ಅಪಘಾತದಲ್ಲಿ ಜಖಂಗೊಂಡಿರುವ ಕಾರು 
ಜಿಲ್ಲಾ ಸುದ್ದಿ

ರಸ್ತೆ ಅಪಘಾತ: ಉದ್ಯಮಿ ಬಿಜಿ ಪಾಟೀಲ್ ಪುತ್ರ ಸೇರಿ 3 ಸಾವು

ಪಂಡರಾಪುರದಲ್ಲಿರುವ ಸ್ನೇಹಿತರ ಕಾರ್ಖಾನೆಗೆ ಭೇಟಿ ನೀಡಿ ಕಲಬುರಗಿಗೆ ವಾಪಸ್ ಆಗುತ್ತಿದ್ದ ವೇಳೆ ಉದ್ಯಮಿ ಬಿಜಿ ಪಾಟೀಲ್ ಅವರ ಪುತ್ರನ ಕಾರು...

ಸೊಲ್ಲಾಪುರ: ಪಂಡರಾಪುರದಲ್ಲಿರುವ ಸ್ನೇಹಿತರ ಕಾರ್ಖಾನೆಗೆ ಭೇಟಿ ನೀಡಿ ಕಲಬುರಗಿಗೆ ವಾಪಸ್ ಆಗುತ್ತಿದ್ದ ವೇಳೆ ಉದ್ಯಮಿ ಬಿಜಿ ಪಾಟೀಲ್ ಅವರ ಪುತ್ರನ ಕಾರು ಅಪಘಾತಕ್ಕೀಡಾಗಿದ್ದು ಮೂವರು ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರದ ಬಳಿ ಕೆಎ 32, ಡಿ 777 ಸಂಖ್ಯೆ ಫಾರ್ಚುನರ್ ಕಾರು ಹಾಗೂ ಕ್ಯಾಂಟರ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇದರಲ್ಲಿದ್ದ ಬಿಜಿ ಪಾಟೀಲ್ ಅವರ ಪುತ್ರ 33 ವರ್ಷದ ಅಮಿತ್ ಪಾಟೀಲ್, ವ್ಯವಸ್ಥಾಪಕ 45 ವರ್ಷದ ಸಂತೋಷ್ ಹಾಗೂ 50 ಸುಭಾಷ್ ಕೋರ್ವಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದ ವೇಳೆ ಕಾರು ಚಾಲಕ ಶರಣುಗೆ ಎಂಬುವರು ಕಾರು ಚಾಲನೆ ಮಾಡದೇ ಬಿಜಿ ಪಾಟೀಲ್ ಅವರ ಪುತ್ರ ಅಮಿತ್ ಪಾಟೀಲ್ ಕಾರು ಚಲಾಯಿಸುತ್ದಿದ್ದರು ಎಂದು ತಿಳಿದುಬಂದಿದೆ. ಇದೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಅಪಘಾತದಲ್ಲಿ ಶರಣುಗೆ ತೀವ್ರ ಗಾಯಗಳಾಗಿದ್ದು, ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್