ಕುಮಾರಕೃಪಾ ಅತಿಥಿಗೃಹದ ಬಳಿ ಕಡಿದು ಹಾಕಿರುವ ಮರಗಳು 
ಜಿಲ್ಲಾ ಸುದ್ದಿ

ವಿವಿಐಪಿಗಳಿಗಾಗಿ 34 ಮರ ನಾಶ

ಅನುಮತಿ ಪಡೆಯದೆ ಕುಮಾರಕೃಪ ಅತಿಥಿಗೃಹದ ಬಳಿ 34 ಮರ ಕಡಿದ ಲೋಕೋಪಯೋಗಿ ಇಲಾಖೆಗೆ ಅರಣ್ಯ ಇಲಾಖೆ...

ಬೆಂಗಳೂರು: ಅನುಮತಿ ಪಡೆಯದೆ ಕುಮಾರಕೃಪ ಅತಿಥಿಗೃಹದ ಬಳಿ 34 ಮರ ಕಡಿದ ಲೋಕೋಪಯೋಗಿ ಇಲಾಖೆಗೆ ಅರಣ್ಯ ಇಲಾಖೆ ನೋಟಿಸ್ ನೀಡಲಿದೆ.

ಅತಿಥಿಗೃಹದ ಬಳಿಯಿರುವ ಪ್ರದೇಶ ದಲ್ಲಿ ವಿವಿಐಪಿಗಳಿಗಾಗಿ ಲೋಕೋಪಯೋಗಿ ಇಲಾಖೆ, ಸುಮಾರು 200 ಕೊಠಡಿಗಳಿರುವ ಅತಿಥಿಗೃಹ ನಿರ್ಮಿಸುತ್ತಿದೆ. ಇದಕ್ಕಾಗಿ ಒಟ್ಟು 46 ಮರಗಳನ್ನು ಕಡಿಯಲು ಗುರುತಿಸಿದ್ದು, ಮೂರು ದಿನಗಳ ಹಿಂದೆ 34 ಮರ ಕಡಿದು ಹರಾಜು ಹಾಕಲಾಗಿದೆ.

ಆದರೆ, ಅರಣ್ಯ ಕಾಯ್ದೆಯ ನಿಯಮಗಳ ಪ್ರಕಾರ ಮುಂಚಿತವಾಗಿ ಇಲಾಖೆಯಿಂದ ಅನುಮತಿ ಪಡೆಯದೆ ಉತ್ತಮ ಜಾತಿಯ ಹಾಗೂ ಬೆಲೆ ಬಾಳುವ ಮರಗಳನ್ನು ಹನನ ಮಾಡಲಾಗಿದೆ ನಂತರ ಹರಾಜು ಹಾಕುವಾಗಲೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿಲ್ಲ. ಕಡಿದ ಮರಗಳನ್ನು ಸ್ಥಳದಲ್ಲೇ ಬಿಡಲಾಗಿದೆ. ಕೆಲವು ಮರದ ದಿಮ್ಮಿಗಳನ್ನು ಸ್ಥಳದಿಂದ ಹೊತ್ತೊಯ್ಯಲಾಗಿದೆ.

ಬುಡ ತುಂಡರಿಸಿದ ಪ್ರತಿ ಮರಗಳನ್ನು ಅರಣ್ಯ ಸಿಬ್ಬಂದಿ ಗುರುತಿಸಿದ್ದು, ಯಾವ ಜಾತಿಯ ಮರಗಳು ಎಂಬುದನ್ನು ಪಟ್ಟಿ ಮಾಡಿದ್ದಾರೆ. ಆರ್ ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ ಹಾಗೂ ವಕೀಲ ಉಮಾಪತಿ ಅವರ ತಂಡ ಅರಣ್ಯ ಇಲಾಖೆಗೆ ಈ ವಿಚಾರ ತಿಳಿಸಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸತ್ಯ ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಾವು, ಹಲಸು, ಸುಮಾರು 11 ತೆಂಗಿನ ಮರಗಳು ಸೇರಿದಂತೆ 46 ಮರಗಳನ್ನು ಗುರುತಿಸಲಾಗಿದೆ. ಅನುಮತಿ ಪಡೆಯದಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಉತ್ತರಿಸಬೇಕಿದ್ದು, ಅಲ್ಲಿಯವರೆಗೂ ಉಳಿದ ಮರಗಳನ್ನುಕಡಿಯುವಂತಿಲ್ಲ ಎನ್ನುತ್ತಾರೆ ಅರಣ್ಯಇಲಾಖೆ ಅಧಿಕಾರಿಗಳು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚೀನಾದ ರೋಬೋಟ್ ಡಾಗ್ ವಿವಾದ: AI Summit expoದಿಂದ ಗಾಲ್ಗೋಟಿಯಾಸ್ ವಿವಿಗೆ ಸ್ಟಾಲ್ ತೆರವುಗೊಳಿಸಲು ಸೂಚನೆ-Video

ಮುಸ್ಲಿಂರಿಗೆ ನೀಡಲಾಗಿದ್ದ ಶೇ.5 ರಷ್ಟು ಮೀಸಲಾತಿ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರ

T20 World Cup 2026: ಸೂಪರ್ 8 ಹಂತದ ಗ್ರೂಪ್ 1ರ ವೇಳಾಪಟ್ಟಿ ಪ್ರಕಟ; ಫೆಬ್ರುವರಿ 22ರಂದು ಭಾರತ- ದಕ್ಷಿಣ ಆಫ್ರಿಕಾ ಮುಖಾಮುಖಿ!

ಪುಣೆ "ರೆಡ್ ಲೈಟ್ ಏರಿಯಾ"ದಲ್ಲಿ ಅಕ್ರಮ ವಾಸ್ತವ್ಯ ಹೂಡಿದ್ದ 11 ಬಾಂಗ್ಲಾದೇಶಿ ಮಹಿಳೆಯರ ಬಂಧನ!

Rajya Sabha polls: ರಾಜ್ಯಸಭೆಯ 37 ಸ್ಥಾನಗಳಿಗೆ ಮಾರ್ಚ್ 16 ರಂದು ಚುನಾವಣೆ

SCROLL FOR NEXT