ಮ್ಯಾನ್ ಹೋಲ್(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಮ್ಯಾನ್ ಹೋಲ್ ನಲ್ಲಿ ಉಸಿರುಗಟ್ಟಿ ಇಬ್ಬರು ಕಾರ್ಮಿಕರ ಸಾವು

ಮ್ಯಾನ್ ಹೋಲ್ ನಲ್ಲಿ ಬಿದ್ದಿದ್ದ ಇಟ್ಟಿಗೆ ಹಾಗೂ ಇತರೆ ಅಳಿದುಳಿದ ವಸ್ತುಗಳನ್ನು ಮೇಲೆತ್ತಲು ಒಳಗೆ ಇಳಿದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.

ಬೆಂಗಳೂರು: ನೂತನವಾಗಿ ನಿರ್ಮಾಣಗೊಂಡಿದ್ದ ಒಳಚರಂಡಿ ಮ್ಯಾನ್ ಹೋಲ್ ನಲ್ಲಿ ಬಿದ್ದಿದ್ದ ಇಟ್ಟಿಗೆ ಹಾಗೂ ಇತರೆ ಅಳಿದುಳಿದ ವಸ್ತುಗಳನ್ನು ಮೇಲೆತ್ತಲು ಒಳಗೆ ಇಳಿದ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಯಲಹಂಕ ಉಪನಗರದ ಅಟ್ಟೂರು ಬಡಾವಣೆಯಲ್ಲಿ ನಡೆದಿದೆ.

ಕೋಲ್ಕತ್ತಾ ಮೂಲದ ಶಮೀಮ್ ಅಕ್ತರ್ (21 ) ಹಾಗೂ ಕಲಬುರಗಿ ಮೂಲದ ಶರಣಗೌಡ ಪಾಟೀಲ್(23 ) ಮೃತರು. ಇಲ್ಲಿನ ಕೆಂಪನಹಳ್ಳಿ ಮುಖ್ಯರಸ್ತೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಒಳಚರಂಡಿ ನಿರ್ಮಾಣ ಕಾಮಗಾರಿಯನ್ನು ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಐ.ವಿ.ಆರ್. ಸಿ.ಎಲ್ ಕಂಪನಿಗೆ ನೀಡಿತ್ತು. ಇದೇ ಕಾಮಗಾರಿಯನ್ನು ಐ.ವಿ.ಆರ್.ಸಿ.ಎಲ್  ಕಂಪನಿ ರಾಕೇಶ್ ಎಂಬುವವರಿಗೆ ಉಪಗುತ್ತಿಗೆ ನೀಡಿತ್ತು. ಸೆಪ್ಟೆಂಬರ್ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕಿದ್ದು ಬಾಕಿ ಕೆಲಸ ನಡೆಯುತ್ತಿತ್ತು.

ಕೆಲಸ ಪೂರ್ಣಗೊಂಡಿದ್ದ ಕೆಲ ಮ್ಯಾನ್ ಹೋಲ್ ಗಳಲ್ಲಿ ಕಾಮಗಾರಿ ನಡೆಸುತ್ತಿದ್ದ ವೇಳೆ ಇಟ್ಟಿಗೆ ಸೇರಿದಂತೆ ಇತರೆ ಕಾಮಗಾರಿ ವಸ್ತುಗಳು ಬಿದ್ದಿದ್ದವು. ಅದನ್ನು ತೆಗೆಯುವಂತೆ ಗುತ್ತಿಗೆದಾರರು ಕಾರ್ಮಿಕರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸಲು ಅಕ್ತರ್ ಹಾಗೂ ಶರಣಗೌಡ ಆಗಮಿಸಿದ್ದರು. ಮೊದಲು ಮ್ಯಾನ್ ಹೋಲ್ ಗೆ ಇಳಿದ ಅಕ್ತರ್ ನಿರ್ವಾತ ಉಂಟಾಗಿ ಒಳಗೆ ಪ್ರಜ್ಞಾಹೀನನಾಗಿದ್ದ. ಎಷ್ಟೊತ್ತಾದರೂ ಆಟ ಹೊರಗೆ ಬಾರದ ಕಾರಣ ಗಾಬರಿಗೊಂಡ ಶರಣಗೌಡ ಅಕ್ತರ್ ನನ್ನು ಮೇಲೆಕ್ಕೆತ್ತಲು ಕೆಳಗೆ ಇಳಿದಿದ್ದಾನೆ. ಆದರೆ ಆತನೂ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

ಸಾರ್ವಜನಿಕರಿಂದ ಮಾಹಿತಿ ಪಡೆದ ರಕ್ಷಣಾ ಸಿಬ್ಬಂದಿ  ಇಬ್ಬರ ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ಯಲಹಂಕ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT