ಜಿಲ್ಲಾ ಸುದ್ದಿ

ಕೊಳೆಗೇರಿ ನಿವಾಸಿಗಳಿಗೆ ವಾಸದ ಜಾಗ ಮಾಲೀಕತ್ವ

Srinivasamurthy VN

ಬೆಂಗಳೂರು: ರಾಜ್ಯದ ಘೋಷಿತ ಕೊಳೆಗೇರಿಗಳ 2.5ಲಕ್ಷ ಅಧಿಕ ನಿವಾಸಿಗಳಿಗೆ ವಾಸದ ಜಾಗ ಮಾಲೀಕತ್ವ ನೀಡಲು ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿ ತೀರ್ಮಾನಿಸಿದೆ.

ರಾಜ್ಯದಲ್ಲಿ ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ಜಾಗದಲ್ಲಿರುವ ಘೋಷಿತ ಕೊಳೆಗೇರಿಗಳಿದ್ದು, ಅಲ್ಲಿನ ಫಲಾನುಭವಿಗಳಿಗೆ ಜಾಗ ಮಾಲೀಕತ್ವ ನೀಡಬೇಕಿದೆ. ಇದಕ್ಕೆ ಪೂರಕವಾಗಿ ಆ ಜಾಗಗಳ ಮಾಲೀಕತ್ವವನ್ನು ಪಡೆದು ಮಂಡಳಿ ಫಲಾನುಭವಿಗಳ ಹೆಸರಿಗೆ ಕ್ರಮಪತ್ರ ನೀಡಲಿದೆ. ಇಂಥ ಪ್ರಮುಖ ವಿಚಾರ ಸೇರಿದಂತೆ ಸುಮಾರು 157 ವಿಷಯಗಳನ್ನು ಗುರುವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷ ಪಿ.ಆರ್. ರಮೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಗರ ಪಾಲಿಕೆ, ನಗರಸಭೆ ಮತ್ತು ಸರ್ಕಾರ ಜಾಗಗಳಲ್ಲಿರುವ ಘೋಷಿತ ಕೊಳೆಗೇರಿಗಳ ಮಾಲೀಕತ್ವನ್ನು ಮಂಡಳಿಗೆವಹಿಸುವಂತೆ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲು ತೀರ್ಮಾನಿಸಲಾಗಿದ್ದು,

ಇದಕ್ಕೆ ಸರ್ಕಾರ ಒಪ್ಪಿಗೆ ಸಿಗುತ್ತಿದ್ದಂತೆ ನಿವಾಸಿಗಳಿಂದ ನಿಗದಿ ಕನಿಷ್ಠ ಶುಲ್ಕ ಪಡೆದು ಕ್ರಮಯಪತ್ರ ನೀಡಲಾಗುತ್ತದೆ ಎಂದು ಅವರು ಹೇಳಿದರು. ಇದರೊಂದಿಗೆ ನಗರ ಪ್ರದೇಶಗಳಲ್ಲಿ ನಾಗರಿಕ ಪ್ರಜ್ಞೆ ಮತ್ತು ಉತ್ತಮ ಶಿಕ್ಷಣ ಒದಗಿಸಲು ಮಂಡಳಿ ಇದೇ ಪ್ರಥಮ ಬಾರಿಗೆ ಪುಸ್ತಕಗಳನ್ನು ಮುದ್ರಿಸಿ ಹಂಚಿಕೆ ಮಾಡಲಿದೆ. ಅಂದರೆ ಸರ್ಕಾರಿ, ಅರೆ ಸರ್ಕಾರಿ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ಸುಮಾರು 1.10 ಲಕ್ಷ ಇದ್ದಾರೆ. ಇವರಲ್ಲಿ ಪರಿಸರ ಮತ್ತು ನಾಗರಿಕ ಬದುಕಿನ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಆದ್ದರಿಂದ ಮಂಡಳಿ ಪುಸ್ತಕಗಳನ್ನು ಮುದ್ರಿಸಿ ಶಾಲೆಗಳಿಗೆ ವಿತರಿಸಲಾಗುವುದು ಎಂದು ರಮೇಶ್ ವಿವರಣೆ ನೀಡಿದರು.

SCROLL FOR NEXT