ಅರವಿಂದ ಕೇಜ್ರಿವಾಲ್ 
ಜಿಲ್ಲಾ ಸುದ್ದಿ

ರು. 25,000 ಕೊಟ್ರೆ ಕೇಜ್ರಿ ಜತೆ ಊಟ

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಜ. 11ಕ್ಕೆ ಬೆಂಗಳೂರಿಗೆ...

ಬೆಂಗಳೂರು: ಆಮ್ ಆದ್ಮಿ  ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಜ. 11ಕ್ಕೆ ಬೆಂಗಳೂರಿಗೆ ಬರಲಿದ್ದು, ಆಸಕ್ತರು ಕನಿಷ್ಠ ರು. 25,000 ದೇಣಿಗೆ ನೀಡಿ ಇವರ ಜತೆ ಕುಳಿತು ಊಟ ಮಾಡಬಹುದು ಎಂದು ಪಕ್ಷದ ಕಾರ್ಯಕರ್ತ ಸಿದ್ದಾರ್ಥ ತಿಳಿಸಿದ್ದಾರೆ.

ಮುಂಬರುವ ದೆಹಲಿ ಚುನಾವಣೆಗಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವುದಕ್ಕಾಗಿ ಕೇಜ್ರಿ ವಾಲ್ ಬರುತ್ತಿದ್ದು, ಸೆಲ್ಪಿ ವಿತ್ ಮಫ್ಲೆರ್‌ಮ್ಯಾನ್ ಅಭಿಯಾನ ಆರಂಭಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪರಿಶುದ್ಧ ರಾಜಕಾರಣಕ್ಕೆ ಆಮ್ ಆದ್ಮಿ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ನಾಗರಿಕರಿಗಾಗಿ ಲಂಚ್ ವಿತ್ ಅರವಿಂದ್ ಎಂಬ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಪಕ್ಷ ಮುಂದಾಗಿದೆ. ಇತರ ರಾಜಕೀಯ ಪಕ್ಷಗಳು ಅನಾಮಿಕ ಮೂಲಗಳಿಂದ ಹಣಪಡೆಯುತ್ತಿರುವ ಸಂದರ್ಭದಲ್ಲಿ ಪಾರದರ್ಶಕ ದೇಣಿಗೆ ಸಂಗ್ರಹಣೆಯೇ ಪ್ರಾಮಾಣಿಕ ರಾಜ ಕಾರಣದ ಮೊದಲ ಮೆಟ್ಟಿಲು ಎಂದು ಆಮ್ ಆದ್ಮಿ ಭಾವಿಸುತ್ತದೆ  ಎಂದು ಹೇಳಿದರು. ಎಲ್ಲ ದೇಣಿಗೆದಾರರ ಹೆಸರನ್ನು  ಆನ್‌ಲೈನ್ ನಲ್ಲಿ ಪ್ರಕಟಿಸಲಾಗುವುದು. ಪ್ರತಿಯೊಬ್ಬರ ಹಣಕ್ಕೂ ನಿಖರ ಮಾಹಿತಿ ಇರುತ್ತದೆ. ಆಸಕ್ತರು 080-33013349 ಕ್ಕೆ ಕರೆ ಮಾಡಿ ಹೆಸರು ನೋಂದಾಯಿಸಬಹುದು  ಎಂದರು. ಪಕ್ಷದ ಕಾರ್ಯಕರ್ತರಾದ ವಿ. ಬಾಲ, ಬಾಬು ಮ್ಯಾಥ್ಯೂ, ಪೃಥ್ವಿ, ರಾಧಾಕೃಷ್ಣ, ರೋಹಿತ್ ರಂಜನ್, ಮಹಾಂತೇಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT