ಮಂಕುತಿಮ್ಮನ ಕಗ್ಗ ಆ್ಯಪ್ ಸ್ಕ್ರೀನ್ ಶಾಟ್ 
ಜಿಲ್ಲಾ ಸುದ್ದಿ

ಮಂಕುತಿಮ್ಮನ ಅಪ್ಪಣೆ ಇಲ್ಲದೆ ಕಗ್ಗದ ಆ್ಯಪ್‌?

ಇತ್ತೀಚೆಗೆ ಸುದ್ದಿಪತ್ರಿಕೆಯೊಂದರಲ್ಲಿ ಪ್ರಕಟವಾದ ಅಂಕಣವೊಂದರಲ್ಲಿ ಲೇಖಕರು 'ವಾರದ ಆ್ಯಪ್‌' ಎಂದು ಮಂಕುತಿಮ್ಮನ...

ಬೆಂಗಳೂರು: ಇತ್ತೀಚೆಗೆ ಸುದ್ದಿಪತ್ರಿಕೆಯೊಂದರಲ್ಲಿ ಪ್ರಕಟವಾದ ಅಂಕಣವೊಂದರಲ್ಲಿ ಲೇಖಕರು 'ವಾರದ ಆ್ಯಪ್‌' ಎಂದು ಮಂಕುತಿಮ್ಮನ ಕಗ್ಗ ಆ್ಯಪ್ ನ್ನು ಪರಿಚಯಿಸಿದ್ದರು. ಕಗ್ಗದ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಆ್ಯಂಡ್ರಾಯಿಡ್ ಫೋನಲ್ಲಿ ಹಾಕಿಕೊಳ್ಳಿ ಎಂಬ ಸಲಹೆಯನ್ನೂ ಆ ಲೇಖನದಲ್ಲಿ ನೀಡಲಾಗಿತ್ತು.
 ಆದರೆ ಡಿವಿಜಿಯವರ ಕಗ್ಗದ ಹಕ್ಕುಸ್ವಾಮ್ಯ (ಕಾಪಿರೈಟ್) ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯದ್ದಾಗಿದೆ. ಕಗ್ಗದ ಯಾವುದೇ ಭಾಗವನ್ನಾಗಲೀ ಬಳಸುವ ಮುನ್ನ ಸಂಸ್ಥೆಯಿಂದ ಲಿಖಿತ ಅನುಮತಿ ಪಡೆದಿರಬೇಕು. ಪೂರ್ವಾನುಮತಿಯಿಲ್ಲದೆ ಕಗ್ಗವನ್ನು ಬಳಸಿಕೊಳ್ಳುವುದು ತಪ್ಪು.ಆದಾಗ್ಯೂ, ಪ್ರಸ್ತುತ ಲೇಖನದಲ್ಲಿ ನಮೂದಿಸಿರುವ ಕಗ್ಗದ ಆ್ಯಪ್ ಯಾವುದೇ ಕೃತಿ ಸ್ವಾಮ್ಯದ ವಿಚಾರವನ್ನು ತಿಳಿಸಿಲ್ಲ ಹಾಗೂ ಪಡೆದಿಲ್ಲ ಎಂಬ ವಿಚಾರವೀಗ ಸಾಹಿತ್ಯಲೋಕದಲ್ಲಿ ಚರ್ಚೆಗೀಡಾಗಿದೆ. ಮಂಕುತಿಮ್ಮನ ಕಗ್ಗ ಕನ್ನಡದ ಬೆಸ್ಟ್ ಸೆಲ್ಲರ್ ಕೃತಿಗಳಲ್ಲಿ ಅಗ್ರಪಂಕ್ತಿಯಲ್ಲಿರುವ ಕೃತಿ, ಅಂಥ ಮೌಲ್ಯಯುತ ಕೃತಿಯ ಹಕ್ಕುಸ್ವಾಮ್ಯವನ್ನು ಪಡೆಯದೆ, ಕಗ್ಗದ ಆ್ಯಪ್‌' ಹೊಸೆದಿರುವುದು ಖಂಡನಾರ್ಹ ಎಂದು ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗಿರುತ್ತಿರುವುದಂತೂ ನಿಜ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚುನಾವಣಾ ಆಯೋಗದಲ್ಲಿ ಆಂತರಿಕ ಬಿಕ್ಕಟ್ಟು? ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು! ಸುಪ್ರೀಂ ಮಧ್ಯಪ್ರವೇಶಕ್ಕೆ ವಿಪಕ್ಷಗಳ ಆಗ್ರಹ

ನವರಾತ್ರಿ ವೇಳೆ ಸಂಸತ್ತಿನ ವಿಶೇಷ ಅಧಿವೇಶನ ?: ಮಹಿಳಾ ಮೀಸಲಾತಿ- ಕ್ಷೇತ್ರ ಪುನರ್‌ವಿಂಗಡಣೆ ಚರ್ಚೆ ಸಾಧ್ಯತೆ

'ಒಪ್ಪಂದಕ್ಕೆ ಬನ್ನಿ, ಇಲ್ಲವೇ ನರಕಕ್ಕೆ ಹೋಗಿ': ವಿಶ್ವಸಂಸ್ಥೆಯಲ್ಲಿ Iran ವಿರುದ್ಧ Trump ಗುಡುಗು; India-Pak ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಚಾರ..!

ಮುಳುವಾಯ್ತಾ ಓಲೈಕೆ ರಾಜಕಾರಣ?; ಯಾದವರು 7%, ಮುಸ್ಲಿಮರು 22%, ನಮ್ಮಲ್ಲೇ CM ಅಭರ್ಥಿ ಮಾಡಿ, ಅಖಿಲೇಶ್ ಯಾದವ್`ಗೆ ಮೌಲಾನಾ ಗಡುವು!

ಹಬ್ಬದ ಸಂಭ್ರಮದ ನಡುವೆ ದುರಂತ; ಕೊಯೆಲ್ ನದಿಯಲ್ಲಿ ಮೂವರು ಅಪ್ರಾಪ್ತರು ಸೇರಿ 5 ಮಂದಿ ಜಲಸಮಾಧಿ!