ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸಿದ 621 ವಾಹನ ಸವರಾರರು, ಚಾಲಕರ ವಿರುದ್ದ ಪ್ರಕರಣ ದಾಖಲಿಸಿರುವ ಸಂಚಾರ ಪೊಲೀಸರು ಚಾಲನ ಪರವಾನಗಿ(ಡಿಎಲ್) ರದ್ದುಗೊಳಿಸಲು ಸಾರಿಗೆ ಇಲಾಖೆಗೆ ಶಿಫಾರಸು ಮಾಡಿದ್ದಾರೆ.
ಜ.24 ರಾತ್ರಿ 9ರಿಂದ 2 ಗಂಟೆವರೆಗೆ ನಗರದ 85 ಸ್ಥಳಗಳಲ್ಲಿ 7,764 ವಾಹನಗಳ ತಪಾಸಣೆ ನಡೆಸಿದರು. 1 ಬಸ್ಸು, 11 ಲಾರಿ, 22 ಆಟೋ, 98 ಕಾರು, 469 ದ್ವಿಚಕ್ರ ವಾಹನ, 9 ಮ್ಯಾಕ್ಸಿ ಕ್ಯಾಬ್ ಹಾಗೂ 11 ಟೆಂಪೊ ವಾಹನಗಳು ಸೇರಿ 621 ವಾಹನ ಚಾಲಕ, ಸವಾರರು, ಮದ್ಯಪಾನ ಮಾಡಿದ್ದು ಮಡಿವಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯೊಂದರಲ್ಲೇ 40 ಪ್ರಕರಣಗಳು ದಾಖಲಾಗಿವೆ.