ತೆರಳಿದ್ದು 65 ಜನ ಈ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷ ಇರಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

SCROLL FOR NEXT