ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಕೆಂಪುಕೋಟೆ ನೋಡುವ ಮೊದಲು ನೂರಾರು ಬಗೆಯ ಹಣ್ಣುಗಳನ್ನು ಸವಿಯಬಹುದು. ರಾಷ್ಟ್ರೀಯ ತೋಟಗಾರಿಕಾ ಮಂಡಳಿ ಹಾಗೂ ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ 'ಹಾರ್ಟಿ ಸಂಗಮ್' ಎನ್ನುವ ತೋಟಗಾರಿಕೆ ಮೇಳೆ ಆಯೋಜಿಸಿದೆ.
ಸಂಗಮ್ ಮೇಳ ಜ.9ರಿಂದ 11ರವರೆಗೆ ಲಾಲ್‌ಬಾಗ್‌ನಲ್ಲಿ ನಡೆಯಲಿದೆ. ದೇಶದ ನಾನಾ ರಾಜ್ಯಗಳಿಂದ ತೊಟಗಾರಿಕೆ ಬೆಳೆಗಾರರನ್ನು ಮತ್ತು ನಡೆಯಲಿದೆ. ದೇಶದ ನಾನಾ ರಾಜ್ಯಗಳಿಂದ ತೋಟಗಾರಿಕೆ ಬೆಳೆಗಾರರನ್ನು ಮತ್ತು ಖರೀದಿದಾರರನ್ನು ಒಂದೇ ಚಾವಡಿ ಅಡಿ ಸಂಗಮಗೊಳಿಸುವ ಉದ್ದೇಶವನ್ನು ಮೇಳ ಹೊಂದಿದೆ.
ಮೇಳದಲ್ಲಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ಪಂಜಾಬ್, ಹರಿಯಾಣ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ತಮಿಳುನಾಡು, ಕೇರಳ ರಾಜ್ಯಗಳಿಂದ ಕಿತ್ತಳೆ, ದಾಳಿಂಬೆ, ದ್ರಾಕ್ಷಿ ಹಾಗೂ ತರಕಾರಿಗಳನ್ನು ಮಾರಾಟ ಮಾಡಲು 60 ಮಳಿಗೆಗಳನ್ನು ನಿರ್ಮಿಸಲಾಗುತ್ತಿದ್ದು, 100ಕ್ಕೂ ಹೆಚ್ಚು ರೈತರು ಪಾಲ್ಗೊಳ್ಳಲ್ಲಿದ್ದಾರೆ.
ಜ.10ರಂದು ತಾಂತ್ರಿಕ ಅಧಿವೇಶನ ಹಾಗೂ ಖರೀದಿದಾರರ-ಮಾರಾಟಗಾರರ ಸಭೆಯನ್ನು ಲಾಲ್‌ಬಾಗ್‌ನ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದು ರಾಷ್ಟ್ರೀಯ ತೋಟಗಾರಿಕಾ ಮಂಡಳಿ ಉಪ ನಿರ್ದೇಶಕ ಧಾಲ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದ್ದಾರೆ.
ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಮೇಳ ಉದ್ಘಾಟಿಸಲಿದ್ದು, ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಅನಂತ್ ಕುಮಾರ್, ತೋಟಗಾರಿಕೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪಾಲ್ಗೊಳ್ಳಲ್ಲಿದ್ದಾರೆ. ಕರ್ನಾಟಕ ರಾಜ್ಯ ತೋಟಗಾರಿಕೆ ನಿರ್ದೇಶಕ ಷಡಕ್ಷರಿ ಸ್ವಾಮಿ ಉಪಸ್ಥಿತರಿದ್ದರು.