ಸಮ್ಮೇಳನದ ಆಹ್ವಾನ ಪತ್ರಿಕೆ 
ಜಿಲ್ಲಾ ಸುದ್ದಿ

ಜೂ 23 ರಿಂದ ಮಹಾಪುರಾಣಗಳ ಸಂದೇಶದ ಬಗ್ಗೆ ರಾಷ್ಟ್ರಮಟ್ಟದ ಸಮ್ಮೇಳನ

ಭಾರತೀಯ ವಿದ್ಯಾಭವನ ಹಾಗೂ ಇಸ್ಕಾನ್ ಸಂಸ್ಥೆ ಮಹಾಪುರಾಣಗಳ ಸಂದೇಶ ಎಂಬ ರಾಷ್ಟ್ರಮಟ್ಟದ ಸಮ್ಮೇಳನವನನ್ನು ಆಯೋಜಿಸಿವೆ.

ಬೆಂಗಳೂರು ವೇದ ಸಂವಾದ, ಉಪನಿಷತ್ ಸಂದೇಶ ಸಮ್ಮೇಳನವನ್ನು ಹಮ್ಮಿಕೊಂಡಿದ್ದ ಭಾರತೀಯ ವಿದ್ಯಾಭವನ ಹಾಗೂ ಇಸ್ಕಾನ್ ಸಂಸ್ಥೆ ಮಹಾಪುರಾಣಗಳ ಸಂದೇಶ ಎಂಬ ರಾಷ್ಟ್ರಮಟ್ಟದ ಸಮ್ಮೇಳನವನನ್ನು ಆಯೋಜಿಸಿವೆ.

ಕಾರ್ಡ್ ರಸ್ತೆಯಲ್ಲಿರುವ ಹರೆಕೃಷ್ಣ ಹಿಲ್ ನಲ್ಲಿ ಜೂ.23 - 27 ವರೆಗೂ ಈ ಮಹಾಸಮ್ಮೇಳನ ನಡೆಯಲಿದ್ದು, ದೇಶದ ವಿವಿಧ ಭಾಗಳಿಂದ ವಿದ್ವಾಂಸರು ಪಾಲ್ಗೊಂಡು ಮಹಾಪುರಾಣಗಳ ಸಂದೇಶಗಳ ಬಗ್ಗೆ ಮಾತನಾಡಲಿದ್ದಾರೆ. ಉಪನ್ಯಾಸದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.  ಜೂ.23 ರಂದು ಬೆಳಿಗ್ಗೆ 11 ಗಂಟೆಗೆ ರಾಷ್ಟ್ರಮಟ್ಟದ ಮಹಾಸಮ್ಮೇಳನ ಉದ್ಘಾಟನೆಯಾಗಲಿದ್ದು, ಪ್ರತಿ ದಿನ ಬೆಳಿಗ್ಗೆ 9 -7 ವರೆಗೆ ಎರಡು ಸೆಷನ್ ಗಳಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಮಾಜಿ ಕೇಂದ್ರ ಸಚಿವ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಸಾಹಿತಿ ವೀರಪ್ಪ ಮೊಯ್ಲಿ, ಭಾರತೀಯ ವಿದ್ಯಾಭವನದ ಕಾರ್ಯದರ್ಶಿ ಕೆ.ಜಿ ರಾಘವನ್, ವಿದ್ವಾಂಸರಾದ ಶತಾವಧಾನಿ ಗಣೇಶ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪುರಾಣಗಳಲ್ಲಿ ಪರಿಸರ(ಎಕೋಲಜಿ ಇನ್ ಪುರಾಣ) ಎಂಬ ವಿಷಯದ ಬಗ್ಗೆ ಜೂ.23 ರಂದು ಸಂಜೆ 5 ಗಂಟೆಗೆ ಶತಾವಧಾನಿ ಡಾ.ಆರ್ ಗಣೇಶ್ ಮಾತನಾಡಲಿದ್ದಾರೆ. www.intlarts.org ಎಂಬ ವೆಬ್ ಸೈಟ್ ನಲ್ಲಿ ಕಾರ್ಯಕ್ರಮವನ್ನು ವೆಬ್ಕಾಸ್ಟ್ ಮಾಡಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT