ಡಿಪ್ಲೊಮೊ ಲ್ಯಾಟ್ರಲ್ ಪ್ರವೇಶ ಪರೀಕ್ಷೆ
ಬೆಂಗಳೂರು: ಡಿಪ್ಲೊಮೊ ಅಭ್ಯರ್ಥಿಗಳಿಗೆ ಎಂಜಿನಿಯರಿಂಗ್ 2ನೇ ವರ್ಷಕ್ಕೆ ಲ್ಯಾಟ್ರಲ್ ಪ್ರವೇಶಕ್ಕಾಗಿ ಜುಲೈ 5ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಒಟ್ಟಾರೆ 25,480 ಅಭ್ಯರ್ಥಿಗಳು ಪ್ರವೇಶ ಪರೀಕ್ಷೆ ಎದುರಿಸಲಿದ್ದು, ಬೆಂಗಳೂರಿನ 17 ಪರೀಕ್ಷಾ ಕೇಂದ್ರ ಸೇರಿದಂತೆ ರಾಜ್ಯದ 12 ಜಿಲ್ಲೆಗಳ ಒಟ್ಟು 70 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಅಂದೇ ಮಧ್ಯಾಹ್ನ 3ರಿಂದ 4ರವರೆಗೆ ಬೆಂಗಳೂರು ಕೇಂದ್ರಗಳಲ್ಲಿ ಮಾತ್ರ ಹೊರನಾಡು-ಗಡಿನಾಡು ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ. ಅಭ್ಯರ್ಥಿಗಳು ಪ್ರವೇಶಪತ್ರಗಳನ್ನು ಡೌನ್‍ಲೋಡ್ ಮಾಡಿಕೊಂಡು ಪರೀಕ್ಷಾ ಕೇಂದ್ರಕ್ಕೆ ಅರ್ಧ ಗಂಟೆ ಮೊದಲೇ ಹಾಜರಾಗಲು ಪ್ರಾಧಿಕಾರ ಸೂಚಿಸಿದೆ. ಪ್ರವೇಶಪತ್ರವನ್ನು ಮರೆಯದೇ ಪರೀಕ್ಷೆ ಕೇಂದ್ರಕ್ಕೆ ಒಯ್ಯಬೇಕು ಮತ್ತು ಅದರ ಹಿಂಬದಿಯಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಳ್ಳಬೇಕು. ಓಎಂಆರ್ ಶೀಟಿನಲ್ಲಿ ಉತ್ತರಗಳನ್ನು ಗುರುತಿಸಲು ನೀಲಿ ಅಥವಾ ಕಪ್ಪು ಬಣ್ಣದ ಬಾಲ್ ಪಾಯಿಂಟ್ ಪೆನ್ ಮಾತ್ರ ಬಳಕೆ ಮಾಡಬೇಕು, ಪರೀಕ್ಷೆ ಆರಂಭವಾಗುವ ಕನಿಷ್ಠ ಅರ್ಧಗಂಟೆ ಮೊದಲೇ (ಬೆಳಗ್ಗೆ.9.30) ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು.
3ನೇ ಬೆಲ್ ಆದ ನಂತರ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶವಿಲ್ಲ. ಪರೀಕ್ಷೆಯು 180 ನಿಮಿಷಗಳ ಅವಧಿಯಾಗಿದ್ದು, 180 ಒಟ್ಟು ಅಂಕಗಳ ಒಎಂಆರ್ ಉತ್ತರ ಪತ್ರಿಕೆಯಲ್ಲಿ 40 ಅಂಕಗಳ 2 ಭಾಗ ಮತ್ತು 100 ಅಂಕಗಳ 1 ಭಾಗದಲ್ಲಿ ಬಹು ಆಯ್ಕೆಯ ಆಬ್ಜೆಕ್ಟಿವ್ ಟೈಪ್ ಪ್ರಶ್ನೆಗಳಿರುತ್ತವೆ. ತಪ್ಪು ಉತ್ತರಗಳಿಗೆ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ. ಪ್ರತಿ ಪ್ರಶ್ನೆಗೆ ಸರಿಯಾದ ಒಂದೇ ಉತ್ತರ ಗುರ್ತಿಸಬೇಕಾಗಿದ್ದು, ಅಭ್ಯರ್ಥಿಯು ಒಂದು ವೇಳೆ 1ಕ್ಕಿಂತ ಹೆಚ್ಚು ಉತ್ತರ ಗುರುತಿಸಿದ್ದಲ್ಲಿ ಅಂಕ ನೀಡುವುದಿಲ್ಲ. ಉತ್ತರ ಪತ್ರಿಕೆಯ ಒಂದು ಯಥಾ ಪ್ರತಿಯನ್ನು ಅಭ್ಯರ್ಥಿಗೆ ಅಂತ್ಯದಲ್ಲಿ ನೀಡಲಾಗುತ್ತದೆ. ಓಎಂಆರ್ ಉತ್ತರಪತ್ರಿಕೆಯ ಮಾದರಿಯೊಂದನ್ನು ಪ್ರಾಧಿಕಾರದ ವೆಬ್ ಸೈಟಿನಲ್ಲಿ ಒದಗಿಸಲಾಗಿಸಿದ್ದು ಅಭ್ಯರ್ಥಿಗಳು ಅದನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡುವ ಬಗ್ಗೆ ಅಭ್ಯಾಸ ಮಾಡಲು ಅವಕಾಶ ಒದಗಿಸಿದೆ.
ಸ್ಲೈಡ್ ರೂಲ್ಸ್, ಗಣಿತದ ಟೇಬಲ್ಸ್, ಮಾರ್ಕರ್ಸ್, ಬಿಳಿಶಾಯಿ, ರಬ್ಬರ್, ಮೊಬೈಲ್ ಫೋನ್/ಬ್ಲೂ ಟೂತ್/ಲ್ಯಾಪ್-ಟಾಪ್/ಕ್ಯಾಲ್ಕ್ಯುಲೇಟರ್/ಗಡಿಯಾರದ/ಪೇಜರ್ಸ್/ವೈರ್ ಲೆಸ್ ಸೆಟ್/ನೋಟ್ಪ್ಯಾ ಡ್/ಐ ಪ್ಯಾಡ್/ಇಯರ್ ಫೋನ್ ಇತ್ಯಾದಿ ಎಲೆಕ್ಟ್ರಾಟ್ರನಿಕ್ ಸಾಧನ್ನು ತರಬಾರದು. ಓಎಂಆರ್ ಶೀಟಿನಲ್ಲಿ ಮುದ್ರಿತವಾಗಿರುವ ಟೈಮಿಂಗ್ ಮಾರ್ಕ್ಸ್ ಅನ್ನು ಮತ್ತು ರಂಧ್ರಗಳನ್ನು ಮುದುರುವುದು/ತಿರುಚುವುದು/ಹಾಳುಮಾಡಬಾರದು. ಹೆಬ್ಬೆರಳಿನ ಮುದ್ರೆ ಹಾಕುವ ಸಂದರ್ಭದಲ್ಲಿ ಇಂಕನ್ನು ಇತರ ಭಾಗಗಳಿಗೆ ಹರಡದಂತೆ ಎಚ್ಚರವಹಿಸಬೇಕು.