ಜಿಲ್ಲಾ ಸುದ್ದಿ

ಬರಲಿದೆ ಸಬ್ ಅರ್ಬನ್ ರೈಲು

Sumana Upadhyaya

ಬೆಂಗಳೂರು: ಬೆಂಗಳೂರು ಉಪನಗರ ರೈಲು ಸಂಚಾರ ವ್ಯವಸ್ಥೆಯ ಕಾಮಗಾರಿ ಆರಂಭಕ್ಕೆ ಸಿದ್ಧತೆ ನಡೆದಿದೆ ಎಂದು ಕೇಂದ್ರ ರೈಲ್ವೆ ಸಚಿವ ಪ್ರಭಾಕರ್ ಪ್ರಭು ತಿಳಿಸಿದ್ದಾರೆ.

ಉಪ ನಗರ ರೈಲು ಯೋಜನೆ ಬಗ್ಗೆ ಕೇಂದ್ರ ಹಣಕಾಸು ಸಚಿವರ ಜತೆ ಚರ್ಚಿಸಿ, ರೈಲ್ವೆ ತಾಂತ್ರಿಕ ಸಂಸ್ಥೆಗಳಿಂದ ಯೋಜನೆಯ ಸಲಹೆ ಪಡೆಯಲಾಗುತ್ತಿದೆ ಎಂದು ಶನಿವಾರ ನಗರ ರೈಲು ನಿಲ್ದಾಣದ ಎರಡನೇ ಪ್ರವೇಶ ದ್ವಾರದ ಬಳಿ ನೂತನ ಟಿಕೆಟ್ ಕೌಂಟರ್, ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಸಬ್ ಅರ್ಬನ್ ರೈಲಿಗೆ ಒತ್ತು: ಸಂಚಾರ ದಟ್ಟಣೆ, ವಾಹನಗಳ ಹೆಚ್ಚಳದಿಂದಾಗಿ ಬೆಂಗಳೂರು ನಗರದಲ್ಲಿ ತೀವ್ರ ಸಮಸ್ಯೆಗಳು ಉಂಟಾಗುತ್ತಿವೆ. ಇದಕ್ಕೆ ಸಮಗ್ರ ಸಮೂಹ ಸಾರಿಗೆಯಾಗಿರುವ ಉಹ ನಗರ ರೈಲು ಸಂಚಾರವೇ (ಸಬ್ ಅರ್ಬನ್) ಪರಿಹಾರ. ಹಲವು ವರ್ಷಗಳ ಬೇಡಿಕೆಯನ್ನು ಆದಷ್ಟು ಬೇಗ ಆದ್ಯತೆ ಮೇಲೆ ಈಡೇರಿಸಲಾಗುವುದು. ಈ ಮೂಲಕ ಬೆಂಗಳೂರಿಗರ ಕನಸು ನನಸಾಗಿಸಲು ಯತ್ನಿಸಲಾಗುವುದು.

ಮುಂಬೈಗಿಂತಲೂ ಉನ್ನತ ದರ್ಜೆಯ ಆಧುನಿಕ ತಂತ್ರಜ್ಞಾನ, ವೇಗ ಒಳಗೊಂಡ ಸಮೂಹ ಸಾರಿಗೆ ವ್ಯವಸ್ಥೆ ಕಲ್ಪಿಸಲು ರೈಲ್ವೆ ಇಲಾಖೆ ಬದ್ಧವಾಗಿದೆ. ಆದರೆ, ವಿದ್ಯುತ್ ಚಾಲಿತ ಕೋಚ್ ಗಳು ಸಂಚರಿಸುವ ಕಾರಣ ನಗರದಲ್ಲಿ ವಿದ್ಯುತ್ ಚಾಲಿತ ರೈಲು ಎಂಜಿನ್ ನಿರ್ವಹಣೆಗೆ ಯಾರ್ಡ್ ಗಳ ಕೊರತೆ, ಪ್ಲಾಟ್ ಫಾರ್ಮ್ ಗಳಲ್ಲಿ ಬದಲಾವಣೆ, ಹಳಿ ವಿದ್ಯುತ್ತೀಕರಣ ಸೇರಿದಂತೆ ಹಲವು ಸಮಸ್ಯೆಗಳಿವೆ. ಹೀಗಾಗಿ ಈ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸಬೇಕಿದೆ ಎಂದರು.

SCROLL FOR NEXT