ಮುಖ್ಯ ಮಂತ್ರಿ ಸಿದ್ದರಾಮಯ್ಯ 
ಜಿಲ್ಲಾ ಸುದ್ದಿ

ಬೌದ್ಧ ವಿಶ್ವವಿದ್ಯಾಲಯಕ್ಕೆ ೧೦ ಕೋಟಿ ಅನುದಾನ: ಸಿ ಎಂ

ಚಾಮರಾಜನಗರದ ಜೋತಿಗೌಡನಪುರದಲ್ಲಿ ನಳಂದ ಬೌದ್ಧ ವಿಶ್ವವಿದ್ಯಾಲಯ

ಮೈಸೂರು: ಚಾಮರಾಜನಗರದ ಜೋತಿಗೌಡನಪುರದಲ್ಲಿ ನಳಂದ ಬೌದ್ಧ ವಿಶ್ವವಿದ್ಯಾಲಯ ಮತ್ತು ಅಂಬೇಡ್ಕರ್ ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ೧೦ ಕೋಟಿ ಅನುದಾನ ಘೋಷಿಸಿದ್ದು, ೫೦ ಎಕರೆ ಜಾಗವನ್ನು ಲೀಸ್ ಕೊಡಲಾಗುವುದು ಎಂದಿದ್ದಾರೆ.

ರಾಜ್ಯದ ಮೊದಲ ಬೌದ್ಧ ಸಮಾವೇಶವನ್ನು ಭಾನುವಾರ ಉದ್ಘಾಟಿಸಿದ ಸಿದ್ದರಾಮಯ್ಯ, ವಿಶ್ವವಿದ್ಯಾಲಯದ ಸ್ಥಾಪನೆಗೆ ಎಲ್ಲ ಅಗತ್ಯ ನೆರವು ನೀಡುತ್ತೇವೆ ಎಂದಿದ್ದಾರೆ.

ಬುದ್ಧ ಪೂರ್ಣಿಮೆಯ ದಿನವನ್ನು ರಜಾದಿನವಾಗಿ ಘೋಷಿಸಲು ನಿರಾಕರಿಸಿರುವ ಸಿದ್ದರಾಮಯ್ಯ, ನಾನು ವ್ಯಯಕ್ತಿಕವಾಗಿ  ರಜೆ ನೀಡುವುದರ ವಿರುದ್ಧ ಆದರೆ ಬುದ್ಧ ಪೂರ್ಣಿಮೆಯನ್ನು ಆಚರಿಸಲು ಲಕ್ಷಾಂತರ ಜನ ಸೇರಲಿದ್ದಾರೆ ಎಂದಿದ್ದಾರೆ.

ತುಳಿತಕ್ಕೊಳಗಾಗಿದ್ದ ಸಮುದಾಯಕ್ಕೆ ಆತ್ಮ ಗೌರವದ ಬೆಳಕು ತೋರಿದ ಆಧ್ಯಾತ್ಮಿಕ ನಾಯಕ ಡಾ. ಬಿ ಆರ್ ಎಂಬೇಡ್ಕರ್ ಎಂದಿರುವ ಸಿದ್ದರಾಮಯ್ಯ ಶಾಂತಿ ಮತ್ತು ಆತ್ಮ ಗೌರವನ್ನು ಸಾರುವ ಧರ್ಮಗಳ ಅಗತ್ಯ ಸಮಾಜಕ್ಕಿದೆ ಎಂದಿದ್ದಾರೆ.

ಲೋಕಸಭೆಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿ ದೇಶದ ಏಕತೆ, ಜಾತಿ ಮತ್ತು ಧರ್ಮವನ್ನು ಮೀರಿದ್ದು ಎಂದಿದ್ದಾರೆ. ಘರ್ ವಾಪಸಿ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು ಹಿಂದೂ ಧರ್ಮದಲ್ಲಿ ಅಸಂಖ್ಯಾತ ಜಾತಿಗಳಿವೆ. ಮರುಮತಾಂತರ ಆದವರನ್ನು ಯಾವ ಜಾತಿಗೆ ಮರಳಿಸುತ್ತಾರೆ? ಎಂದಿದ್ದಾರೆ.

ಸಚಿವ ವಿ ಶ್ರೀನಿವಾಸ ಪ್ರಸಾದ್ ಮತ್ತು ಎಚ್ ಸಿ ಮಹದೇವಪ್ಪ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಭಾಷಣ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT