ಇರುವೆ 
ಜಿಲ್ಲಾ ಸುದ್ದಿ

ಪುಟ್ಟ ಇರುವೆ ಬಗ್ಗೆ ಕೃತಿ ಕನ್ನಡಿಗರ ದೊಡ್ಡ ಸಾಧನೆ

ಹುಲಿಗಳ ಬಗ್ಗೆ 100ಕ್ಕೂ ಹೆಚ್ಚು ಪುಸ್ತಕಗಳು...

-ಬೆಂಗಳೂರು ಪರಿಸರ ವಿಜ್ಞಾನಿಗಳ ಪರಿಶ್ರಮಕ್ಕೆ ಸಿಕ್ಕಿತು ಮನ್ನಣೆ

ಬೆಂಗಳೂರು:
ಹುಲಿಗಳ ಬಗ್ಗೆ 100ಕ್ಕೂ ಹೆಚ್ಚು ಪುಸ್ತಕಗಳು... ಆನೆಗಳ ಬಗ್ಗೆ 60ಕ್ಕೂ ಹೆಚ್ಚು ಪುಸ್ತಕಗಳು... ಅರಣ್ಯಗಳ ಬಗ್ಗೆ ಅಸಂಖ್ಯಾತ ಪುಸ್ತಕಗಳು... ಆದರೆ, ಇರುವೆ ಬಗ್ಗೆ...?

ಬರೋಬ್ಬರಿ 103 ವರ್ಷಗಳ ನಂತರ ಭಾರತದಲ್ಲಿ ಇರುವೆಗಳ ಮೊಟ್ಟ ಮೊದಲ ಪುಸ್ತಕ ಪ್ರಕಟಗೊಂಡಿದೆ. 'ಆನ್ ಎ ಟ್ರೇಲ್ ವಿತ್ ಆ್ಯಂಟ್ಸ್‌' ಕೆಲವರ್ಷ ಹಿಂದೆ ಪ್ರಕಟವಾಗಿರುವ ಈ ಪುಸ್ತಕ ದಾಖಲೆಯ ಮಾರಾಟವನ್ನೂ ಕಂಡಿದೆ. ಎರಡು ಸಾವಿರ ಪ್ರತಿ ಮಾರಾಟವಾಗಿರುವ ಈ ಕೃತಿ ರಚಿಸಿದವರು ಕನ್ನಡದ ವಿಜ್ಞಾನಿಗಳು ಎನ್ನುವುದು ಹೆಮ್ಮೆ.

ಹಕ್ಕಿಗಳು, ಚಿಟ್ಟೆಗಳ ಕುರಿತ ಪುಸ್ತಕಗಳು ಚೆನ್ನಾಗಿಯೇ ಮಾರಾಟವಾಗುತ್ತವೆ. ಏಕೆಂದರೆ, ಹಕ್ಕಿ, ಚಿಟ್ಟೆಗಳ ಅಧ್ಯಯನವನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುವವರು ಇಂಥ ಪುಸ್ತಕಗಳನ್ನ ಕೊಳ್ಳುತ್ತಾರೆ. ಆದರೆ, ಇರುವೆಗಳ ಆಧ್ಯಯನ ಮಾಡುತ್ತಿರುವವರು ಅತಿ ಕಡಿಮೆ. ಹೀಗಿದ್ದರೂ, ಈ ಪುಸ್ತಕ 2 ಸಾವಿರ ಪ್ರತಿಗಳ ಮಾರಾಟ ಕಂಡಿರುವುದು ದಾಖಲೆಯಾಗಿದೆ.

ಬೆಂಗಳೂರಿನ ಪರಿಸರ ವಿಜ್ಞಾನಿಗಳಾದ ಸುನೀಲ್ ಕುಮಾರ್ ಮತ್ತು ಅಜಯ್ ನರೇಂದ್ರ ದಶಕಗಳ ಕಾಲ ನಡೆಸಿದ ಸಂಶೋಧನೆಯ ಫಲವಾಗಿ ಈ ಪುಸ್ತಕ ಹೊರಬಂದಿದೆ. ಬ್ರಿಟಿಷ್ ವಿಜ್ಞಾನಿ ಲೆಫ್ಟಿನೆಂಟ್ ಕರ್ನಲ್ ಸಿ.ಟಿ.ಬಿಂಘ್ಯಾಮ್ 1903ರಲ್ಲಿ ಇರುವೆಗಳ ಮೇಲೆ ಮೊಟ್ಟಮೊದಲ ಪುಸ್ತಕ ಹೊರತಂದರು. ಆ ನಂತರ ದೇಶದ ಯಾವ ವಿಜ್ಞಾನಿಯೂ ಇರುವೆಗಳ ಮೇಲೆ ಕೇಂದ್ರಿಕೃತ ಸಂಶೋಧನೆ ನಡೆಸಲಿಲ್ಲ.

ಆ ಕುರಿತ ಕೈಪಿಡಿಯನ್ನೂ ಹೊರತಂದಿಲ್ಲ. ಆದರೆ, ಕನ್ನಡದ ವಿಜ್ಞಾನಿಗಲು ಆ ಸಾಧನೆಯನ್ನು ಮಾಡಿ ತೋರಿಸಿದ್ದಾರೆ. ಅವರ ಪರಿಶ್ರಮಕ್ಕೆ ಬೆಲೆ ಸಿಕ್ಕಿದೆ ಎನ್ನುವುದೇ ಸಮಾಧಾನದ ಸಂಗತಿ.

220 ಪುಟಗಳ ಈ ಪುಸ್ತಕದಲ್ಲಿ 200ಕ್ಕೂ ಹೆಚ್ಚು ಇರುವೆಗಳ ಫೋಟೋಗಳನ್ನು ಬಳಸಲಾಗಿದೆ. ಅನೇಕ ಜಾತಿಯ ಇರುವೆಗಳ ಬಗ್ಗೆ ಮಾಹಿತಿ ಇದೆ. ಇರುವೆಗಲನ್ನು ಗುರುತಿಸುವುದು ಹೇಗೆ, ಅವುಗಳ ಜೀವನ ಶೈಲಿ, ಪರಿಸರದಲ್ಲಿ ಇರುವೆಗಳ ಪಾತ್ರ ಈ ಎಲ್ಲ ಅಂಶಗಳನ್ನು ಪುಸ್ತಕದಲ್ಲಿ ವಿವರಿಸಲಾಗಿದೆ. ಇರುವೆ ಚಿಕ್ಕದಾದರೂ ಪರಿಸರ ಸಮತೋಲನದಲ್ಲಿ ಅದರ ಕೊಡುಗೆ ದೊಡ್ಡದು. ಹೀಗಾಗಿ ಇರುವೆಗಳ ಸಂರಕ್ಷಣೆ ಅತಿ ಮುಖ್ಯ. ಈ ಪುಟ್ಟ ಜೀವಿಯಿಂದ ಕುರಿತು ಅರಿಯಲು ಪುಸ್ತಕ ಓದಿ.

ಇರುವೆಗಳ ಮಾರಾಟದಿಂದ ಬಂದ ಹಣದಿಂದ ನಿಧಿಯೊಂದನ್ನು ಸ್ಥಾಪಿಸಲಾಗುವುದು. ಆ ಹಣವನ್ನು ಇರುವೆಗಳ ಮೇಲೆ ಸಂಶೋಧನೆ ನಡೆಸಲು ಬಯಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರವಾಗಿ ನೀಡಲು ನಿರ್ಧರಿಸಿದ್ದೇವೆ. ಇರುವೆಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ನಮ್ಮ ಉದ್ದೇಶ
- ಎಂ. ಸುನಿಲ್ ಕುಮಾರ್

ಇರುವೆಗಳ ಕುರಿತು ಅಧ್ಯಯನ ಹೆಚ್ಚಿಸುವುದು ನಮ್ಮ ಈ ಪುಸ್ತಕದ ಮೊದಲ ಉದ್ದೇಶ. ಜೀವಜಾಲದಲ್ಲಿ ಇರುವೆಗಳಿಗೆ ಅತಿ ಹೆಚ್ಚಿನ ಸ್ಥಾನವಿದೆ. ಆದರೆ, ಈ ಪುಟ್ಟ ಜೀವಿಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಮ್ಮ ದೇಶದಲ್ಲಿ ನಡೆದಿಲ್ಲ. ಪಕ್ಷಿ ವೀಕ್ಷಣೆ, ಚಿಟ್ಟೆಗಳ ಅಧ್ಯಯನಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಬರುತ್ತಿದ್ದಾರೆ. ಇರುವೆಗಳ ಅಧ್ಯಯನವೂ ಹೆಚ್ಚಿದಲ್ಲಿ ಪರಿಸರ ಅಧ್ಯಯನ ಪರಿಪೂರ್ಣ ಹಂತಕ್ಕೆ ಬರುತ್ತದೆ
-ಅಜಯ್ ನರೇಂದ್ರ

ಭೂಮಿಯ ಮೂಲೆಮೂಲೆಯಲ್ಲೂ ಇರುವೆ
ಭೂಮಿಯ ಮೇಲೆ 20 ಸಾವಿರ ಜಾತಿಯ ಇರುವೆಗಳಿವೆ. ಧ್ರುವ ಪ್ರದೇಶಗಳ ಅತಿ ಶೀತ ವಲಯ ಬಿಟ್ಟರೆ, ಇಡೀ ಭೂಮಿಯ ಎಲ್ಲ ಮೂಲೆಮೂಲೆಗಳಲ್ಲೂ ಇರುವೆಗಳನ್ನು ಕಾಣಬಹುದು. ದೇಶದಲ್ಲಿ 800ಕ್ಕೂ ಹೆಚ್ಚು ಜಾತಿಯ ಇರುವೆಗಳಿವೆ. ಈ ಇರುವೆಗಳು ಭೂಮಿಯ ಮಣ್ಣನ್ನು ಮೇಲೆ ಕೆಳಗೆ ಮಾಡುತ್ತವೆ. ರೈತನಿಗೆ ನೇರವಾಗಿ ಸಹಕಾರ ಮಾಡುತ್ತದೆ. ಎರೆಹುಳುವಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ರೈತನಿಗೆ ನೆರವಾಗುತ್ತವೆ. ಭಾರಿ ಪ್ರಮಾಣದಲ್ಲಿ ತ್ಯಾಜ್ಯ ತಿಂದು ಗೊಬ್ಬರವನ್ನಾಗಿ ಪರಿವರ್ತನೆ ಮಾಡುತ್ತವೆ. ಆಹಾರ ಸರಪಳಿಯಲ್ಲಿ ತಳಹದಿಯಂತೆ ಕೆಲಸ ಮಾಡುತ್ತವೆ. ಮರದ ಕಾಂಡಗಳನ್ನು ತಿಂದು ಫೋಷಕಾಂಶ ಪರಿವರ್ತನೆ ಮಾಡುತ್ತವೆ. ಒಂದೊಮ್ಮೆ ಇರುವೆಗಲನ್ನು ನಾಶಪಡಿಸಿದಲ್ಲಿ ಕೆಳ ಹಂತದಲ್ಲಿ ಶಕ್ತಿ ಪ್ರವಹಿಸುವ ಪ್ರಕ್ರಿಯೆ ನಾಶವಾಗಿ ಆಹಾರ ಸರಪಳಿ ತುಂಡಾಗುತ್ತದೆ.

-ವಿನೋದಕುಮಾರ ಬಿ.ನಾಯಕ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT