ಟ್ಯಾಕ್ಸಿ ಫಾರ್ ಶ್ಯೂರ್ 
ಜಿಲ್ಲಾ ಸುದ್ದಿ

ಟ್ಯಾಕ್ಸಿ ಫಾರ್ ಶ್ಯೂರ್‌ನಿಂದ ಈಗ ಆಟೋ ಸೌಲಭ್ಯ

ಬೆಂಗಳೂರು: ನಾಲ್ಕು ಕಿಲೋಮೀಟರ್‌ಗೆ ಕೇವಲ ರು. 49ರ ದರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವ ಸೇವೆ ಪ್ರಾರಂಭಿಸಿದ ಬೆನ್ನಲ್ಲೇ ಟ್ಯಾಕ್ಸಿ ಫಾರ್ ಶ್ಯೂರ್ ಸಂಸ್ಥೆ ನಗರದಲ್ಲಿ ಆಟೋಗಳನ್ನು ಕೂಡ ಆರಂಭಿಸಿದೆ.

500 ಆಟೋಗಳೊಂದಿಗೆ ಈ ಯೋಜನೆಯನ್ನು ಪ್ರಾರಂಭಿಸಿದ್ದು, 2ರಿಂದ 3 ವಾರಗಳಲ್ಲಿ ಸಾವಿರ ಆಟೋಗಳನ್ನು ಮೀರುವ ಗುರಿ ಹೊಂದಿದೆ. ಟ್ಯಾಕ್ಸಿ ಫಾರ್ ಶ್ಯೂರ್ ಮೊಬೈಲ್ ಆ್ಯಪ್‌ನಲ್ಲಿ 1ನ್ನು ಕ್ಲಿಕ್ಕಿಸಿದರೆ ಸಾಕು, ಆಟೋ ಪ್ರತ್ಯಕ್ಷ.

ರು. 49 ದರದಲ್ಲಿ ಟ್ಯಾಕ್ಸಿ ಸೇವೆ ಒದಗಿಸಿದ ಹಿನ್ನೆಲೆಯಲ್ಲಿ ಗ್ರಾಹಕರು ಹೆಚ್ಚಾಗಿದ್ದಾರೆ. ನಗರದಲ್ಲಿ 4 ಸಾವಿರ ಟ್ಯಾಕ್ಸಿಗಳನ್ನು ಹೊಂದಿದ್ದರೂ ಗ್ರಾಹಕರ ಬೇಡಿಕೆ ಪೂರೈಸಲು ಕಷ್ಟವಾಗುತ್ತಿದೆ.

ಆಟೋ ಚಾಲಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಆಟೋ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದು ಸಂಸ್ಥೆಯ ಸಹ ಸಂಸ್ಥಾಪಕ ಜಿ. ರಘುನಂದನ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆಟೋಗಳು ಹಸಿರು ಬಣ್ಣದ್ದಾಗಿರುತ್ತದೆ. ಪ್ರತಿ ಕಿಲೋ ಮೀಟರ್‌ಗೆ ಬೇರೆ ಆಟೋಗಳ ಹಾಗೆ ರು. 25ನ್ನು ನೀಡಬೇಕಾಗುತ್ತದೆ ಜತೆಗೆ ರು. 10ನ್ನು ಶುಲ್ಕವೆಂದು ಆಟೋ ಬಾಡಿಗೆಯ ಮೇಲೆ ನೀಡಬೇಕಾಗುತ್ತದೆ. ಬಸ್ ನಿಲ್ದಾಣ ಮುಂತಾದ ಪ್ರಮುಖ ಸ್ಥಳಗಳಲ್ಲಿ ಮಾತ್ರವಲ್ಲದೆ ಗ್ರಾಹಕರ ಮನೆಯವರೆಗೂ ತನ್ನ ಸೇವೆಯನ್ನು ನೀಡುತ್ತದೆ.

ತ್ರಿ ವೀಲ್ಸ್ ಯುನೈಟೆಡ್ ಸಹಯೋಗದೊಂದಿಗೆ ಪ್ರಾರಂಭಿಸಿರುವ ಆಟೋಗಳು ಗ್ರಾಹಕರು ಕರೆದಲ್ಲಿಗೆ ಬರುತ್ತದೆ. ಗ್ರಾಹಕರು ಹೋಗಲು ಇಚ್ಛಿಸುವ ಸ್ಥಳಗಳಿಗೆ ಯಾವುದೇ ಷರತ್ತುಗಳಿಲ್ಲದೆ ಕೊಂಡೊಯ್ಯುತ್ತವೆ.

ಆಟೋ ಸೇವೆಯ ವೈಶಿಷ್ಟ
ಚಾಲಕರಿಗೆ ಅನುಕೂಲವಾಗಲೆಂದು ಆ್ಯಪ್ ಬಹುಬಾಷೆಯಲ್ಲಿರುತ್ತದೆ. ಇಂಗ್ಲಿಷ್, ಹಿಂದಿ, ಕನ್ನಡ ಹೀಗೆ ತಮಗೆ ಅನುಕೂಲವಾದ ಭಾಷೆಯಲ್ಲಿ ಓದಬಹುದು ಮತ್ತು ಗ್ರಾಹಕರ ಸ್ಥಳಕ್ಕೆ ಸರಾಗವಾಗಿ ತಲುಪಬಹುದು.

ಚಾಲಕರ ಬಗ್ಗೆ ವಿವರಗಳನ್ನು, ರೇಟಿಂಗ್‌ಗಳನ್ನು ಕೊಡುತ್ತದೆ. ಬಳಕೆದಾರರು ಚಾಲಕರ ಬಗ್ಗೆ ತಮ್ಮದೇ ಆದ ರೇಟಿಂಗ್ ಮತ್ತು ಸೇವೆಯ ಬಗೆಗಿನ ವರದಿ ಕೊಡಬಹುದು. ಬುಕಿಂಗ್ ರಗಳೆ ಇಲ್ಲ. ಮೊಬೈಲ್ ಆ್ಯಪ್, ವೆಬ್‌ಸೈಟ್ ಮತ್ತು 50501010ಗೆ ಕರೆ ಮಾಡಿ ಕಾಲ್‌ಸೆಂಟರ್ ಮೂಲಕ ಬುಕ್ ಮಾಡಬಹುದು.

ಆ್ಯಂಡ್ರಾಯ್ಡ್, ಫೈರ್‌ಫಾಕ್ಸ್ ಆಪರೇಟಿಂಗ್ ಸಿಸ್ಟಂ ಹಾಗೂ ವಿಂಡೋಸ್ ಫೋನ್‌ಗಳ ಮೂಲಕ ಆ್ಯಪ್ ಬಳಸಿ ಕೇವಲ 15 ಸೆಕಂಡ್‌ಗಳಲ್ಲಿ ಆಟೋ ಬುಕ್ ಮಾಡಬಹುದು. ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಲು-ಗಿಗಿಗಿ.ಖಿಋಖ.ಂಘ/ಆಕಿಕಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT