ಜಿಲ್ಲಾ ಸುದ್ದಿ

ಮಾರುಕಟ್ಟೆ ಸಿ ಬ್ಲಾಕ್ ನಲ್ಲಿ 8 ಅಂಗಡಿಗಳ ನಿರ್ಮಾಣಕ್ಕೆ ಆಕ್ಷೇಪ

Mainashree

ಬೆಂಗಳೂರು: ಮಾರುಕಟ್ಟೆ ಸಿ ಬ್ಲಾಕ್ ನಲ್ಲಿ ಈಗಾಗಲೇ 100 ಅಂಗಡಿಗಳಿದ್ದು, ಮತ್ತೆ 8 ಅಂಗಡಿಗಳನ್ನು ನಿರ್ಮಿಸಲು ಹೊರಟಿರುವ ಬಿಬಿಎಂಪಿ ಕ್ರಮವನ್ನು ಜಯಚಾಮರಾಜೇಂದ್ರ ತರಕಾರಿ ವರ್ತಕರ ಸಂಘ ಖಂಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮುಖ್ಯಸ್ಥ ರಾಜಶೇಕರ್ ರೆಡ್ಡಿ, ಈಗಾಗಲೇ ಸಿ ಬ್ಲಾಕ್ ನಲ್ಲಿ 100 ಅಂಗಡಿಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಕಸ ಹಾಕುವ ಜಾಗದಲ್ಲಿ ಮತ್ತೆ 8 ಅಂಗಡಿಗಳನ್ನು ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ. ಸಿ ಬ್ಲಾಕ್ ನಲ್ಲಿ ನಾಗರಿಕರು ಒಡಾಡಲು ಕಷ್ಟಕರವಾಗಿದ್ದು, ಅದೇ ಜಾಗದಲ್ಲಿ ಮತ್ತೆ ಎಂಟು ಅಂಗಡಿಗಳನ್ನು ನಿರ್ಮಾಣ ಮಾಡುತ್ತಿರುವ ಬಿಬಿಎಂಪಿ ಕ್ರಮ ಸರಿಯಲ್ಲ ಎಂದು ಎಂದಿದ್ದಾರೆ.

ಸಿ ಬ್ಲಾಕ್ ನಲ್ಲಿ ಗಾಳಿ ಬೆಳಕು ಸೇರಿದಂತೆ ಮೂಲಭೂತ ಸೌಕರ್ಯವಿಲ್ಲದಂತಾಗಿದೆ. ಇದರ ನಡುವೆ ಈ ಎಂಟು ಅಂಗಡಿಗಳನ್ನು ನಿರ್ಮಿಸಿದರೆ, ವ್ಯಾಪಾರಸ್ಥರು ಮತ್ತು ಗ್ರಾಹಕರ ಸಂಚಾರಕ್ಕೆ ಅಡೆತಡೆಯುಂಟಾಗುತ್ತದೆ. ಅಂಗಡಿ ನಿರ್ಮಿಸಲು ಮುಂದಾಗಿರುವ ಜಾಗ 9x9 ವಿಸ್ತೀರ್ಣ ಹೊಂದಿದ್ದು, ಇಕ್ಕಟ್ಟಿನ ಸ್ಥಳವಾಗಿದೆ. ಆದ್ದರಿಂದ ಬಿಬಿಎಂಪಿ ಅಧಿಕಾರಿಗಳು ಅಂಗಡಿಯನ್ನು ನಿರ್ಮಾಣ ಮಾಡಬಾರದು ಎಂದು ಅವರು ಒತ್ತಾಯಿಸಿದರು.

SCROLL FOR NEXT