ಜಿಲ್ಲಾ ಸುದ್ದಿ

ಕಾಳಸಂತೆಯಲ್ಲಿ ಹಾಲಿನ ಪುಡಿ ಪ್ಯಾಕೆಟ್ ಮಾರಾಟ

Sumana Upadhyaya

ಕೆ.ಆರ್.ನಗರ: ಅಂಗನವಾಡಿಗಳ ಮೂಲಕ 3ರಿಂದ 6 ವರ್ಷದ  ಮಕ್ಕಳಿಗೆ ನೀಡುವ ಹಾಲಿನ ಪುಡಿ ಪ್ಯಾಕೆಟ್ ಗಳನ್ನು  ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ  ಅಂಗಡಿ ಮಾಲೀಕನನ್ನು  ಮಹಿಳಾ ಮತ್ತು  ಮಕ್ಕಳ ಇಲಾಖೆ ಅಧಿಕಾರಿಗಳು ಮಾಲು  ಸಮೇತ ಹಿಡಿದು, ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ.

ಪಟ್ಟಣದ ಬಜಾರ್ ರಸ್ತೆ ಮೊದಲನೇ ಕ್ರಾಸ್ ನಲ್ಲಿರುವ ಪ್ರಾವಿಷನ್ ಸ್ಟೋರ್ ನ ಮಾಲೀಕ ಕೇರಳ ಮೂಲದ ರಫೀಕ್ ಹಲವಾರು ದಿನಗಳಿಂದ  ಹಾಲಿನ  ಪುಡಿ  ಪ್ಯಾಕೆಟ್ ಗಳನ್ನು  ಮಾರಾಟ ಮಾಡುತ್ತಿದ್ದ.  ಈ ಬಗ್ಗೆ ಸಿಡಿಪಿಒ ಸದಾಶಿವಪ್ಪ ದಾಳಿ ನಡೆಸಿ ಪೊಲೀಸರಿಗೆ ದೂರು  ನೀಡಿದ್ದಾರೆ.

ಮಾಲೀಕನನ್ನು ಬಂಧಿಸಿರುವ ಪಟ್ಟಣ ಪೊಲೀಸರು ಎಫ್ ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇಲಾಖೆ ವತಿಯಿಂದ ಅಂಗನವಾಡಿಗಳ ಮೂಲಕ ಮಕ್ಕಳ ಮನೆಗಳಿಗೆ ವಿತರಿಸುವ 258 ಬೆಲೆ  ಬಾಳುವ ಅರ್ಧ ಕೆ.ಜಿ.  ತೂಕದ  20  ಹಾಲಿನ ಪೌಡರ್ ಪ್ಯಾಕೆಟ್ ಗಳನ್ನು  ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

 ಅಂಗಡಿ    ಮಾಲೀಕ ರಫೀಕ್ ಅವರನ್ನು ಪ್ರಶ್ನಿಸಿದಾಗ  ಪಟ್ಟಣದ ಕಿರಣ್  ಎಂಬುವವರು 60ರಿಂದ 70  ಪ್ಯಾಕೆಟ್ ಗಳನ್ನು ನನ್ನ ಅಂಗಡಿ ಸೇರಿದಂತೆ  ಹಲವಾರು  ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದಾರೆ.  ನಾವು ಇವುಗಳನ್ನು ಐಸ್ ಕ್ರೀಂ ಮಾಡುವ ಕಾರ್ಖಾನೆಗಳಿಗೆ ಲಾಭಕ್ಕೆ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ.

SCROLL FOR NEXT