ಜಿಲ್ಲಾ ಸುದ್ದಿ

ಸ್ವಚ್ಛತೆಗಾಗಿ ರೈಲ್ವೆ ನಿಲ್ದಾಣ ದತ್ತು

Srinivasamurthy VN

ಬೆಂಗಳೂರು: ಇಡೀ ರಾಷ್ಟ್ರದಲ್ಲಿ 8 ಸಾವಿರಕ್ಕೂ ಅಧಿಕ ರೈಲ್ವೆ ನಿಲ್ದಾಣಗಳಿದ್ದು, ಅವುಗಳನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ದತ್ತು ತೆಗೆದುಕೊಳ್ಳುವಂತೆ ದೇಶದ ಲೆಕ್ಕಪರಿಶೋಧಕರಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ಸಲಹೆ ನೀಡಿದ್ದಾರೆ.

ದಿ ಇನ್‍ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ  ನೀಡಿ ಅವರು ಮಾತನಾಡಿದರು. ದೇಶಾದ್ಯಂತ ದೊಡ್ಡ ಸಂಖ್ಯೆಯಲ್ಲಿರುವ ಲೆಕ್ಕ ಪರಿಶೋಧಕರು ಸ್ವಚ್ಛಭಾರತ ಆಂದೋಲನದಡಿ ರೈಲ್ವೇ ನಿಲ್ದಾಣಗಳನ್ನು ದತ್ತು ದತ್ತುಪಡೆಯುವ ಮೂಲಕ ಸಾಮಾಜಿಕ ಕಳಕಳಿ ವ್ಯಕ್ತಪಡಿಸಲು ಒಳ್ಳೆಯ ಅವಕಾಶವಿದೆ ಎಂದರು.

ಐಸಿಎಐ ಸ್ವಚ್ಛ ಭಾರತ ಅಭಿಯಾನಕ್ಕಾಗಿಯೇ ಒಂದು ಪೋರ್ಟಲ್ ಆರಂಭಿಸಿದರೆ ರೈಲ್ವೆ ಇಲಾಖೆ ಮತ್ತು ಲೆಕ್ಕ ಪರಿಶೋಧಕರಿಗೆ ಒಂದು ವೇದಿಕೆ ಸೃಷ್ಟಿಯಾಗಲಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಸಲಹೆ ನೀಡಿದ ಅವರು, ಈಗಾಗಲೇ ಸ್ವಚ್ಛ ಭಾರತ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಎಲ್ಲರೂ ಕೈಜೋಡಿಸಿದರೆ ಸ್ವಚ್ಛಭಾರತವಾಗುವಲ್ಲಿ ಅನುಮಾನವಿಲ್ಲ ಎಂದು ಹೇಳಿದರು. ಸಂಸದರಾದ ರೆಹಮಾನ್ ಖಾನ್, ಐಸಿಎಐ ಅಧ್ಯಕ್ಷ ಕೆ ರಘು, ಮನೋಜ್ ಫಡ್ನಿಸ್ ಇದ್ದರು.

SCROLL FOR NEXT