ಬೆಂಗಳೂರು: ರಜೆ ಮೇಲೆ ತೆರಳಿರುವ ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಗುರುವಾರವೂ ನಗರದಲ್ಲಿ ಅನೇಕ ಸಂಘ ಸಂಸ್ಥೆಗಳು ಪ್ರತಿಭಟನೆ ಮುಂದುವರಿಸಿ ಆಕ್ರೋಶ ವ್ಯಕ್ತಪಡಿಸಿವೆ.
ಭೂ ಕಬಳಿಕೆ ವಿರೋಧ ಹೋರಾಟ ಸಮಿತಿ, ವಕೀಲರ ಸಂಘ ಸೇರಿದಂತೆ ನಾನಾ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಲೋಕಾಯುಕ್ತರ ರಾಜಿನಾಮೆಗೆ ಒತ್ತಾಯಿಸಿದವು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನೇತೃತ್ವದಲ್ಲಿ ಭೂ ಕಬಳಿಕೆ ವಿರೋಟ ಹೋರಾಟ ಸಮಿತಿಯ ಸದಸ್ಯರು ಆನಂದ್ ರಾವ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದೊರೆಸ್ವಾಮಿ ಅವರು ಭಾಸ್ಕರರಾವ್ ನೇರವಾಗಿ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ.
ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯ ಬಾರದು. ಲೋಕಾಯುಕ್ತ ಸಂಸ್ಥೆಗೆ ಕಳಂಕ ತಂದಿ ರುವ ಕಳಂಕಮೂರ್ತಿಯಾದ ಅವರನ್ನು ತೊಲಗಿಸಿ, ಲೋಕಾಯುಕ್ತ ಸಂಸ್ಥೆಯನ್ನು ಉಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಸಮಿತಿಯ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಮಾತನಾಡಿ, ರು.10 ಕೋಟಿ ಲಂಚ ನೀಡಿ ಲೋಕಾ ಯುಕ್ತ ಹುದ್ದೆಯನ್ನು ಅಲಂಕರಿಸಿದ್ದಾರೆ ಎಂಬ ಆರೋಪ ಲೋಕಾಯುಕ್ತರ ಮೇಲಿದೆ. ಹಾಗಾಗಿ ಅವರ ಬೆನ್ನ ಹಿಂದೆ ಯಾರಿದ್ದಾರೆ? ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಬೇಲಿಮಠದ ಶಿವರುದ್ರ ಸ್ವಾಮೀಜಿ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಮುತ್ತಿಗೆ ಯತ್ನ: ಲೋಕಾಯುಕ್ತರ ರಾಜಿನಾಮೆಗೆ ಆಗ್ರಹಿಸಿ ವಕೀಲರ ಸಂಘದ ನೂರಾರು ಕಾರ್ಯ ಕರ್ತರು ಗುರುವಾರ ಸಿಟಿ ಸಿವಿಲï ಕೋರ್ಟ್ ನಿಂದ ಮೆರವಣಿಗೆ ನಡೆಸಿ ಲೋಕಾಯುಕ್ತ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಪೊಲೀಸರು ಕೆ.ಆರ್. ವೃತ್ತದ ಬಳಿ ಪ್ರತಿಭಟನಾ ಕಾರರನ್ನು ತಡೆದು ಬಂ„ಸಿ, ನಂತರ ಬಿಡುಗಡೆ ಮಾಡಿದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಮುಖಂಡರು, ಅಧಿಕಾರಕ್ಕೆ ಬರಲು ಹಣ ನೀಡಿರುವ ನ್ಯಾ.ಭಾಸ್ಕರ್ ರಾವ್ ಅವರು ಈಗ ಆ ಹಣವನ್ನು ಬೇರೆ ರೂಪದಲ್ಲಿ ಸಂಗ್ರಹಿಸುತ್ತಿದ್ದಾರೆ.
ಇಂತಹವರಿಂದ ರಾಜ್ಯಕ್ಕೆ ಮತ್ತು ನ್ಯಾಯಮೂರ್ತಿಗಳಿಗೆ ಕೆಟ್ಟ ಹೆಸರು ಬರುತ್ತಿದೆ. ಆದ್ದರಿಂದ ಅವರು ಕೂಡಲೇ ರಾಜಿನಾಮೆ ನೀಡಬೇಕು ಅಥವಾ ಸರ್ಕಾರ ಅವರನ್ನು ಪದಚ್ಯುತಗೊಳಿಸಬೇಕು ಎಂದು ಆಗ್ರಹಿಸಿದರು. ಭಾಸ್ಕರ್ ರಾವ್ ಪರ ಧರಣಿ: ಇತ್ತ ಆನಂದ್ ರಾವ್ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಪ್ರಜಾ ವಿಮೋಚನಾ ಚಳವಳಿ ಸಂಘದ ಸದಸ್ಯರು ಭಾಸ್ಕರ್ ರಾವ್ ಅವರು ಯಾವುದೇ ಕಾರಣಕ್ಕೂ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬಾರದು ಎಂದು ಆಗ್ರಹಿಸಿದರು.