ಬೆಂಗಳೂರು 
ಜಿಲ್ಲಾ ಸುದ್ದಿ

ಬದುಕಲು ಯೋಗ್ಯ ನಗರ: ಬೆಂಗಳೂರಿಗೆ 3ನೇ ಸ್ಥಾನ

ನವದೆಹಲಿ: ಭಾರತದಲ್ಲಿ ಬದುಕಲು ಯೋಗ್ಯವಾದ ನಗರಗಳ ಪೈಕಿ ಬೆಂಗಳೂರಿಗೆ 3ನೇ ಸ್ಥಾನ. ರಾಷ್ಟ್ರ ರಾಜಧಾನಿ ದೆಹಲಿಗೆ ಕೊನೇ ಸ್ಥಾನ.

ಇದು ಇಸಿಎ ಇಂಟರ್‌ನ್ಯಾಷನಲ್ ಸಂಸ್ಥೆಯು ನಡೆಸಿದ ಲೊಕೇಷನ್ ರೇಟಿಂಗ್ಸ್ ವರದಿ. ವಿಶ್ವದಲ್ಲೇ ಬದುಕಲು ಯೋಗ್ಯವಾದ ನಗರಗಳ ಪೈಕಿ ಬೆಂಗಳೂರು 171ನೇ ಸ್ಥಾನ ಪಡೆದರೆ, ಭಾರತದಲ್ಲಿ 3ನೇ ಸ್ಥಾನ ಪಡೆದಿದೆ. ಮೊದಲ ಮತ್ತು ದ್ವಿತೀಯ ಸ್ಥಾನ ಕ್ರಮವಾಗಿ ಮುಂಬೈ ಮತ್ತು ಚೆನ್ನೈ ಪಾಲಾಗಿದೆ.

ಜಗತ್ತಿನ ಉತ್ತಮ ನಗರಗಳ ಪಟ್ಟಿಯಲ್ಲಿ ಬೀಜಿಂಗ್ ಮತ್ತು ದೆಹಲಿ ಕೊನೆಯ ಸ್ಥಾನ ಪಡೆದಿವೆ. ಏಷ್ಯಾದಲ್ಲಿ ಮತ್ತು ಜಗತ್ತಿನಲ್ಲಿ ಬದುಕಲು ಅತ್ಯಂತ ಯೋಗ್ಯವಾದ ನಗರವೆಂದರೆ ಸಿಂಗಾಪುರ. ಇದರ ನಂತರದ ಸ್ಥಾನ ಸಿಡ್ನಿ ಮತ್ತು ಅಡಿಲೈಡ್‌ನದ್ದು ಎಂದು ವರದಿ ತಿಳಿಸಿದೆ.

ಗಾಳಿಯ ಗುಣಮಟ್ಟ, ಉತ್ತಮ ಮೂಲಸೌಕರ್ಯ, ಶಿಸ್ತುಬದ್ಧ ವೈದ್ಯಕೀಯ ಸೌಲಭ್ಯ, ಕಡಿಮೆ ಅಪರಾಧ ಪ್ರಕರಣಗಳು ಸಿಂಗಾಪುರವನ್ನು ಅಗ್ರ ಸ್ಥಾನಕ್ಕೇರಿಸಿದೆ. ಈ ವರದಿ ಸಿದ್ಧಪಡಿಸಲು ವಿಶ್ವದ ಒಟ್ಟು 450 ನಗರಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT