ಕಾಂಗ್ರೆಸ್ ಮುಖಂಡ ಜನಾರ್ಧನಪೂಜಾರಿ 
ಜಿಲ್ಲಾ ಸುದ್ದಿ

ಮಂತ್ರಿಗಿರಿ ಆಸೆ ಇದ್ದರೆ ಸ್ಪೀಕರ್ ರಾಜೀನಾಮೆ ಕೊಡಲಿ

'ನಿಮ್ಮನ್ನು ಸ್ಪೀಕರ್ ಮಾಡಿದ್ದು ಕಾಂಗ್ರೆಸ್. ಪ್ರತಿಪಕ್ಷ ಕೆಲಸ ಮಾಡಲು ನಿಮಗೆ ಅಧಿಕಾರ ಕೊಟ್ಟಿದ್ದು ಯಾರು?...

ಮಂಗಳೂರು: ಸ್ಪೀಕರಾಗಿದ್ದುಕೊಂಡು ಅಧಿಕಾರಿಗಳನ್ನು ನಿಯಂತ್ರಿಸಲಾಗದಿದ್ದರೆ ರಾಜಿನಾಮೆ ಕೊಡಿ. ಪ್ರತಿಪಕ್ಷದ ಕೆಲಸ ಮಾಡಬೇಡಿ ಎಂದು ಕಾಂಗ್ರೆಸ್ ಮುಖಂಡ ಜನಾರ್ಧನಪೂಜಾರಿ, ಸ್ಪೀಕರ್ ಕಾಗೋಡು ತಿಮ್ಮಪ್ಪ ವಿರುದ್ದ ವಾಗ್ದಾಳಿ ಮಾಡಿದ್ದಾರೆ.

'ನಿಮ್ಮನ್ನು ಸ್ಪೀಕರ್ ಮಾಡಿದ್ದು ಕಾಂಗ್ರೆಸ್ ಪಕ್ಷ. ಪ್ರತಿಪಕ್ಷ ಕೆಲಸ ಮಾಡಲು ನಿಮಗೆ ಅಧಿಕಾರ ಕೊಟ್ಟಿದ್ದು ಯಾರು? ಸರ್ಕಾರ ಪತನಗೊಳಿಸಲು ನೀವು ಬಯಸಿದ್ದೀರಾ ಅಥವಾ ಸಚಿವ ಸ್ಥಾನ ಆಕಾಂಕ್ಷಿಯಾಗಿ ಈ ರೀತಿ ಮಾಡುತ್ತಿದ್ದೀರಾ' ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡರು.

ಅನುಭವಿ ರಾಜಕಾರಣಿಯಾಗಿರುವ ಸ್ಪೀಕರ್ ಕಾಗೋಡು ತಿಮ್ಮಪ್ಪ, ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಯುದ್ದಸಾರಿರುವುದು ವಿಪರ್ಯಾಸ. ಕಾಂಗ್ರೆಸ್‌ನಲ್ಲಿದ್ದು ಅಧಿಕಾರ ಅನುಭವಿಸಿದ ಅವರ ಈ ರೀತಿಯ ವರ್ತನೆ ಖಂಡನೀಯ. ಆರೋಗ್ಯ ಸಚಿವರಾಗಿದ್ದಾಗ ಇಲಾಖೆಯ ಸಮಸ್ಯೆಗಳನ್ನೇ ಅವರಿಂದ ಬಗೆಹರಿಸಲಾಗಿಲ್ಲ ಎಂದು ಟೀಕಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BRICS 2026: ಬ್ರಿಕ್ಸ್‌ ಶೃಂಗಸಭೆಗೆ ದೆಹಲಿಗೆ ಬಂದಿಳಿದ ಕ್ಸಿ ಜಿನ್‌ಪಿಂಗ್; ಕುತೂಹಲ ಕೆರಳಿಸಿದ ಭಾರತ-ಚೀನಾ ಮಾತುಕತೆ

ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗುವಂತಿಲ್ಲ, ಪಟಾಕಿ ಸಿಡಿಸಿದ್ರೆ ಗ್ರಹಚಾರ ಬಿಡಿಸ್ತೇನೆ: ಇನ್ಸ್​​ಪೆಕ್ಟರ್ ಧನಂಜಯ್ ಗೆ ಪ್ರತಾಪ್ ಸಿಂಹ ವಾರ್ನಿಂಗ್!

Non Committal?: 'ಎಷ್ಟು ರಿಹರ್ಸಲ್ ಮಾಡಿಸ್ತೀರೋ.. ಆದ್ರೆ ಬರ್ತಾ ಇದೀನಿ'!, ಅಗರ್ಕರ್, ಗಂಭೀರ್ ರೋಸ್ಟ್ ಮಾಡಿದ್ರಾ Rohit Sharma?

Ganesh Chaturthi: ಬೆಂಗಳೂರಿನಲ್ಲಿ ಈ ದಿನ ಮಾಂಸ ಮಾರಾಟ, ಪ್ರಾಣಿವಧೆ ಸಂಪೂರ್ಣ ನಿಷೇಧ! ಕಸಾಯಿಖಾನೆಗಳು ಬಂದ್

BRICS 2026: ವ್ಯಾಪಾರ ಏಕೀಕರಣಕ್ಕೆ ಒತ್ತಾಸೆ ಕೋರಿದ ಪ್ರಧಾನಿ ಮೋದಿ ಮೊದಲ ದಿನ ಹೇಳಿದ್ದೇನು?