ಜಿಲ್ಲಾ ಸುದ್ದಿ

ಬೆಸ್ಕಾಂಗೆ ಹೈಕೋರ್ಟ್ ಎಚ್ಚರಿಕೆ

Mainashree

ಬೆಂಗಳೂರು: ನಗರದ ಪಾದಚಾರಿ ಮಾರ್ಗದಲ್ಲಿ ಟ್ರಾನ್ಸ್‌ಫಾರ್ಮರ್‌ಗಳ ತೆರವಿನ ಬಗ್ಗೆ ಸೂಕ್ತ ಮಾಹಿತಿ ಒದಗಿಸದೆ ಸಮಯ ಹಾಳು ಮಾಡುತ್ತಿರುವ ಬೆಸ್ಕಾಂಗೆ ಭಾರಿ ಪ್ರಾಣದಲ್ಲಿ ದಂಡೆ ವಿಧಿಸುವ ಎಚ್ಚರಿಕೆಯನ್ನು ಹೈಕೋರ್ಟ್ ನೀಡಿದೆ.

ನಗರದ ಪಾದಾಚಾರಿ ಮಾರ್ಗ ಒತ್ತುವರಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯಾ ನ್ಯಾಯಾಮೂರ್ತಿ ಡಿ.ಎಚ್ ವಘೇಲಾ ಮತ್ತು ನಾ. ರಾಮಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠ, ಯಾವ ಕಾನೂನಿನ ಅನ್ವಯ ಪಾದಚಾರಿ ಮಾರ್ಗದಲ್ಲಿ ಟ್ರಾನ್ಸ್‌ಫಾರ್ಮರ್ ಅಳವಡಿಸಿದ್ದೀರಿ? ಪ್ರತೀ ಬಾರಿ ವಿಚಾರಣೆ ವೇಳೆ ಸ್ಪಷ್ಟ ಮಾಹಿತಿ ನೀಡದೆ ಕೋರ್ಟ್‌ನ ಸಮಯವನ್ನು ಹಾಳು ಮಾಡುತ್ತಿದ್ದೀರಿ. ಹೀಗೆಯೇ ಮುಂದುವರಿದಿದ್ದೇ ಆದಲ್ಲಿ ಬೆಸ್ಕಾಂಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದೆ.

ಬೆಸ್ಕಾಂನ ಎಂಜಿನಿಯರ್‌ಗಳಿಗೆ ಇದರ ಪರಿವೆಯೇ ಇಲ್ಲ. ಇನ್ನು ಬಿಬಿಎಂಪಿ, ಪಾದಚಾರಿ ಮರ್ಗಾದಲ್ಲಿ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಅನುಮತಿ ನೀಡಿರುವುದು ನಿಜಕ್ಕೂ ಬೆಕ್ಕಸಬೆರಗಾಗುವ ಸಂಗತಿ. ಬೆಸ್ಕಾಂನ ಈ ಕಾರ್ಯ ಕೋರ್ಟ್‌ಗಳ ಆದೇಶಕ್ಕೆ ವಿರುದ್ಧವಾಗಿದೆ. ಇಷ್ಟಿದ್ದರೂ ಯಾವ ಕಾರಣಕ್ಕೆ ಪಾಲಿಕೆ ಕೈಕಟ್ಟಿ ಕುಳಿತಿದೆಯೋ ತಿಳುಯುತ್ತಿಲ್ಲ ಎಂದು ವಿಭಾಗೀಯ ಪೀಠ ಕಿಡಿಕಾರಿದೆ. ಮುಂದಿನ ವಿಚಾರಣೆ ವೇಳೆ ಬೆಸ್ಕಾಂ ಹಾಗೂ ಬಿಬಿಎಂಪಿ ಟ್ರಾನ್ಸ್‌ಫಾರ್ಮರ್‌ಗಳನ್ನು ತೆರವುಗೊಳಿಸಲು ತೆಗೆದುಕೊಳ್ಳುವ ಕ್ರಮದ ಮಾಹಿತಿ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.

SCROLL FOR NEXT