ಬೆಂಗಳೂರು: ಸಿಸಿಬಿ ಪೋಲೀಸರಿಂದ ಬಂಧಿತನಾಗಿರುವ ಎನ್‍ಡಿಎಫ್ಬಿ(ಎಸ್) ಕಾರ್ಯದರ್ಶಿ, ಕುಖ್ಯಾತ ಉಗ್ರ ಸಂಜು ಅಲಿಯಾಸ್ ಶಿಬಿಗಿರಿಗೆ ದಾಖಲೆಗಳಿಲ್ಲದೇ ಸಿಮ್ ಕಾರ್ಡ್ ಮಾರಿದ ವೊಡಾಫೋನ್ ಸಂಸ್ಥೆಹಾಗೂ ಏಜೆನ್ಸಿ ವಿರುದ್ಧ ಪ್ರಕರಣ ದಾಖಲಿಸಿರುವ ಪೋಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.ವೊಡಾಫೋನ್ ಸಿಮ್ ಪೂರೈಸುತ್ತಿದ್ದ ಎಲೆಕ್ಟ್ರಾನಿಕ್ ಸಿಟಿಯ ಕುಶಾಲ್ ಏಜೆನ್ಸಿ ಮಾಲೀಕ ಶ್ರೀನಿವಾಸ ರೆಡ್ಡಿ, ಮಾರಾಟ ಪ್ರತಿನಿಧಿ ವೇಣು ಕುಮಾರ್, ಉದ್ಯೋಗಿ ಸಂತೋಷ್, ರಮೇಶ್, ಕಂಪ್ಯೂಟರ್ ಅಪರೇಟರ್ ಗಂಗರಾಜು, ಮೊಬೈಲ್ ಕೇರ್ ಸಿಮ್ ರಿಟೈಲರ್ ಮಾಲೀಕ ಸೈಯ್ಯದ್ ಸೈಫುಲ್ಲಾ, ಸೇಲ್ಸ್‍ಮ್ಯಾನ್ ಏಜಾಜ್ ಅಹ್ಮದ್ ಬಂಧಿತರು. ಸಾಮೂಹಿಕ ಹತ್ಯಾಕಾಂಡ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ದಾಖಲಿಸಿದ್ದ ಪ್ರಕರಣದಲ್ಲಿ ಶಿಬಿಗಿರಿ ಪ್ರಮುಖ ಆರೋಪಿಯಾಗಿದ್ದ. ಆಗ ಅಲ್ಲಿಂದ ತಲೆಮರೆಸಿಕೊಂಡು ಜ.21ರ ಮಧ್ಯಾಹ್ನ 12.30ಕ್ಕೆ ಬೆಂಗಳೂರಿಗೆ ಬಂದು ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೆಲೆಸಿದ್ದ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಅಸ್ಸಾಂ ಪೋಲೀಸರು ಸಿಸಿಬಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧಾರಿಸಿ ಪೋಲೀಸರು, ಶಿಬಿಗಿರಿಯನ್ನು ಬಂಧಿಸಿದ್ದರು. ಆರೋಪಿ ಬಳಸುತ್ತಿದ್ದ ಮೊಬೈಲ್ ಫೋನ್ ಬಗ್ಗೆ ವಿಚಾರಣೆ ನಡೆಸಿದಾಗ ಸಿಮ್ ಕಾರ್ಡ್ ಅಕ್ರಮ ಮಾರಾಟ ಮತ್ತು ಆ್ಯಕ್ಟಿವೇಷನ್ ಜಾಲವೊಂದು ಪತ್ತೆಯಾಗಿದೆ.
ಹೇಗೆ?: ಉಗ್ರ ಶಿಬಿಗಿರಿ ಬೆಂಗಳೂರಿಗೆ ಬಂದಿದ್ದು ಜ.21ರ ಮಧ್ಯಾಹ್ನ 12.30ಕ್ಕೆ.ಆದರೆ, ಆತ ಬಳಸುತ್ತಿದ್ದ ಸಿಮ್ ಕಾರ್ಡ್ ಅದೇ ದಿನ ಬೆಳಗ್ಗೆ 9.30ಕ್ಕೆ ಆ್ಯಕ್ಟಿವೇಟ್ ಆಗಿತ್ತು. ಅದೇ ದಿನ ಸಂಜೆ 6.45ರ ನಂತರ ಸಿಮ್ ಕಾರ್ಡ್ ಬಳಸಲು ಶಿಬಿಗಿರಿ ಆರಂಭಿಸಿದ್ದ. ಪೋಲೀಸರು, ಆರೋಪಿ ಬಳಸುತ್ತಿದ್ದ ಸಿಮ್ ಕಾರ್ಡ್ ಪರಿಶೀಲಿಸಿದಾಗ ಅನ್ಯ ವ್ಯಕ್ತಿಯ ಹೆಸರು ಹಾಗೂ ನಕಲಿ ದಾಖಲೆಗಳ ಆಧಾರದ ಮೇಲೆ ಖರೀದಿಸಲಾಗಿದೆ ಎನ್ನುವುದು ಬಯಲಾಗಿದೆ.
ದಾಖಲೆಗಳಿಲ್ಲದೇ ಸಿಮ್ : ಸಿಮ್ ಕಾರ್ಡ್ ಮಾರಾಟದ ಬಗ್ಗೆ ಮತ್ತಷ್ಟು ವಿಚಾರಣೆ ನಡೆಸಿದಾಗ, ಇಡಿ ಎಲೆಕ್ಟ್ರಾನಿಕ್ ಸಿಟಿ ಪ್ರದೇಶ ಹಾಗೂ ಸುತ್ತ ಮುತ್ತ ಸಿಮï ಕಾರ್ಡ್ ಮÁರಾಟ
ಜಾಲ ಬೆಳಕಿಗೆ ಬಂದಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಗಿಟ್ಟಿಸಲು ನೈಜ ಗ್ರಾಹಕರು ನೀಡಿದ ಫೋಟೋ, ಗುರುತಿನ ಚೀಟಿ ಫೋಟೋ ಕಾಪಿಗಳನ್ನು ಸಂಗ್ರಹಿಸುತ್ತಿದ್ದರು. ಬಳಿಕ, ಸ್ಕ್ಯಾನಿಂಗ್ ಮಾಡಿಸಿ ಅದೇ ದಾಖಲೆಗಳ ಆಧಾರದ ಮೇಲೆ ಬೇರೆ ಸಿಮ್ ಕಾರ್ಡ್‍ಗಳನ್ನು ಆ್ಯಕ್ಟಿವೇಟ್ ಮಾಡುತ್ತಿದ್ದರು. ಹೆಚ್ಚಿನ ಹಣ ನೀಡುವ ಗ್ರಾಹಕರಿಗೆ ಅವುಗಳನ್ನು ಮಾರಲಾಗುತ್ತಿತ್ತು. ಬಂಧಿತರಿಂದ ವಿವಿಧ ರಿಟೈಲರ್ ಹೆಸರಿನ 30 ರಬ್ಬರ್ ಸ್ಟ್ಯಾಂಪ್‍ಗಳು, ಫೋಟೋ ಅಂಟಿಸಿ ಖಾಲಿ ಹಾಗೂ ಅರ್ಧ ತುಂಬಿದ ಅರ್ಜಿಗಳು ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿ ಕೊಳ್ಳಲಾಗಿದೆ .
ಅಸ್ಸಾಂಗೆ ಉಗ್ರ
ಬಂಧಿತ ಉಗ್ರನನ್ನು ಅಸ್ಸಾಂ ಅಧಿಕಾರಿಗಳ ತಂಡ ಬೆಂಗಳೂರಿ ಗೆ ಆಗಮಿಸಿ ಕರೆದೊಯ್ಯಲಿದೆ ಎಂದು ನಗರ ಪೋಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ.
ಬೇರೆಯವರ ದಾಖಲೆ ನೀಡಿ ಸಿಮ್ ಖರೀದಿಸಿದ್ದರಿಂದ ಶಿಬಿಗಿರಿಯನ್ನು ಪತ್ತೆ ಹಚ್ಚಲು ಕಷ್ಟವಾಗಿತ್ತು. ಹೀಗಾಗಿ, ದಾಖಲೆಗಳಿಲ್ಲದೇ ಸಿಮ್ ಕಾರ್ಡ್ ಹೇಗೆ ಎನ್ನುವುದನ್ನು ಪರಿಶೀಲಿಸಿದಾಗ ಆಗಲೇ ಆ್ಯಕ್ಟಿವೇಟ್ ಮಾಡಿದ ಸಿಮ್ ಕಾರ್ಡ್ ಗಳನ್ನು ಮಾರುವ ಜಾಲ ಪತ್ತೆಯಾಗಿದೆ. -ಅಭಿಷೇಕ್ ಗೋಯಲ್
-ಡಿಸಿಪಿ ಸಿಸಿಬಿ