ಬೆಂಗಳೂರು: ಸಾಫ್ಟ್ ವೇರ್ ಎಂಜಿನಿಯರ್ ನನ್ನು ಬೆದರಿಸಿ ನಗದು ಹಾಗೂ ಮೊಬೈಲ್ ದೋಚಿರುವ ಘಟನೆ ರಾಜಗೋಪಾಲ ನಗರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಜಿಕೆಡಬ್ಲ್ಯೂ ಲೇಔಟ್ ನಿವಾಸಿ ಕಿಶೋರ್ ಕುಮಾರ್ ಹಣ ಹಾಗೂ ಮೊಬೈಲ್ ಕಳೆದುಕೊಂಡವರು. ಕಿಶೋರ್ ಕುಮಾರ್ ಹಾಗೂ ಅವರ ಸ್ನೇಹಿತರು ಸಿನಿಮಾ ನೋಡಿ, ರಾತ್ರಿ ಮನೆಗೆ ಒಬ್ಬರೇ ಹಿಂತಿರುಗುತ್ತಿದ್ದರು.
ಶ್ರೀರಾಮ ದೇವಸ್ಥಾನದ ಬಳಿ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಅವರನ್ನು ಅಡ್ಡಗಟ್ಟಿದ ನಾಲ್ವರು ಮಾರಕಾಸ್ತ್ರದಿಂದ ಬೆದರಿಸಿ ಈ ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.