ಜಿಲ್ಲಾ ಸುದ್ದಿ

ಹಿಂದೂ ದೇವಸ್ಥಾನಗಳಿಗೆ ಸ್ವಾಯತ್ತತೆ ನೀಡುವ ಕುರಿತು ಜೂ.20ಕ್ಕೆ ವಿಚಾರ ಸಂಕಿರಣ

Lingaraj Badiger

ಬೆಂಗಳೂರು: ಲೌಕಿಕ ಸಂಸ್ಥೆ 'ನಮ್ಮ ದೇವಸ್ಥಾನ' ಹಾಗೂ ಜಿಜ್ಞಾಸ ಸೆಸ್ ಧಾರ್ಮಿಕ ಚಟುವಟಿಕೆ, ಟೆಂಪಲ್ ವರ್ಷಿಪರ್ಸ್ ಸೊಸೈಟಿ(ಚೆನ್ನೈ)ಯ ಸಹಯೋಗದೊಂದಿಗೆ ಹಿಂದೂ ದೇವಸ್ಥಾನಗಳಿಗೆ ಸ್ವಾಯತ್ತತೆ ಎಂಬ ವಿಷಯದ ಕುರಿತು ಜೂನ್ 20ರಂದು ಒಂದು ದಿನದ ವಿಚಾರಗೋಷ್ಠಿ ಆಯೋಜಿಸಲಾಗಿದೆ.

ನಗರದ ಕುಮಾರಕೃಪ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಶನಿವಾರ ಬೆಳಗ್ಗೆ 9ಗಂಟೆಗೆ ವಿಚಾರ ಗೋಷ್ಠಿ ಆರಂಭವಾಗಲಿದ್ದು, ಗೋಷ್ಠಿಯಲ್ಲಿ ದೇವಸ್ಥಾನದ ಹಿನ್ನೆಲೆಯ ದೃಷ್ಟಿಕೋನದಿಂದ ಅದರ ಆಡಳಿತವನ್ನು ನಡೆಸುವವರು ಹೊಂದಿರಬೇಕಾದ ಸ್ವಾಯತ್ತತೆ ಹಾಗೂ ಅಧಿಕಾರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

'ನಮ್ಮ ದೇವಸ್ಥಾನ'ವು ಹಿಂದೂ ದೇವಾಲಯಗಳು ಹೇಗೆ ಮತ್ತು ಯಾವ ರೀತಿಯಲ್ಲಿ ಸ್ವತಂತ್ರವಾಗಬೇಕು ಎಂಬುದರ ಬಗ್ಗೆ ಗೋಷ್ಠಿಯಲ್ಲಿ ಮಾಹಿತಿ ನೀಡಲಿದೆ. ಅಲ್ಲದೆ ಮಾಹಿತಿ ಹಕ್ಕು ಕಾನೂನು ಮತ್ತು ಅದು ಎಷ್ಟರ ಮಟ್ಟಿಗೆ ಇಲ್ಲಿ ಪ್ರಸ್ತುತ ಎಂಬುದರ ಬಗ್ಗೆಯೂ ಚರ್ಚೆ ನಡೆಯಲಿದೆ.

ತಮಿಳುನಾಡಿನಲ್ಲಿ ಹಾಳು ಬಿದ್ದಿದ್ದ ಒಂದು ದೇವಸ್ಥಾನವನ್ನು ಹೇಗೆ ಅಲ್ಲಿಯ ನಾಗರಿಕರು ಮತ್ತು ಸಂಘ ಸಂಸ್ಥೆಗಳು ಜೀರ್ಣೋದ್ಧಾರಗೊಳಿಸಿದರು ಎಂದು ಬಿಂಬಿಸುವ ಉತ್ತೇಜನಾಪೂರ್ವಕವಾದ ಚಲನಚಿತ್ರ ಪ್ರದರ್ಶನದೊಂದಿಗೆ ಈ ವಿಚಾರ ಗೋಷ್ಠಿ ಮುಕ್ತಾಯಗೊಳ್ಳಲಿದೆ ಎಂದು ನಮ್ಮ ದೇವಸ್ಥಾನ ಪ್ರಕಟಣೆಯಲ್ಲಿ ತಿಳಿಸಿದೆ.

SCROLL FOR NEXT